Showing posts with label ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ gurupranesha vittala. Show all posts
Showing posts with label ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ gurupranesha vittala. Show all posts

Thursday, 5 August 2021

ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ ankita gurupranesha vittala

 .. by ಗುರುಪ್ರಾಣೇಶ ವಿಠಲ

ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ || ಶ್ರೀ ಹರಿ |ಕುಹಕರ ಸಂಗಕೆ ಬ್ಯಾಡೋ ಪ್ರಾಣಿ ಪ


ಉರಿಹಸ್ತ ವರಕೊಟ್ಟು ಹರನು ಬಳಲಿದಾಗತ್ಪರದಿಂದವನ ಪೊರೆದ ಸುರನ ಸಂಹರಿಸಿದ1

ದಿತಿಜರ ಬಾಧೆಗೆ ಶತಮಖ ಪ್ರಾರ್ಥಿಸಲಮೃತವ ಕರದು ಅಹಿತರನು ವಂಚಿಸಿದ 2

ತರಳ ಪ್ರಹ್ಲಾದ ಕರ್ಬುರ ದೈತನ ಬಾಧಿಗೆ ಹರಿಯೆಂದೊರಲವನ ಪೊರೆದು ದೈತ್ಯನ ತರಿದ3

ಶಿಷ್ಟೇಷ್ಟಪ್ರದ ಪರಮೇಷ್ಟಿ ಜನಕನಲ್ಲಿಅಷ್ಟೆ ಕರ್ತೃತ್ವವಿರಲು ಇಷ್ಟ್ಯಾಕ ಬಳಲುವಿ 4

ಗುರು ಮಧ್ವಾಂತರ್ಗತ ಗುರು ಪ್ರಾಣೇಶ ವಿಠಲ ವಿಠಲಾಸುರ ಮುಖ್ಯರಳಿದು ತನ್ನ ಶರಣ ಜನರ ಪೊರೆದಾ 5

****