Showing posts with label ಥಟ್ಟನೆ ನಿಂತನು ರಾಯ ಬಿಟ್ಟು ಸಿಂಹಾಸನ ಇಟ್ಟು ದ್ವಾರದಿ ಹೆಜ್ಜೆ ramesha. Show all posts
Showing posts with label ಥಟ್ಟನೆ ನಿಂತನು ರಾಯ ಬಿಟ್ಟು ಸಿಂಹಾಸನ ಇಟ್ಟು ದ್ವಾರದಿ ಹೆಜ್ಜೆ ramesha. Show all posts

Wednesday, 4 August 2021

ಥಟ್ಟನೆ ನಿಂತನು ರಾಯ ಬಿಟ್ಟು ಸಿಂಹಾಸನ ಇಟ್ಟು ದ್ವಾರದಿ ಹೆಜ್ಜೆ ankita ramesha

ಥಟ್ಟನೆ ನಿಂತನು ರಾಯ

ಬಿಟ್ಟು ಸಿಂಹಾಸನ ಇಟ್ಟು ದ್ವಾರದಿ ಹೆಜ್ಜೆ ಪ.


ಸಭೆಯ ದ್ವಾರದಲೆ ವಿಬುಧ ಸಹಿತಾಗಿ

ಅಭಯ ಜನಕೆ ಕೊಟ್ಟು ನಭದ ಸೂರ್ಯನಂತೆ 1


ಮಾರನೈಯನ ದಯ ಅಪಾರವಾಗಲೆಂದು

ಬಾರಿ ಬಾರಿಗೆ ದ್ರವ್ಯ ಸೂರಿ ಮಾಡುತಲಾಗ 2


ವಾಯುದೇವರ ದಯ ಸೋಸಿಲೆ ನಮಗೆಂದು

ಸಾಸಿರ ಅರ್ಬುದ ದ್ರವ್ಯ ಆಸಮಯದಲೆ ಕೊಟ್ಟ 3


ಲಕ್ಷ್ಮಿದಯ ನಮಗೆ ಅಕ್ಷಯ ಇರಲೆಂದು

ಲಕ್ಷಕೋಟಿ ದ್ರವ್ಯ ಆಕ್ಷಣದಲಿ ಕೊಟ್ಟ 4


ಬಲರಾಮ ನಮಗಿನ್ನು ಸುಲಭವಾಗಲೆಂದು

ಬಲುಬಲುದ್ರವ್ಯ ಮೇಲೆ ಮೇಲೆ ಕೊಟ್ಟು 5


ಎಷ್ಟೆಷ್ಟು ಕಾಲಕ್ಕೆ ಕೃಷ್ಣನೆ ದೊರೆ ಎಂದು

ಶ್ರೇಷ್ಠದ ಭೇರಿಯ ಘಟ್ಯಾಗಿ ಹೊಯಿಸುತ 6


ಹಿಂದೆ ಮುದದಿಂದ ಬಂದ ರಾಮೇಶನು 

ತಂದೆ ಬೊಮ್ಮಗೆ ದುಂದುಭಿ ಹೊಯಿಸುತ 7

****