ಕಂಡು ಧನ್ಯಳಾದೆ ನಾನೀಗ | ಈ ದಿವ್ಯ ಪಾದ
ಕಂಡು ಧನ್ಯಳಾದೆ ನಾನೀಗ ಪ.
ಕಂಡು ಧನ್ಯಳಾದೆನೀಗ ತಂಡ ತಂಡದ ಪಾಪಗಳನು
ಖಂಡಿಸುತಲಿ ಹರಿಯ ರೂಪ ಕಂಡು ಭಜಿಪ ದಿವ್ಯ ಪಾದ ಅ.ಪ.
ಭಕ್ತ ನುಡಿಗೆ ಮನದಿ ಮರುಗಿ
ಮುಕ್ತಿ ತೋರ್ವೆನೆಂದು ಬಂದು
ಶಕ್ತನಾದ ಹರಿಯ ತೋರಿ
ಭಕ್ತಜನರ ಪೊರೆವೊ ಪಾದ 1
ಕಮಲನಾಭನ ಭಜಿಪ ಪಾದ
ಕಮಲಾಪತಿಗೆ ಪ್ರೀತಿ ಪಾದ
ಕಮಲಪುಷ್ಪ ಹರಿಗೆ ಅರ್ಪಿಸಿ
ಕಮಲಾಕ್ಷನನು ತೋರ್ಪ ಪಾದ 2
ತಂದೆ ಮುದ್ದುಮೋಹನರೆಂ-
ತೆಂದು ಜಗದಿ ಮೆರೆವೊ ಪಾದ
ನಂದ ಕಂದನ ಮನದಿ ತೋರಿ
ಇಂದು ಆನಂದ ಕೊಡುವೊ3
ಪಾದತೊಳೆದು ಪೂಜೆಗೈದು
ಪಾದೋದಕವÀ ಪಾನಮಾಡಿ
ಪಾದಪದ್ಮ ನಂಬಿ ನಮಿಸಿ
ಪಾದಕಮಲ ಸ್ತೋತ್ರಗೈವೆ 4
ಗೋಪಾಲಕೃಷ್ಣವಿಠ್ಠಲನ
ರೂಪ ಮನದಿ ತೋರ್ವ ಪಾದ
ಪಾಪಗಳನು ಧ್ವಂಸಗೈದು
ಶ್ರೀಪತಿಯ ತೋರ್ವ ಪಾದ 5
****