Showing posts with label ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ ಜನರೊಳಗೆ ನಾನೋರ್ವ ಮನಜಾಧಮ shyamasundara. Show all posts
Showing posts with label ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ ಜನರೊಳಗೆ ನಾನೋರ್ವ ಮನಜಾಧಮ shyamasundara. Show all posts

Wednesday, 1 September 2021

ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ ಜನರೊಳಗೆ ನಾನೋರ್ವ ಮನಜಾಧಮ ankita shyamasundara

 ..

ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ

ಜನರೊಳಗೆ ನಾನೋರ್ವ ಮನಜಾಧಮ ಪ


ಸ್ನಾನ ಜಪ ತಪ ಮೌನ ಧ್ಯಾನ ವರಮಂತ್ರಗಳ

ಖೂನವಿಲ್ಲದೆ ಜ್ಞಾನ ಹೀನನಾಗಿ

ಏನು ಹೇಳಲಿ ದುಷ್ಟ ಮಾನಿನಿಗೆ ಮನಸೋತು

ಶ್ವಾನನಂದದಿ ದಿನವ ನಾ ನೂಕಿದವನಯ್ಯ 1


ಹತ್ತೆರಡು ಮತೈದು ಗಾತ್ರದೊಳು ಧರಿಸದಲೆ

ಸೋತ್ತುಮರ ಸತ್ಯಂಗನವು ಮಾಡದೆ

ಚಿತ್ತ ಚಂಚಲನಾಗಿ ಲೆತ್ತ ಪಗಡಿಗಳಾಡಿ

ಕತ್ತೆಯಿಂದದಿ ವ್ಯರ್ಥ ಹೊತ್ತು ಕಳೆದವ ನಾನು 2


ನೇಮಪೂರ್ವಕ ಒಂದು ಯಾಮವಾದರು ಮನದಿ

ಶಾಮಸುಂದರ ಧ್ಯಾನ ಮಾಡದೆ

ಕಾಮಾರಿ ಷಡ್ವೈರಿ ಸ್ತೋಮಕ್ಕೆ

ಭೂಮಿಯೊಳು ಜಡವಾದ ನಾಮದಲಿ ಚರಿಸುವೆನು3

***