Showing posts with label ಕಾಡದಿರೆನ್ನ ಕಿಡಿಗೇಡಿ ಮನವೆ prasannavenkata. Show all posts
Showing posts with label ಕಾಡದಿರೆನ್ನ ಕಿಡಿಗೇಡಿ ಮನವೆ prasannavenkata. Show all posts

Monday, 11 November 2019

ಕಾಡದಿರೆನ್ನ ಕಿಡಿಗೇಡಿ ಮನವೆ ankita prasannavenkata

by ಪ್ರಸನ್ನವೆಂಕಟದಾಸರು
ಕಾಡದಿರೆನ್ನ ಕಿಡಿಗೇಡಿ ಮನವೆ ಓಡದಿರು ಅಚ್ಯುತಾಂಘ್ರಿನೋಡುಮನವೆ ಪ.

ಬೆಲೆಯಿಲ್ಲದಾಯು ರತ್ನದ ಮಾಲೆ ಹರಿದಿದೆಆಲಸಿಕ್ಯಾತಕೆ ಹರಿಯ ಊಳಿಗಕೆಹುಲಿಯ ಬಾಯಿಯ ನೊಣನ ತೆರನಂತೆ ಮೃತ್ಯುಮುಖದಿಸಿಲುಕಿಹೆನು ಸರಸವಾಡದೆ ನಂಬು ಹರಿಯೆ 1

ಕಂಡ ಕಡೆಯಲಿ ತಿರುಗಿ ಬಳಲಿದೆಯಲ್ಲದೆ ಬೇರೆಉಂಡುಟ್ಟು ಸುಖಿಸಿ ಯಶಸೊದಗಲಿಲ್ಲಪುಂಡರೀಕಾಕ್ಷಾಂಘ್ರಿ ಪುಂಡರೀಕವ ಹೊಂದಿಬಂಡುಣಿಯೆನಿಪರ ಸೇರು ಸಾರು 2

ಗೋವರಂತಖಿಳ ಪಶುಗಳನು ದಾತಾರನಿಗೆತಾವು ಒಪ್ಪಿಸುವಪರಿಸತಿಸುತರನುದೇವದೇವ ಪ್ರಸನ್ನ ವೆಂಕಟಪಗರ್ಪಿಸಿಹೇವಹೆಮ್ಮೆಯ ಬಿಟ್ಟು ಸತತ ಹೊಗಳದೆ3
*******