Showing posts with label ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು shyamasundara varadendra teertha stutih. Show all posts
Showing posts with label ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು shyamasundara varadendra teertha stutih. Show all posts

Wednesday, 1 September 2021

ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು ankita shyamasundara varadendra teertha stutih

 ..

ವರ್ಣಿಸಲು ಸಾಧ್ಯವೇ ಧರೆಯೊಳಿನ್ನ

ವರದೇಂದ್ರಗುರು ನಿನ್ನವರ ಮಹಿಮೆಯ ಪ


ದಶಪ್ರಮತಿ ಸುಮತಾಖ್ಯ | ಬಿಸಜನಿಧಿಗೆ ಉಡುನಾಥ

ವಸುಧಿ ಸುಮನಸವ್ರಾತ | ನಮಿತ ಖಾತ |

ವಸುಧೀಂದ್ರ ಕರಜಾತ | ಸುಶರಣರ ಸುಖದಾತ |

ವಸುಧೀಶ ಪಸರಿಸಿದ | ಅಸಮ ತವ ಚರಿತೆಯನು 1


ಸಾರ ಕನ್ನಡದಲಿ ನೀರಚಿಸುತಲಿ ತಂತ್ರ |

ಸಾರ ಮಂತ್ರವ ಪರಮ ಕಾರುಣ್ಯದಿ ||

ಶ್ರೀರಂಗನೋಲಿಸಿದ ಧಾರುಣಿಪ ದಾಸರಿಗೆ

ಸಾರಿ ಪೇಳಿದ ಪರಮೋಧಾರ ಜಿತಮಾರ 2


ಪುಣೆ ಎಂಬೊ ಪಟ್ಟದಿ ತನುಬಿಟ್ಟು ಮುದದಿಂದ

ಗುಣನಿಧಿ ಪ್ರಾಣೇಶದಾಸಾರ್ಯರ

ಮನೆಯ ಹಿತ್ತಲದೊಳಗೆ ಬಣವಿ ಬುಡದಲಿ ಬಂದು

ಘನ ತುಲಸಿ ರೂಪದಲಿ ಜನಕೆ ತೋರಿಸಿ ಚಿತ್ರ 3


ವಾದದಲಿ ರಾಮಾಖ್ಯ ವಾದಿಯಪ ಜಯ ಪೊಂದಿ

ಸಾದರದಿ ಗಜ ಭೂಷಣಾದಿಗಳನು ||

ಪಾದಕರ್ಪಿಸಲಾಗ ಭೂದೇವ ಜನಕಿತ್ತ

ಮೋದ ಬಡಿಸಿ ನಿನ್ನ ಔದಾರ್ಯ ಗುಣವ 4


ಶಾಮಸುಂದರ ಮೂಲ ರಾಮಚಂದ್ರನ ಚರಣ

ತಾಮರಸ ಷಡ್ಜಪರಮ ಸುಗಣ

ಧೀಮಂತ ಶ್ರೀಮಂತ್ರಧಾಮ ನಿಲಯರ ಪೂರ್ಣ

ಪ್ರೆಮ ಸತ್ವಾತ್ರ ಮಮ ಸ್ವಾಮಿ ಸುಚರಿತ್ರ 5

***