Showing posts with label ಆತ್ಮನಿವೇದನ ಭಕುತಿ ತನ್ನಾತ್ಮ prasanna venkata AATMA NIVEDANA BHAKUTI TANNATMA. Show all posts
Showing posts with label ಆತ್ಮನಿವೇದನ ಭಕುತಿ ತನ್ನಾತ್ಮ prasanna venkata AATMA NIVEDANA BHAKUTI TANNATMA. Show all posts

Sunday 18 April 2021

ಆತ್ಮನಿವೇದನ ಭಕುತಿ ತನ್ನಾತ್ಮ ankita prasanna venkata AATMA NIVEDANA BHAKUTI TANNATMA

 

Audio by Vidwan Sumukh Moudgalya


ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು


 ೯ . " ಆತ್ಮ ನಿವೇದನ"


 ರಾಗ : ಕಾನಡ    ಖಂಡಛಾಪು


ಆತ್ಮನಿವೇದನ ಭಕುತಿ

ತನ್ನಾತ್ಮವನೀವ ಪರಮಾತ್ಮ ವಿಶ್ವಾತ್ಮ॥ಪ॥


ಸರ್ವಕರ್ಮ ಸರ್ವಕಾಲವರ್ತಾ

ಸರ್ವಕಾಯಕೆ ಹರಿ ಸ್ವತಂತ್ರನು

ಸರ್ವಾರ್ಥದಲಿ ಪೂರ್ಣ ಸರ್ವೇಂದ್ರಿಯನಿಯಂತ್ರ

ಸರ್ವದೇಶಕಾಲವಾಪ್ತಗೋಪ್ತನೆಂದು॥೧॥


ಕಾಸುಕೋಶದೇಹ ದೇಹೇಂದ್ರಿಯ ಪ್ರಾಣ

ಸ್ತ್ರೀಸುತ ಪ್ರಿಯರು ದಾಸೀದಾಸರು

ಈಶಗರ್ಪಣೆಮಾಡಿ ದಾಸದಾಸನಾಗಿ

ಲೇಶವೂ ತನ್ನದನ್ನದೆ ಸರ್ವಾರ್ಪಿಸುವರು॥೨॥


ಜನ್ಮ ಜನ್ಮಾಂತರ ಸದ್ಧರ್ಮ ಕರ್ಮಂಗಳು

ನಿರ್ಮಲಜ್ಞಾನ ವೈರಾಗ್ಯ ಭಕ್ತಿ

ಸ್ವರ್ಮಂದಿರ ಭವಯಾತ್ರೆ ಗರ್ಭಯಾತ್ರೆ

ರಮ್ಮೆಯ ರಮಣಗರ್ಪಣವೆಂಬ ನಿಷ್ಠೆಯ ॥೩॥


ಅಹರ್ನಿಶಿ ಶ್ವಾಸೋಚ್ಛ್ವಾಸಾವಸ್ಥಾತ್ರಯ

ಬಹು ಜಪ ತಪ ಅರ್ಚನೆ ಸಂಭ್ರಮ

ಬಹುದ್ಭಿಃಶ್ರವಣ ಬಹುಧಾಶ್ರವಣ ಮನನ

ಶ್ರೀ ಹರಿಧ್ಯಾನ ಧ್ಯಾಸಾತ್ಮರ್ಥದಿ ॥೪॥


ಆಲಂಬುದ್ಧಿಯನೆ ಬಿಟ್ಟು ಆಲಸಮತಿಯನೆ ಸುಟ್ಟು

ಆಲಸಲಕ್ಷಣ ವಿಸ್ಮೃತಿಯನು ನೀಗಿ

ಅಲವಬೋಧಾರ್ಯರ ಮತದವರನು ಪೊಂದಿ

ಲಲಿತ ಪ್ರಸನ್ವೆಂಕಟ ಚತುರಾತ್ಮನೆಂದೆಂದು ॥೫॥

*****


by ಪ್ರಸನ್ನವೆಂಕಟದಾಸರು
ಆತ್ಮನಿವೇದನ ಭಕುತಿ ತನ್ನಾತ್ಮವನೀವ 
ಪರಮಾತ್ಮ ವಿಶ್ವಾತ್ಮಗೆ ಪ.

ಸರ್ವಕರ್ಮಕರ್ತ ಸರ್ವಕಾಲವರ್ತಸರ್ವಕಾರ್ಯಕೆ
ಹರಿಸ್ವತಂತ್ರನುಸರ್ವಾರ್ಥದಲಿ 
ಪೂರ್ಣಸರ್ವೇಂದ್ರಿಯ ನಿಯಂತ್ರಸರ್ವದೇಶ 
ಕಾಲವ್ಯಾಪ್ತ ಗೋಪ್ತನೆಂದು 1

ಕಾಸು ಕೋಶಗೇಹದೇಹೇಂದ್ರಿಯ 
ಪ್ರಾಣಸ್ತ್ರೀ ಸುತ ಪ್ರಿಯ ದಾಸಿ ದಾಸರನು
ಈಶಗರ್ಪಣೆ ಮಾಡಿ ದಾಸದಾಸನಾಗಿಲೇಶವು 
ತನಗೆನ್ನದೆ ಸರ್ವಾರ್ಪಿಸುವುದು 2

ಜನ್ಮ ಜನ್ಮಾಂತರ ಧರ್ಮ ಕರ್ಮಂಗಳು
ನಿರ್ಮಲ ಜ್ಞಾನ ವೈರಾಗ್ಯ ಭಕ್ತಿಸ್ವರ್ಮಂದಿರ 
ಭವಯಾತ್ರೆ ಗರ್ಭಯಾತ್ರೆರಮೆಯ 
ರಮಣಗರ್ಪಣವೆಂಬ ನಿಷ್ಠೆಯ 3

ಅಹರ್ನಿಶಿಶ್ವಾಸೋಚ್ಚ್ವಾಸಾವಸ್ಥಾತ್ರಯಬಹು 
ಜಪತಪ ಅರ್ಚನೆಸಂಭ್ರಮಬಹುಭಿ:ಶ್ರವಣ 
ಬಹುಧಾಶ್ರವಣ ಮನನಶ್ರೀಹರಿ ಧ್ಯಾನ 
ಧ್ಯಾಸಾತ್ಮಾಥರ್Àದಿ 4

ಅಲಂಬುದ್ಧಿಯನು ಬಿಟ್ಟು ಅಲಸಮತಿಯನು 
ಸುಟ್ಟುಅಲಸಲಕ್ಷಣ ವಿಸ್ಮøತಿಯನುನೀಗಿ
ಅಲವಬೋಧಾಚಾರ್ಯ ಮತದವರನು 
ಪೊಂದಿಲಲಿತ ಪ್ರಸನ್ವೆÉಂಕಟ ಚತುರಾತ್ಮಗೆ 5
*******