Showing posts with label ಕರುಣಿಸು ಭಾರತೀರಮಣ ಕರುಣಿಸು vijayaramachandra vittala. Show all posts
Showing posts with label ಕರುಣಿಸು ಭಾರತೀರಮಣ ಕರುಣಿಸು vijayaramachandra vittala. Show all posts

Friday, 6 August 2021

ಕರುಣಿಸು ಭಾರತೀರಮಣ ಕರುಣಿಸು ankita vijayaramachandra vittala

 ..

..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಕರುಣಿಸು ಭಾರತೀರಮಣ ಕರುಣಿಸು ಪ


ಕರುಣಿಸು ಭಾರತಿ ರಮಣಾ ನಿನ್ನ

ಚರಣಕ್ಕೆ ನಮೊ ಎಂಬೆ ಪರಣ | ಆಹ

ಪರಮದಯಾದಿಂದ ಹರಿಯನ್ನ ತೋರಿಸು

ದುರುಳರೊಳಡಗಿದೆ ನಿಲಿಸೊ ಜ್ಞಾನಿಗಳಲ್ಲಿ ಅ.ಪ


ತ್ರೇತಾಯುಗದಲ್ಲವತರಿಸಿ | ಕಪಿ

ವ್ರಾತ ಶಿರೋಮಣಿ ಎನಿಸಿ | ಪಕ್ಷ -

ಚೂತ ಫಲಗಳನ್ನು ಸಲಿಸಿ | ಭೂಮಿ -

ಜಾತೆಯ ಪಾದಕ್ಕೆ ನಮಿಸೀ | ಅಹ

ಘಾತಿಸಿ ಖಳರನ್ನು ಸೀತಾಪತಿ | ಮನೋ

ರಥವನು ಸಲಿಸಿದ ಮಾತರಿಶ್ವನೆ ನೀ 1


ಕುಂತಿಯ ಉದರದಿ ಜನಿಸಿ | ಬಹು

ಪಂಥದಿ ವನವ ಸಂಚರಿಸಿ | ಸಿರಿ -

ಕಾಂತನ ಪಾದಕ್ಕೆ ನಮಿಸಿ | ಮಡದಿ

ಚಿಂತೆಯನು ದೂರಗೈಸಿ | ಅಹ

ಸಂತಾಪಗೊಳುತಿಪ್ಪ ದಂತಿಪುರಾಧಿಪನ

ತಂತುಗೆಡಹಿತ ಬಲವಂತ ಶಿರೋರನ್ನ 2


ಕಲಿಯುಗದಲುದ್ಭವಿಸಿ | ಬಹು

ಲೀಲೆಯೊಳನ್ಯರ ಜಯಿಸಿ | ಸತ್ಯ

ಶೀಲರನ್ನುದ್ಧರಿಸಿ | ಸಿರಿ

ಲೋಲನೆ ಪರದೈವವೆನಿಸಿ | ಆಹ

ಬಾಲ ರವಿ ತೇಜ ವಿಜಯ ರಾಮಚಂದಿರವಿ -

ಠಲನ್ನ ಪೂಜಿಸುವಂಥ ಆಲವ ಬೋರ್ಧಾಯನೆ 3

***