ರಾಗ ಹಿಂದೋಳ ಆದಿತಾಳ
2nd Audio by Mrs. Nandini Sripad
ಶ್ರೀಮಹಾಲಕುಮಿದೇವಿಯೇ ಕೋಮಲಾಂಗಿಯೇ ।
ಸಾಮಗಾಯನಪ್ರಿಯೇ ॥ ಪ ॥
ಹೇಮಗರ್ಭ ಕಾಮಾರಿ ಶಕ್ರ ಸುರ - ।
ಸ್ತೋಮವಂದಿತಳೆ ಸೋಮ ಸೋದರಿಯೆ ॥ ಅ ಪ ॥
ಬಟ್ಟುಕುಂಕುಮನೊಸಲೊಳೇ । ಮುತ್ತಿನ ಹೊಸ ।
ಕಠ್ಠಾಣಿತ್ರಿವಳಿಕೊರಳೊಳೇ ।
ಇಟ್ಟ ಪೊನ್ನೋಲೆಕಿವಿಯೋಳೇ ಪವಳದ ಕೈಯ ।
ಕಟ್ಟುಕಂಕಣ ಕೈಬಳೆ ॥
ತೊಟ್ಟ ಕುಪ್ಪುಸ ಬಿಗಿದುಟ್ಟ ಪೀತಾಂಬರ ।
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿ ಗೆಜ್ಜೆ ।
ಬೆಟ್ಟಿಲಿ ಪೊಳೆವುದು ಮೇಂಟಿಕೆ ಕಿರುಪಿಲ್ಲಿ ।
ಇಟ್ಟು ಶೋಭಿಸುವ ಅಷ್ಟಸಂಪನ್ನೆ ॥ 1 ॥
ಸಕಲಶುಭಗುಣಭರಿತಳೆ । ಏಕೋದೇವಿಯೆ ।
ವಾಕುಲಾಲಿಸಿ ನೀ ಕೇಳೆ ।
ನೋಕನೀಯನ್ನ ಮಹಲೀಲೆ ಕೊಂಡಾಡುವಂಥ ।
ಏಕಮನವ ಕೊಡು ಶೀಲೆ ॥
ಬೇಕು ಬೇಕು ನಿನ್ನ ಪತಿಪದಾಬ್ಜವ ।
ಏಕಾಂತದಿ ಪೂಜಿಪರ ಸಂಗವ ಕೊಡು ।
ಲೋಕದ ಜನರಿಗೆ ನಾ ಕರವೊಡ್ಡದಂತೆ ।
ನೀ ಕರುಣಿಸಿ ಕಾಯೆ ರಾಕೆಂದುವದನೆ ॥ 2 ॥
ಮಂದರೋದ್ಧರನರಸಿಯೆ । ಇಂದಿರೆ ಎನ್ನ ।
ಕುಂದುದೋಷಗಳಳಿಯೆ ।
ಅಂದ ಸೌಭಾಗ್ಯದ ಸಿರಿಯೆ ತಾಯೇ ನಾ ನಿನ್ನ ।
ಕಂದನು ಮುಂದಕ್ಕೆ ಕರೆಯೆ ॥
ಸಿಂಧುಶಯನ ಸಿರಿ ವಿಜಯವಿಟ್ಠಲರೇಯ ।
ಎಂದೆಂದಿಗೆ ಮನದಿಂದಗಲದೆ ಆ - ।
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ ।
ವಂದಿಸಿ ಪೇಳಮ್ಮ ಸಿಂಧುಸುತೆಯಳೆ ॥ 3 ॥
***
Shreemahaalakumideviye komalaangiye |
Saamagaayana priyale || pa ||
Hemagarbha kaamaari shakra sura stoma |
Vanditale soma sodariye || a. Pa. ||
Batta kunkuma nosalole muttina hosa |
Kathyaani trivali koralole |
Itta ponnole kiviyole pavalada kaiya |
Kattu kankana kai bale ||
Totta kubusa bigidutta peetaambara |
Ghatti odyaana kaalandige ruligejje |
Battili polevudu mentike kirupille |
Ittu shobhisuva ashta sampanne || 1 ||
Sakala shubhaguna bharitale ekodevi |
Vaaku laalisi nee kele |
Lokadi ninna maha leele kondaaduvantha |
Eka manava kodu sheele |
Beku beku ninna pati paadaabjava |
Ekaantadi poojipara sangava kodu |
Lokada janarige naa kara vaddadante |
Nee karunisu taay raakendu vadane || 2 ||
