ನಡೆದು ಬಾರಯ್ಯ ಮನೆಗೆ ವೆಂಕಟರಾಯ
ನಡೆದು ಬಾರಯ್ಯ ಮನೆಗೆ||
ನಡೆದು ಬಾರಯ್ಯ ಭವ
ಕಡಲಿಗೆ ಕುಂಭಸಂಭವ|
ಸಡಗರದಿಂದ ಮೆಲ್ಲಡಿಯನಿಡುತ ಬೇಗ|
ಎಡಬಲದಲಿ ನಿನ್ನ ಮಡದಿಯರಿಂದೊಪ್ಪುತ
ತಡಮಾಡದೆ ಬಾ ಮೃಡಸಖ ವೆಂಕಟ …ನಡೆದು ||
ವಿಜಯದಶಮಿ ಆಶ್ವಿಜಮಾಸ ಶುದ್ಧದಲ್ಲಿ
ನಿಜರಥಾರೂಢನಾಗಿ, ಸುಜನರಿಂದೊಡಗೂಡಿ
ಗಜಸಿಂಹ ,ಮಯೂರ, ದ್ವಿಜಸಿಂಗ ಸಾರಂಗ
ಮಜಭಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಾಡೆ
ಗಜಮುಖನಯ್ಯನು ನಿಜಾನಂದದಲ್ಲಾಡೆ
ತ್ರಿಜಗಶ್ರೇಷ್ಠ ದ್ವಿಜರಾಜರು ಜಯವೆನ್ನೆ
ಕುಜನರೆದೆಯ ಮೆಟ್ಟಿ ರಜತಮ ಕಳೆಯುತ ನಡೆದು….||
ದಕ್ಷಿಣ ದಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಅಕ್ಷೋಹಿಣಿ ಬಲ ,ನಿನ್ನುಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆ ನೀನಾಕ್ಷಣೊದೊಳು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ|
ತಕ್ಷಕ ಸುತ ಸಹಸ್ರಾಕ್ಷನ ಮಗನನು
ಭಕ್ಷಿಸಬರುತಿರೆ ಈಕ್ಷಿಸಿ ರಥವನು
ತಕ್ಷಣ ನೆಲಕ್ಕೊತ್ತಿ ಮೋಕ್ಷವಗೈಸಿದೆ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವ…..||ನಡೆದು ಬಾರಯ್ಯ||
ಅಂಬುಜಾಕ್ಷನೆ ಬಾರೊ ಅಂಬುಜ ವದನನೆ
ಅಂಬುಜಾಲಯೆಪತೆ ಅಂಬುಜನಾಭನೆ
ಅಂಬುಜಭವಜನಕ ಅಂಬುಜಾರಿಧರ
ಅಂಬುಜ ನಿವಾಸ ಅಂಬುಜ ಮಿತ್ರ ತೇಜ|
ಕೊಂಬು ಕಹಳೆಗಳು ಬೊಂಭೋರಿಡುತಿರೆ
ತುಂಬುರು ನಾರದರು ಬಾಗಿ ಪಾಡಲು
ಅಂಬರದಲಿ ವಾದ್ಯ ತುಂಬಿ ಧಿಂಧಿಮಿರೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||
ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನ ಮನ ಕುಮುದಕೆ ಚಂದ್ರಮನೆ
ಕೇಳೋ ಎನ್ನ ದುಮ್ಮನ ಪರಿಹರಿಸಿ
ಕೊಡು ಒಮ್ಮನ ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಮನ ನಿನ್ನದು ಹೇ ಮನಸಿಜ ಜನಕ
ಸುಮನಸರೊಡೆಯ ಬೊಮ್ಮನ ಪೆತ್ತನೆ
ಸುಮ್ಮನೆ ತಡವೇಕೆ ನಿಮ್ಮನೆಯವರೊಡನೆ
ಹಿಮ್ಮನ ಮಾಡದೆ ಗಮ್ಮನೆ ಬಾ ವೆಂಕಟ ||
ಪರಿಪರಿ ಬಗೆಯಿಂದ ಕರವ ಮುಗಿದು ನಿನ್ನ
ಕರೆದರೆ ಬಾರದ ಗರುವತನವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವ ನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತ ರಕ್ಷಾಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯಲು ||
***
Nadedu barayya bhava kadalige kumbhasambhava
sadagaradimda ni melladiyaniduta baro||p||
Edabaladali ninna madadiyarimdopputa
tadamadade ba mrudasakha venmkata ||a||
vijayadashami ashvija shuddhamasadalli
nija ratharudhanagi sujanarindarodagudi
gajasimha mayura dvija singa saranga
maja bhapure enalu trijagavu taleduge
ajanu stutiya made rujaganadipa pade
gajamukhanayyanu nijanandadalade
bhujagashreshtanu dvijaraja jayavenne
kujanaredeya metti rajatama kaleyuta ||1||
dakshina dikkinalli rakshasa samuha onda
dakshohini bala ninnupekshe madutali
pakshivahananemi ninakshanadi khalara
shikshisi sujanara rakshisi meredayya
takshaka naranannu bhakshisa barutire ikshisi
takshana nelakottide lakshmishane akshaya phaladayaka
kukshiyolage jagarakshipa vishwa ||2||
paripariyindali karava mugidu stutise
karedare barada garuvatanavu yako
kariraja more ide siri gehlade bande
kariraja ava ninna kiriyappana maganeno
sharanagata rakshamani ennuva
birudu bekadare sarasarrane barayya
garudagamana gopalavithalareya…..
Karuvina moregavu neredante poreyu ||3||
***
ನಡೆದು ಬಾರಯ್ಯ ಭವ ಕಡಲಿಗೆ ಕುಂಭಸಂಭವ||
ಸಡಗರದಿಂದ ಮೆಲ್ಲಡಿಯನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರೊಡಗೂಡಿ
ತಡಮಾಡದೆ ಬಾ ಮ್ರಡಸಖ ವೆಂಕಟ …ನಡೆದು ||
ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ
ನಿಜರಥಾರೂಢನಾಗಿ, ಸುಜನರಿಂದ ಒಪ್ಪುತ
ಗಜಸಿಂಹ ,ಮಯೂರ, ಧ್ವಿಜಸಿಂಗ ಸಾರಂಗ
ಮಜಬಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ
ಗಜಮುಖನಯ್ಯ ನಿಜಾನಂದದಲಾಡೆ
ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ
ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು||
ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಒಂದಕ್ಷೋಹಿಣಿ ಬಲ ,ನಿನ್ನ ಅಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆಣಿಸಿ ಅ ಕ್ಷಣೊದೊಲು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ
ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ
ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ…..||ನಡೆದು ಬಾರಯ್ಯ||
ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನೆ ,ಮನ ಕುಮುದಕೆ
ಚಂದ್ರಮನೆ ಕೇಳು ಎನ್ನ ದುಮ್ಮನವನೆ ಪರಿಹರಿಸಿ
ಒಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಕೊಂಬು ಕಹಳೆಗಳು ಬೊಂಬೋರಿಡುತಿರೆ
ತುಂಬುರು ನಾರದ ಇಂಪಾಗಿ ಪಾಡಲು
ಅಂಭರದಲಿ ವಾದನ ತುಂಬಿ ಧಿಮಿಕ್ಕೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||
ಪರಿಪರಿ ಬಗೆಯಿಂದ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದೆ ಗರ್ವವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತರಕ್ಷಕ ಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯೊ ||
*******