Showing posts with label ಪೂರ್ಣ ಸುಗುಣಾರ್ಣವನೆ ಅನಘ ಪರಮೇಶ್ವರನೆ prasannashreenivasa. Show all posts
Showing posts with label ಪೂರ್ಣ ಸುಗುಣಾರ್ಣವನೆ ಅನಘ ಪರಮೇಶ್ವರನೆ prasannashreenivasa. Show all posts

Thursday 5 August 2021

ಪೂರ್ಣ ಸುಗುಣಾರ್ಣವನೆ ಅನಘ ಪರಮೇಶ್ವರನೆ ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಪೂರ್ಣ ಸುಗುಣಾರ್ಣವನೆ ಅನಘ ಪರಮೇಶ್ವರನೆ

ಆ ನಮಿಪೆ ಶ್ರೀರಮಣ ಆನಂದಮಯ ವಿಷ್ಣು ಪ


ನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇ

ಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪ


ಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶ

ನಿಷ್ಕಳನು ನೀ ಸದಾ ಕೈವಲ್ಯ ಸುಖದ

ಆಗಮ ಸುಶಾಸ್ತ್ರೈಕ ವಿಜÉ್ಞೀಯ ಪರಬ್ರಹ್ಮ

ಅಂಗಾಂಗ್ಯಭಿನ್ನ ಆನಂದ ಸಂಪೂರ್ಣ 1

ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿ

ಬ್ರಹ್ಮ ಆನಂದಮಯ ನೀ ಇತರರಲ್ಲ

ಬ್ರಹ್ಮಪರಿಪೂರ್ಣ ಹರಿ ಸರ್ವನಾಮದಿ ನೀನೆ

ಬಹುರೂಪ ಸರ್ವಸ್ಥ ಈಶ್ವರ ಆನಂದಮಯ 2

ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬ

ರುದ್ರನು ದೇವೇಂದ್ರ ಸುರಗುರು ವಿಪ್ರ

ಇಂಥ ಯಾರೂ ವಸ್ತು ಯಾವುದೊ ಅಲ್ಲವು

ಆನಂದಮಯ ನೀನು ವಿಷ್ಣು ಪರಬ್ರಹ್ಮ 3

ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿ

ರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳು

ಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆ

ಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ 4

ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ

ಆನಂದಮಯ ಎಂಬ ಐದು ಶಬ್ದಂಗಳು 1

ಆನಂದಮಯ ಶಬ್ದದಿಂದ ಗ್ರಹಿಸಲುಬೇಕು

ಆನಂದಮಯ ಬ್ರಹ್ಮ ನೀನೆ ಇತರರು ಅಲ್ಲ 5

ಶಿರ ಬಾಹುದ್ವಯ ಮಧ್ಯ ಚರಣ ಅಂಗಾಂಗಗಳು

ಪೂರ್ಣ ಆನಂದಮಯ ಎಂದೂ ಅಭಿನ್ನ

ಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮ

ಶೃತಿಯು ಬಹುಸಾರುತಿದೆ ಸುಖಮಯನು ಎಂದು 6

ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನ

ಮನೋಮಯ ಸಂಕರ್ಷಣನು ವಿಜ್ಞಾನಮಯನು

ಅನಘ ಮಾಯಾರಮಣ ಪರವಾಸುದೇವ ನೀ

ಆನಂದಮಯ ಶ್ರೀಶ ನಾರಾಯಣ ಬ್ರಹ್ಮ 7

ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನ

ಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆ

ಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆ

ಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ 8

ಅಧಿಕಾರಿ ಆನಂದ ಪ್ರಚುರ ಬಹುರೂಪ ನೀ

ಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿ

ಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನು

ಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ 9

ಆನಂದಮಯ ನೀನೆ ಆನಂದೋದ್ರೇಕದಿಂ

ಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊ

ಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀ

ಆನಂದಮಯ ಇತರ ಲೋಕಚೇಷ್ಟಕರಿಲ್ಲ 10

ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆ

ರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದು

ಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರ

ಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ 11

ಸತ್ಯ ಸತ್ಸøಷ್ಟಿಕರ್ತ ಜೀವನಪ್ರದನು

ಸರ್ವ ಪ್ರವರ್ತಕನು ಸಂಹಾರಕರ್ತ

ಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನ

ದೇಶಾದಿಪರಿಚ್ಛೇದ ಶೂನ್ಯವು ಆನಂತ 12

ಅನ್ನಮಯದಿಂ ಸೃಷ್ಟಿ ಸಂಹಾರಜೀವನವು

ಪ್ರಾಣಮಯ ಶಬ್ದ ಸಹ ಜೀವನಪ್ರದವು

ಮನೋಮಯ ಶಬ್ದದಿಂ ಸಾಮಾನ್ಯಜ್ಞಾನವು

ವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ 13

ಆನಂದಮಯ ಶಬ್ದದಿಂದಲಿ ಜÉ್ಞೀಯವು

ಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವ

ಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮ

ಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ 14


ಆನಂದಮಯ ಆನಂತಂ ಬ್ರಹ್ಮ ಎಂದೀ ರೀತಿ

ಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥ

ಆನಂದಮಯ ಮೊದಲಾದ ಶಬ್ದಗಳಿಂದ

ಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ 15

ಆತ್ಮ ನೀ ಆನಂದಮಯ ಇತರರು ಅಲ್ಲ

ಆನಾತ್ಮರು ಸಂಪೂರ್ಣಸ್ವತಂತ್ರರು ಅವರು

ಚೇತನಾಚೇತನದ ಸತ್ತಾ ನಿನ್ನಿಂದಲೇ

ಆನಂತ ನೀ ಸರ್ವಗನು ಆಸಮ ಪ್ರಭು ಐರ16

ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯ

ಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣ

ಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನ

ಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ 17

ತಮೇವಂ ವಿದ್ವಾನಮೃತ ಇಹಭವತಿ

ನಾನ್ಯಃ ಪಂಥಾ ಅಯನಾಯ ವಿದ್ಯತಾ

ಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾ

ಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ 18

ಆನಂದಪ್ರಚುರ ಪೂರ್ಣಾನಂದಮಯ ನೀನೆ

ಆನಂದ ತರತಮದಿ ಜೀವರಲಿ ಉಂಟು

ಅತ್ಯಂತ ಭೇದವು ನಿನಗೂ ಜೀವರಿಗೂ

ಅನಂತ ಅಪರಿಮಿತ ಆನಂದಿ ನೀನೆ 19

ರುದ್ರನ ಶತಗುಣಿತ ಆನಂದ ನಾಲ್ಮೊಗನ

ಒಂದು ಆನಂದವು ಎಂಬುವುದು ಶೃತಿಯು

ಆನಂದ ಪರಿಮಿತವು ಜೀವರಿಗೆ ಈ ರೀತಿ

ಆನಂದ ಅಪರಿಮಿತ ನಿನ್ನಯ ಸ್ವರೂಪ 20

ಸುಖಮಯ ನಿನ್ನಪರಿಮಿತಾನಂದಾದಿಗಳನು

ಸಾಕಲ್ಯ ತಿಳಿದವರು ಇಲ್ಲವೇ ಇಲ್ಲ

ಸಾಕಲ್ಯ ಶಬ್ದಗಳು ಪೊಗಳಲರಿಯವು ನಿನ್ನ

ಏಕಸುಖಮಯ ನೀನು ಜೀವರಿಗೆ ಭಿನ್ನ 21

ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂ

ಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳು

ಜೀವೇಶ ಐಕ್ಯವನು ಬೋಧಿಸುವವಲ್ಲವು

ಸರುವಿಚಾರ ನಿರ್ಣಯದಿ ಭೇದಬೋಧಕವೆ 22

ಜೀವರಿಗೆ ಜನ್ಮಜೀವನ ಸತ್ತಾ ದಾತನು

ಸರ್ವಾಶ್ರಯ ಸರ್ವನಿಯಾಮಕನು ಆತ್ಮ

ಜೀವರು ಪರಬ್ರಹ್ಮಜ್ಞಾನದಿಂ ಪೊಂದುವ

ಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ 23

ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾ

ಸರ್ವದೊಳು ಇರುವಂಥ ಸರ್ವೇಶ್ವರ

ಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂ

ಸರ್ವ ನೀನೆಂದೆನಿಸಿಕೊಂಬೆಯೊ ದೇವ 24

ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯು

ಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನ

ಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆ

ಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ 25

ಸರ್ವಜಡ ಚೇತನದಿ ಅಂತರ್ನಿಯಾಮಕನು

ಸರ್ವಜಗದಾಧಾರ ಏಕ ಬಹುರೂಪ

ತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯ

ಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ 26

ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನ

ಶೃತ್ಯನುಸಾರವಿಲ್ಲದ ಅನುಮಾನ

ದುಸ್ತರ್ಕದಿಂದಲಿ ಲಭಿಸದು ಯಾರಿಗೂ

ಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ 27

ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆ

ಬದ್ಧರಂತೇ ಮುಕ್ತಜೀವರಿಗೂ ಭಿನ್ನ

ಮುಕ್ತರಿಗೆ ಅವರವರ ಆನಂದ ಅನುಭವವು

ಅಧೀನ ನಿನ್ನಲ್ಲಿ ಆನಂದಮಯ ಶ್ರೀಶ 28

ಸದಮಲ ಬ್ರಹ್ಮ ನಿನ್ನ ಪರೋಕ್ಷಜÁ್ಞನಿಗೆ

ಪದುಮಸಂಭವ ಸಹ ನೀನು ಸಹ ಇದ್ದು

ಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆ

ಹೇ ದಯಾನಿಧೇ ನಮೋ ಆನಂದಪೂರ್ಣ 29

ಅನ್ನ ಪ್ರಾಣ ಮನೋವಿಜ್ಞಾನ ಆನಂದಮಯ

ಪರಿಣಾಮ ಅಭಿಮಾನರಹಿತ ಅಧಿಕಾರಿ

ಆನಂದ ಪ್ರಚುರನೇ ಲೋಕಚೇಷ್ಟಕ ನೀನೆ

ಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ 30

ವನಜಾಸನಾದಿಗಳು ಆನಂದಮಯರಲ್ಲ

ನಿನ್ನಿಂದ ಉಪಜೀವ್ಯ ಭಿನ್ನರು ಅವರು

ಆಮ್ನಾಯದಿಂ ವೇದ ದುಸ್ತರ್ಕಕತಿ ದೂರ

ಆನಂದಮಯ ವಿಷ್ಣು ಮುಕ್ತರಿಗೂ ಆಶ್ರಯನು 31

ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸ

ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ

ಎನ್ನ 1ಒಳಹೊರಗಿದ್ದು ನೀನೆ ನುಡಿದೀ ಗ್ರಂಥ

ನಿನಗೆ ಅರ್ಪಣೆ ಸುಹೃದ ನಿತ್ಯ ಸಂತೃಪ್ತ 32

***