Showing posts with label ಪಾಲಿಸೀ ಪಸುಳೆಯನು ಪರಮ ಪುರುಷ gopalakrishna vittala. Show all posts
Showing posts with label ಪಾಲಿಸೀ ಪಸುಳೆಯನು ಪರಮ ಪುರುಷ gopalakrishna vittala. Show all posts

Monday, 2 August 2021

ಪಾಲಿಸೀ ಪಸುಳೆಯನು ಪರಮ ಪುರುಷ ankita gopalakrishna vittala

ಪಾಲಿಸೀ ಪಸುಳೆಯನು ಪರಮ ಪುರುಷ ಪ.


ಬಾಲೆ ನಿನ್ನವಳೆಂದು ಶ್ರೀ ಕರಿಗಿರೀಶ ಅ.ಪ.


ನರಹರಿಯೆ ಲಕ್ಷೀಶ ತರಳೆ ನಿನ್ನವಳಿನ್ನು

ತ್ವರಿತದಲಿ ಕಾಪಾಡು ತಡಮಾಡದೆ

ಕರಕರೆಯ ರೋಗ ಬಾಧೆಯ ಬಿಡಿಸಿ ಹರಿ ನಿನ್ನ

ಕರುಣಾಮೃತವಗರೆದು ಕಡುಕೃಪೆಯೊಳಿನ್ನು 1

ಫಣಿರಾಜಶಯನ ಪರ್ಯಂಕ ದೇವರದೇವ

ಬಿನಗು ದೇವರ ಗಂಡ ಎಣೆಯುಂಟೆ ನಿನಗೆ

ಮಣಿಯದಾಗ್ರಹದೇವಗಣ ಉಂಟೆ ನಿನಗಿನ್ನು

ಕ್ಷಣ ಬಿಡದೆ ಸರ್ವಬಾಧೆಯ ಬಿಡಿಸಿ ಸತತ 2

ಪ್ರಾಣದೇವನೆ ಸರ್ವ ದೇವತೆಗಳಧಿನಾಥ

ಪ್ರಾಣದೇವನು ನಿನ್ನ ಪ್ರಾಣ ಪದಕ

ಪ್ರಾಣದೇವಗೆ ಪೇಳಿ ಪ್ರಾಣ ಭಯವನೆ ಬಿಡಿಸಿ

ಪ್ರಾಣಸೂತ್ರವ ನಡಿಸಿ ತ್ರಾಣಗೆಡದಂತೆ 3

ನಿನ್ನ ದಾಸರ ದಾಸಳಿವಳು ಶ್ರೀಹರಿ ಕೇಳು

ಎನ್ನ ಬಿನ್ನಪವ ನೀ ಬರಿದೆನಿಸದೆ

ಚನ್ನಾಗಿ ಆಯುರಾರೋಗ್ಯ ಸಂಪದವಿತ್ತು

ಮನ್ನಿಸಿ ಕಾಪಾಡು ಮಂಗಳಾತ್ಮಕನೆ 4

ಗುರುಕರುಣ ವರಬಲದಿ ಪುಟ್ಟಿದಾ ಶಿಶು ಇವಳು

ಪರಮ ಮಂಗಳೆ ಎನಿಸಿ ಪಾಲಿಸೈ ಜಗದಿ

ನಿರುತದಲಿ ನಿನ್ನ ಪದಭಕ್ತಿ e್ಞÁನವ ಕೊಟ್ಟು

ಹರಸಿ ಪೊರೆ ಗೋಪಾಲಕೃಷ್ಣವಿಠ್ಠಲನೆ 5

****