..
kruti by Nidaguruki Jeevubai
ಮಂಗಳಾರತಿ ಮಾಡಿರೆ ಮಾರಮಣಗೆ ಪ
ಮಂಗಳಾರತಿ ಮಾಡಿ ಗಂಗಾಜನಕನಿಗೆ
ಶೃಂಗಾರ ಶೀಲಗೆ ಅಂಗನೆ ಮಣಿಯರುಅ.ಪ
ನೀರೊಳಗಾಡಿದವಗೆ ಬೆನ್ನಿಲಿ ಗಿರಿ
ಭಾರ ಪೊತ್ತಿಹ ದೇವಗೆ ಮಣ್ಣಿನಲಿದ್ದ
ಬೇರುಗಳನೆ ಮೆದ್ದಗೆ ಶ್ರೀಹರಿಗೆ
ಮೂರೆರಡರಿಯದ ಪೋರನÀ ಮಾತಿಗೆ
ಕ್ರೂರ ದೈತ್ಯನ ಕರುಳ್ಹಾರ ಮಾಡಿದಗೆ 1
ಬಡವ ಬ್ರಾಹ್ಮಣನಾಗುತ ದಾನವ ಬೇಡಿ
ಕೊಡಲಿ ಪಿಡಿದ ಭಾರ್ಗವಗೆ ಕೋಡಗಗಳ ಕೂಡಿ
ಕಡಲ ಬಂಧಿಸಿ ಮಡದಿಯ ತಂದವಗೆ
ಕಡಹಲ್ದ ಮರನೇರಿ ಮಡದೇರಿಗೊಲಿದಗೆ
ಬಿಡದೆ ತೇಜಿಯನೇರಿ ಸಡಗರ ತೋರ್ದಗೆ 2
ಪರಮಪುರುಷದೇವನ ಪರಿಪರಿಯಿಂದ
ಸ್ಮರಣೆ ಮಾಡುತ ಪಾಡುತ ಸಿರಿಯರಸಗೆ
ಸರಸೀಜಾಕ್ಷಿಯರೆಲ್ಲರೂ ಸರಸದಿ ಬಂದು
ಪರಾಭವ ನಾಮ ವತ್ಸರದಲಿ ಸುಜನರು
ಸಿರಿವರ ಕಮಲನಾಭ ವಿಠ್ಠಲನಿಗೆ 3
***