Mandaradharana arasiye indire enna |
Kundu doshagalaliye |
Anda soubhaagyada siriye taaye naa ninna |
Kandanu mundake kareye |
Sindhu shayana siri vijayaviththalareya |
Endendigoo manadindagalade |
Aanandadi bamdu munde kuniyuvante |
vandisi pelammaa Sindhu suteyale ||3 ||
***
pallavi
shrI mahAlakumi dEviye kOmalAngiye sAmagAyana priyaLe hEmagarbha kAmAri shakrasura stOmavanditaLe sOmasodariye
caraNam 1
baTTakumkuma nosaloLe muttina hosa kaThThANi trivaLi koraLoLe
iTTa ponnOle kiviyoLe pavaLada kayya kaTTu kankaNa kai baLe
toTTa kubusa bigiduTTa pItAmbara ghaTTi vaDyANa kAlanduge ruLigejje
beTTili poLevudu mEnTake kurupilli iTTu shObhisuva aSTa sampanne
caraNam 2
sakala shubha guNa bharitaLe EkO dEviye vAku lAlisi nI kELe
nOkanIyenna mahalIle koNDADuvantha Eka manava koDu shIle
bEku bEku ninna patipAdAbjava EkAntadi pUjipara sangha koDu
lOkada janarige nAkai yoDDadante nI karuNisu tAye rAkenduvadane
caraNam 3
mandaradharanarasiye indire enna kundu dOSagaLaLiye
anda soubhaagyada siriye tAye nA ninna kanda mundakke kareye
sindhu shayana siri vijayaviThalarEya endendige manadindagalade
Anandadindali bandu munde kuNiyuvante vandisi pELamma sindhu suteyaLe?
***
ವ್ಯಾಖ್ಯಾನ
ಶ್ರೀ ವಿಜಯದಾಸರ ರಚನೆ
ಶ್ರೀಮಹಾಲಕುಮಿದೇವಿಯೇ, ಕೋಮಲಾಂಗಿಯೇ
ಸಾಮಗಾಯನಪ್ರಿಯೇ ॥ ಪ ॥
ಹೇಮಗರ್ಭಕಾಮಾರಿಶಕ್ರಸುರ -
ಸ್ತೋಮವಂದಿತಳೆ ಸೋಮಸೋದರಿಯೆ ॥ ಅ ಪ ॥
ಕೋಮಲಾಂಗಿಯೇ = ಕೋಮಲದೇಹವುಳ್ಳವಳೇ (ಸುಂದರಿ); ಸಾಮಗಾನಪ್ರಿಯೆ = ಸಾಮ (ವೇದ)ಗಾನದಿಂದ ಪ್ರೀತಳಾಗುವಳೇ;
ಹೇಮಗರ್ಭ = ಹಿರಣ್ಯಗರ್ಭ (ಬ್ರಹ್ಮದೇವ); ಕಾಮಾರಿ = ರುದ್ರ; ಶಕ್ರಸುರಸ್ತೋಮ = ಇಂದ್ರಾದಿದೇವಗಣದಿಂದ; ಸೋಮಸೋದರಿಯೆ = ಚಂದ್ರಸೋದರಿ ಶ್ರೀಲಕ್ಷ್ಮೀದೇವಿ (ಅಮೃತಕ್ಕಾಗಿ ನಡೆದ ಸಮುದ್ರಮಥನಕಾಲದಲ್ಲಿ ಇಬ್ಬರೂ, ಚಂದ್ರನೂ - ಶ್ರೀಲಕ್ಷ್ಮಿಯೂ (ರೂಪಾಂತರದಿಂದ) ಪ್ರಕಟರಾದ್ದರಿಂದ ಸೋದರ-ಸೋದರೀಭಾವವೆಂದು ತಿಳಿಯಬೇಕು ).
