Showing posts with label ನಾರಾಯಣ ನಾಮ ಭಜಿಸೋ ನಿರುತದಲಿ ನರನೇ hanumesha vittala. Show all posts
Showing posts with label ನಾರಾಯಣ ನಾಮ ಭಜಿಸೋ ನಿರುತದಲಿ ನರನೇ hanumesha vittala. Show all posts

Tuesday, 1 June 2021

ನಾರಾಯಣ ನಾಮ ಭಜಿಸೋ ನಿರುತದಲಿ ನರನೇ ankita hanumesha vittala

ನಾರಾಯಣನಾಮ ಭಜಿಸೋ ನಿರುತದಲಿ ನರನೇ ಪ

ಮಾಯದ ಸಂಸಾರದಿ ಪಾರಾಗೋ ಉಪಾಯವಿದು ಸಸಾರ

ಕಾಯಜನೈಯನ ಭಜಿಸೋ ಶ್ರೀ ಗುರುವಾಯು ದೇವರ ದ್ವಾರಾ 1

ಧ್ಯಾನ ಕೃತಯುಗದಿ ಯಜ್ಞವು ತ್ರೈತದಿ ಅರ್ಚನೆ ದ್ವಾಪರದಿ

ಗಾನದಿ ಕಲಿಯಲಿ ಪಾಡಲು ಕೇಶವ ತಾನೇ ವಲಿವ ತ್ವರದಿ 2

ಅನಲ ಪಕ್ವಗೈಸಿದ ಅನ್ನವನಸ್ಕೊಳ್ಳೊಮಿಸುವಂತೆ

ಹನುಮೇಶವಿಠಲ ಕೊಟ್ಟಾತನು ಅರ್ಪಿಸು ಅದರಂತೆ 3

****