Showing posts with label ಏಕೆ ದೂರುವಿರೇ ರಂಗಯ್ಯನ rangavittala. Show all posts
Showing posts with label ಏಕೆ ದೂರುವಿರೇ ರಂಗಯ್ಯನ rangavittala. Show all posts

Wednesday, 11 December 2019

ಏಕೆ ದೂರುವಿರೇ ರಂಗಯ್ಯನ ankita rangavittala

ಕಲ್ಯಾಣಿ ರಾಗ ಅಟ್ಟತಾಳ/ ತ್ರಿಪುಟ ತಾಳ

ಏಕೆ ದೂರುವಿರೇ ರಂಗಯ್ಯನ
ಏಕೆ ದೂರುವಿರೇ ||ಪ||
ಸಾಕು ನಿಮ್ಮ ದೂರ ಬಲ್ಲೆನು
ಈ ಕುವರನಾ ಕೃತ್ಯ ಮಾಳ್ಪನೆ ||ಅ.ಪ||

ದಟ್ಟಡಿಯಿಡಲರಿಯ ಗೋವತ್ಸವ
ಬಿಟ್ಟು ಚಲಿಸಬಲ್ಲನೆ
ಘಟ್ಟಿಯಾಗಿ ಗೊತ್ತಿನಲ್ಲಿ
ಕಟ್ಟಿನೊಳು ಕಟ್ಟಿದ್ದ ಕರುಗಳ
ಬಿಟ್ಟನೇ ಈಕೃಷ್ಣನ ಮೇ-
ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ||೧||

ಕೆನೆಹಾಲು ಬೆಣ್ಣೆಯನು ಇತ್ತರೆ ಆ
ದಿನವೊಲ್ಲನು ಊಟವ
ಮನೆಮನೆಗಳನು ಪೊಕ್ಕು
ಬೆಣ್ಣೆ ಪಾಲ್ಮೊಸರನ್ನು ತಿನ್ನುತ
ವನಿತೆಯರ ಕೂಡಾಡಿದನೆಂ-
ದೆನಲು ನಿಮಗೆ ನಾಚಿಕಿಲ್ಲವೆ ||೨||

ಪಾಲು ಮೊಸರು ಬೆಣ್ಣೆಯು ಇಲ್ಲವೆ ನ-
ಮ್ಮಾಲಯದೊಳು ನೋಡಿರೆ
ಹೇಳುವರೆ ಈ‌ ಠೌಳಿಗಳ ಗೋ-
ಪಾಲಬಾಲನ ನೋಡಿ ಸೈಸದೆ
ಬಾಳುವಿರ ಭವ ಜಲಧಿಯಿಂದಲಿ
ತೇಲಿಸುವನೆ ರಂಗವಿಠಲ ||೩||
*******