ಬಟ್ಟುಕುಂಕುಮನೊಸಲೊಳೇ, ಮುತ್ತಿನ ಹೊಸ -
ಕಠ್ಠಾಣಿತ್ರಿವಳಿಕೊರಳೊಳೇ ।
ಇಟ್ಟ ಪೊನ್ನೋಲೆಕಿವಿಯೋಳೇ ಪವಳದ ಕೈಯ -
ಕಟ್ಟುಕಂಕಣ ಕೈಬಳೆ ।
ತೊಟ್ಟ ಕುಪ್ಪುಸ ಬಿಗಿದುಟ್ಟ ಪೀತಾಂಬರ
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿ ಗೆಜ್ಜೆ
ಬೆಟ್ಟಿಲಿ ಪೊಳೆವುದು ಮೇಂಟಿಕೆ ಕಿರುಪಿಲ್ಲಿ
ಇಟ್ಟು ಶೋಭಿಸುವ ಅಷ್ಟಸಂಪನ್ನೆ ॥ 1 ॥
ಬಟ್ಟುಕುಂಕುಮ = ಕುಂಕುಮದ ಬಟ್ಟು; ನೊಸಲೊಳೇ = ಹಣೆಯಲ್ಲುಳ್ಳವಳೇ; ಮುತ್ತಿನ ಹೊಸಕಠ್ಠಾಣಿ = ನೂತನ (ವಿಲಕ್ಷಣ) ಮುತ್ತಿನಹಾರ; ತ್ರಿವಳಿಕೊರಳೋಳೇ = ಮೂರು ರೇಖೆಗಳಿಂದ ಶೋಭಿಸುವ ಕೊರಳು (ಕಂಠ)ವುಳ್ಳವಳು; ಇಟ್ಟ ಪೊನ್ನೋಲೆ = ಧರಿಸಿದ ಭಂಗಾರದ ಓಲೆಗಳುಳ್ಳ; ಪವಳದ = ಹವಳದ; ಕೈಯ ಕಟ್ಟುಕಂಕಣ = ಮುಂಗೈಯಲ್ಲಿ ಬಿಗಿದ ಸುವರ್ಣಪಟ್ಟಿ, ಕಂಕಣಗಳುಳ್ಳವಳು; ವಡ್ಯಾಣ = ಡಾಬು; ರುಳಿಗೆಜ್ಜೆ = ಗೆಜ್ಜೆಯುಳ್ಳ ರುಳಿ; ಅಷ್ಟ ಸಂಪನ್ನೆ = ಅಷ್ಟೈಶ್ವರ್ಯಪೂರ್ಣಳು;
ಸಕಲಶುಭಗುಣಭರಿತಳೆ, ಏಕೋದೇವಿಯೆ
ವಾಕುಲಾಲಿಸಿ ನೀ ಕೇಳೆ
ನೋಕನೀಯನ್ನ ಮಹಲೀಲೆಕೊಂಡಾಡುವಂಥ
ಏಕಮನವ ಕೊಡು ಶೀಲೆ
ಬೇಕು ಬೇಕು ನಿನ್ನ ಪತಿಪದಾಬ್ಜವ
ಏಕಾಂತದಿ ಪೂಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ
ನೀ ಕರುಣಿಸಿ ಕಾಯೆ ರಾಕೆಂದುವದನೆ ॥ 2 ॥
