ಭಕ್ತರ ಬಿನ್ನಹ ಪರಾಕು.....
ಭಾಗ್ಯದ ನಿಧಿಯೇ ಪರಾಕು ||ಪ||
ಶೇಷಶಯನ ಶ್ರೀನಿವಾಸ ಪರಾಕು
ಸಾಸಿರನಾಮದ ಒಡೆಯ ಪರಾಕು
ದೋಷ ದುರಿತಹರ ಸ್ವಾಮಿ ಪರಾಕು
ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು || (ಭಕ್ತರ)
ನಿನ್ನ ನಂಬಿದೆ ನೀರಜಾಕ್ಷ ಪರಾಕು
ನಿನ್ನ ರನ್ನೆಯ ಒಲುಮೆ ಬೇಕು ಪರಾಕು
ಅನ್ಯರ ಸಂಗವನೊಲ್ಲೇ ಪರಾಕು
ಎನ್ನಪೇಕ್ಷಯ ಸಲಿಸೋ ಪರಾಕು || (ಭಕ್ತರ)
ರತಿಪತಿಪಿತ ಮಾಧವನೇ ಪರಾಕು
ಅತಿರೂಪ ಎನ್ನಯ್ಯನೇ ಪರಾಕು
ಹಿತ ಉಂಟಾದರೇ ಕಾಯೋ ಪರಾಕು
ಕರ್ತೃ ಹೆಳವನಕಟ್ಟೆ ರಂಗ ಪರಾಕು || (ಭಕ್ತರ)
****