Showing posts with label ದಾಸನಾಗೋ ನೀ ಶಿಷ್ಯನಾಗೋ ಏಸು ಕಾಯಂಗಳ ಕಳೆದು purandara vittala. Show all posts
Showing posts with label ದಾಸನಾಗೋ ನೀ ಶಿಷ್ಯನಾಗೋ ಏಸು ಕಾಯಂಗಳ ಕಳೆದು purandara vittala. Show all posts

Friday 6 December 2019

ದಾಸನಾಗೋ ನೀ ಶಿಷ್ಯನಾಗೋ ಏಸು ಕಾಯಂಗಳ ಕಳೆದು purandara vittala

ರಾಗ ಕಾಂಭೋಜ ಏಕತಾಳ

ದಾಸನಾಗೋ ನೀ ಶಿಷ್ಯನಾಗೋ ||ಪ||
ಏಸು ಕಾರ್ಯಂಗಳ (ಕಾಯಂಗಳ ?) ಕಳೆದು ಎಂಭತ್ತು -
ನಾಲ್ಕು ಲಕ್ಷ ಜೀವರಾಶಿಯನ್ನೆ ದಾಟಿ ||ಅ||

ಆಶಾಪಾಶ ಎಂಬೋ ಪರಮಾಬ್ಧಿಯೊಳಗೆ ಮುಳುಗಿ ಮಾಯಾ-
ಪಾಶಕ್ಕೊಳಗಾಗದೇ ಮಾನ್ಯನಾಗೊ , ನೀ ಧನ್ಯನಾಗೊ ||

ಮಾಯದ ಗೂಡಿಗೆ ಸಿಕ್ಕಿ ಘಡಿಘಡಿಘಡಿಸುತ್ತ ರಘು-
ರಾಮನೆಂಬೊ ವಸ್ತುವನ್ನು ಚೆನ್ನಾಗಿ ನಂಬೊ , ನೀನಾಗಿ ನಂಬೊ ||

ಈಗಲೋ ಆಗಲೋ ಇನ್ಯಾವಗಾಗಲೋ ಈ ಸಂಸಾರ
ಹೋಗುವ ಜೀವಕ್ಕೆ ನಿನಗೆ ತಂದೆ ಯಾರೊ , ತಾಯಿ ಯಾರೊ ||

ಇತ್ತಲೋ ಅತ್ತಲೋ ಇನ್ನೆತ್ತಲೋ ಈ ಸಂಸಾರ
ಮೃತ್ಯು ಇದು ನಿತ್ಯವೆಂದು ನಂಬಬೇಡೊ , ನೀ ನಂಬಬೇಡೊ ||

ಸೋರೆಯೊಳಗೆ ಮದ್ಯವ ತುಂಬಿ ಮೇಲೆ ಗಂಧಾಕ್ಷತೆ ಹಚ್ಚಿ
ಮೇಲೆ ಹುವ್ವಿನ ಸರವನೆ ಧರಿಸಿದಂತೆ , ನೀ ಮರೆಸಿದಂತೆ ||

ಮೂರುಬಾರಿ ಶರಣು ಮಾಡಿ ನೀರವೊಳಗೆ ಮುಳುಗಿ
ಪರನಾರೇರ ಮನಕ್ಕೆ ಸೆರೆಯ ಮಾಡಿ , ನೀ ಗುರಿಯ ಮಾಡಿ ||

ನಾರಾಯಣ ಅಚ್ಯುತ ಅನಂತ ಕೇಶವ ಕೃಷ್ಣನ್ನ ನಂಬಿ ಭಜಿಸೊ
ಪುರಂದರವಿಠಲನ ಲಂಡ ಜೀವವೆ , ನೀ ಭಂಡ ಜೀವವೆ ||
*******