ಸಿರಿಯನಾಳುವ ದೊರೆಯ ಮರೆಯದೆ ಮುರಾರಿಯ 1
ಕರುಣದಾಯಕನೀತ ಶರಣಜನರ ಸುಶೋಭಿತ ವರಮುನಿಗಳ ಹೃದಯ ಸದೋದಿತ ಹರಿಯ ಸಾಕ್ಷಾತ 2
ನಂಬಿದವರ ಕಾವ ಬಿಂಬಿಸುವ ಮನದೊಳಗೀವ ಇಂಬು ಅಗಿಹ್ಯ ದೈವ 3
ದೇಶಿಕರಿಗೆ ದೇವ ವಸುದೇವಸುತ ವಾಸುದೇವ ಲೇಸಾಗಿ ಸುಭಕ್ತರ ಪಾಲಿಸುವ ಈಶ ಶ್ರೀಕೇಶವ 4
ದೃಢ ಭಕ್ತರಿಗೊಲಿವ ಮೂಢ ಮಹಿಪತಿ ಮನದೈವ ಪಿಡಿದು ಕೈಯ ಕಡೆಗಾಣಿಸುವ ಬಿಡದೆ ಸಲಹುವ 5
***