ಸಕಲಶುಭಗುಣಭರಿತಳೆ = ಸರ್ವಸದ್ಗುಣಪೂರ್ಣಳು; ಏಕೋದೇವಿಯೇ = ಸರ್ವೋತ್ತಮ ಸ್ತ್ರೀದೇವತೆ ; ವಾಕುಲಾಲಿಸಿ = ನುಡಿಯನ್ನು ಪ್ರೀತಿಯಿಂದ ನೀ ಕೇಳು; ನೋಕನೀಯನ್ನ ಮಹಲೀಲೆ = ಶ್ರೀಹರಿಯ ಮಹಾಕೃತಿಗಳನ್ನು (ಸೃಷ್ಟ್ಯಾದಿ ಕ್ರೀಡೆಗಳನ್ನು ಅಥವಾ ಅವತಾರ ಚರಿತೆಗಳನ್ನು) ('ನ ಕರ್ಮಣಾವರ್ಧತೇ ನೋಕನೀಯಾನ್' - ತನ್ನ ಸೃಷ್ಟಿ ಮೊದಲಾದ ಕೃತಿಗಳಿಂದ ಯಾವ ಪ್ರಕಾರದ ವೃದ್ಧಿಹ್ರಾಸಗಳಿಲ್ಲದವನು; ಎಂದು ಹೇಳುವ ಶೃತಿಪ್ರತಿಪಾದ್ಯನು ಶ್ರೀಹರಿ ); ಏಕಮನವ = ನಿಶ್ಚಲ ಮನಸ್ಸನ್ನು; ಶೀಲೆ = ಗುಣಾಢ್ಯಳು; ಏಕಾಂತದಲಿ = ಬಿಡದೇ (ಒಮ್ಮನಸ್ಸಿನಿಂದ); ಪೂಜಿಪರ ಸಂಗವ = ಭಜಿಸುವ ಭಕ್ತರ (ಸಾಧು)ಸಂಗವನ್ನು; ಕರವೊಡ್ಡದಂತೆ = ಯಾಚಿಸದಂತೆ; ರಾಕೆಂದುವದನೆ = ಪೂರ್ಣಚಂದ್ರನಂತೆ ಶೋಭಿಸುವ ಮುಖವುಳ್ಳ;
ಮಂದರೋದ್ಧರನರಸಿಯೆ, ಇಂದಿರೆ ಎನ್ನ
ಕುಂದುದೋಷಗಳಳಿಯೆ
ಅಂದಸೌಭಾಗ್ಯದ ಸಿರಿಯೆ, ತಾಯೆ ನಾ ನಿನ್ನ
ಕಂದನು ಮುಂದಕ್ಕೆ ಕರೆಯೆ
ಸಿಂಧುಶಯನ ಸಿರಿವಿಜಯವಿಟ್ಠಲರೇಯ
ಎಂದೆಂದಿಗೆ ಮನದಿಂದಗಲದೆ ಆ -
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ
ವಂದಿಸಿ ಪೇಳಮ್ಮ ಸಿಂಧುಸುತೆಯಳೆ ॥ 3 ॥
ಇಂದಿರೆ = ಶ್ರೀಲಕ್ಷ್ಮೀದೇವಿ (ಪರಮೈಶ್ವರ್ಯಯುಕ್ತಳು); ಕುಂದುದೋಷಗಳ = (ನನ್ನ) ನ್ಯೂನತೆ (ಕೊರತೆ) ಮತ್ತು ದೋಷಗಳನ್ನು; ಅಳಿಯೆ = ನಷ್ಟಗೊಳಿಸು (ಪರಿಹರಿಸು); ಅಂದಸೌಭಾಗ್ಯದ = ಸೌಂದರ್ಯಸೌಭಾಗ್ಯಗಳ; ಸಿರಿಯೆ = ಪೂರ್ಣಳಾದ ಶ್ರೀದೇವಿಯೇ! ಸಿಂಧುಶಯನ = ಸಮುದ್ರಶಾಯಿ (ಶ್ರೀಪದ್ಮನಾಭ); ವಂದಿಸಿ ಪೇಳಮ್ಮ = (ನನ್ನ ಪರವಾಗಿ) ನಮಸ್ಕರಿಸಿ ಪ್ರಾರ್ಥಿಸು; ಸಿಂಧುಸುತೆಯಳೆ = ಸಮುದ್ರಪುತ್ರಿ (ಕ್ಷೀರಸಾಗರತನಯಳೇ).
