Showing posts with label ಎಂಥ ಶೂರನೊ ರಾಮ ಎಂಥ ಧೀರನೊ rangesha vittala. Show all posts
Showing posts with label ಎಂಥ ಶೂರನೊ ರಾಮ ಎಂಥ ಧೀರನೊ rangesha vittala. Show all posts

Tuesday, 13 April 2021

ಎಂಥ ಶೂರನೊ ರಾಮ ಎಂಥ ಧೀರನೊ ankita rangesha vittala

ಎಂಥ ಶೂರನೊ ರಾಮ ಎಂಥ ಧೀರನೊ ll ಪ ll


ಕಂತುಹರನ ಧನುವನೆತ್ತಿ

ಪಂಥದಿಂದ ಮುರಿದು ಬಿಸುಟ ll ಅ ಪ ll


ಹಲವು ಶೂರರಾಜರದನು

ಚಲಿಸಲಾಗದ ಧನುವ

ಸುಲಭದಿಂದಲೆತ್ತಿ ಮುರಿದು

ಲಲನೆ ಸೀತೆಯೊಲಿಸಿದವನು ll 1 ll


ಸಕಲ ಕ್ಷತ್ರಿಯರನು ಗೆಲಿದು

ಪ್ರಕಟನಾದ ಪರಶುರಾಮ

ಶಕುತಿಯನ್ನು ತಾನು ಪರಮ

ಯುಕುತಿಯಿಂದ ಗೆಲಿದು ಬಂದ ll 2 ll


ಸಾಲು ಶಿರನ ಕೀಟವೆಂದು 

ಬಾಲದಲ್ಲಿ ತಂದ ವೀರ

ವಾಲಿಯನೇಕ ಬಾಣದಲಿ 

ಲೀಲೆಯಿಂದಲಿರಿದ ಜಾಣ ll 3 ll


ಹತ್ತುನಾಲ್ಕು ಲೋಕಗಳನು 

ಸುತ್ತಿಗೆಲಿದು ಖ್ಯಾತನಾದ

ಹತ್ತು ತಲೆಯ ದುಷ್ಟನನ್ನು

ಕತ್ತು ಕಡಿದು ಕೆಡಹಿದವನು ll 4 ll


ರಾಸಿ ದೈತ್ಯರನ್ನು ಕೊಂದು

ದೇಶವನ್ನು ಉದ್ಧರಿಸಿದ

ವಾಸವಾದಿ ಸುರನುತ ರಂ-

ಗೇಶವಿಟ್ಠಲರೇಯನವನು ll 5 ll

***