ಹರಿದಾಸರತ್ನಂ ಶ್ರೀಗೋಪಾಲದಾಸರು
***
ಶ್ರೀ ಮಹಾಲಕುಮಿ ದೇವಿಯೆ,
ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ||ಪ||
ಹೇಮಗರ್ಭ ಕಾಮಾರಿ ಶಕ್ರಸುರ
ಸ್ತೋಮ ವಂದಿತಳೆ ಸೋಮ ಸೋದರಿಯೆ ||
ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ
ಕಟ್ಟಾಣಿ ತ್ರಿವಳಿ ಕೊರಳೋಳೆ
ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ
ಕಟ್ಟ ಕಂಕಣ ಕೈಬಳೆ
ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ
ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ
ಇಟ್ಟು ಶೋಭಿಸುವ ಅಷ್ಟಸಂಪನ್ನೆ ||
ಸಕಲ ಶುಭಗುಣಭರಿತಳೆ ಏಕೋದೇವಿಯೆ
ವಾಕುಲಾಲಿಸಿ ನೀ ಕೇಳೆ
ನೋತನೀಯನ್ನ ಮಹಲೀಲೆ ಕೊಂಡಾಡುವಂಥ
ಏಕಮನವ ಕೊಡು ಶೀಲೆ
ಬೇಕು ಬೇಕು ನಿನ್ನ ಪತಿ ಪಾದಾಬ್ಜವ
ಏಕಾಂತದಿ ಪೂಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ
ನೀ ಕರುಣಿಸಿ ಕಾಯೆ ರಾಕೇಂದುವದನೆ ||
ಮಂದರೋದ್ಧನರಸಿಯೆ ಇಂದಿರೆ ಯೆನ್ನ
ಕುಂದು ದೋಷಗಳಳಿಯೆ
ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ
ಕಂದನು ಮುಂದಕ್ಕೆ ಕರೆಯೆ
ಸಿಂಧುಶಯನ ಸಿರಿ ವಿಜಯವಿಠ್ಠಲರೇಯ
ಎಂದೆಂದಿಗೊ ಮನದಿಂದಗಲದೆ ಆ
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ
ವಂದಿಸಿ ಪೇಳಮ್ಮ ಸಿಂಧುಸುತೆಯಳೆ||
*******
ಶ್ರೀ ಮಹಾಲಕುಮಿ ದೇವಿಯೆ, ಕೋಮಲಾಂಗಿಯೆII
ಸಾಮಗಾಯನ ಪ್ರಿಯಳೇ IIಪII
ಹೇಮಗರ್ಭ ಕಾಮಾರಿ ಶಕ್ರಸುರ-ಇ
ಸ್ತೋಮ ವಂದಿತೆ ಸೋಮಸೋದರಿಯೇ II
ಸಕಲ ಶುಭಗುಣ ಭರಿತಳೆ ,ಏಕದೇವಿಯೆ IIವಾಕು ಲಾಲಿಸಿ ನೀ
ಕೇಳೆ ಲೋಕನಾಥನ ಗುಣ ಲೀಲೇ ಕೊಂಡಾಡುವಂಥ I ಏಕಮನವ
ಕೊಡು ಶುಭಶೀಲೆ IIಬೇಕುಬೇಕು ನಿನ್ನ ಪತಿಪಾದಾಬ್ಜವ I ಏಕಾಂತದಲಿ
ಭಜಿಪರ ಸಂಗವ ಕೊಡು Iಲೋಕದ ಜನರಿಗೆ ನಾ ಕರವೊಡ್ಡದಂತೆ I
ತಾಯೆ ಕರುಣಿಸು ರಾಕೆಂದುವದನೆ II ೧ II
ಬಟ್ಟಕುಂಕುಮನೊಸಲೊಳೆ , ಮುತ್ತಿನ ಹೊಸ- I ಕಠ್ಠಾಣಿ
ತ್ರಿವಳಿ ಕೊರಳೊಳು Iಇಟ್ಟ ಪೊನ್ನೋಲೆ ಕಿವಿಯೊಳೆ ಪವಳದ ಕಯ್ಯ I
ಕಟ್ಟು ಕಂಕಣ ಕೈ ಬಳೆ IIತೊಟ್ಟ ಕುಬುಸ ಬಿಗಿದುಟ್ಟ ಪೀತಾಂಬರ II ಘಟ್ಟಿ
ವಡ್ಯಾಣ ಕಾಲಂದುಗೆ ರುಳಿಗೆಜ್ಜೆ Iಬೆಟ್ಟಿಲಿ ಪೊಳೆವುದು ಮೇಂಟಕೆ
ಕುರುಪಿಲ್ಲಿ II ಇಟ್ಟು ಶೋಭಿಸುವ ಅಷ್ಟ ಸಂಪನ್ನೆ II2 II
ಮಂದರಧರನರಸಿಯೆ ಇಂದಿರೆ ಎನ್ನ ಕುಂದುದೋಷಗಳನೀ I ತರಿಯೆ
ಅಂದುಳ್ಳ ಸೌಭಾಗ್ಯದಸಿರಿಯೇ ನಿನ್ನ I ಕಂದನೆಂದು ಮುಂದಕ್ಕೆ ಕರೆಯೇ II
ಸಿಂಧುಸುತಳೇ ನಿತ್ಯಸಿಂಧೂರ ಗಮನೇ Iಸಿಂಧುಶಯನ
ಸಿರಿ ವಿಜಯವಿಠಲನ ಎಂದೆಂದಿಗು ಮನದಿಂದ ಅಗಲದಂತೆ ೩
*********