Showing posts with label ಈ ಪರಿಯ ಅಧಿಕಾರ ಒಲ್ಲೆ purandara vittala. Show all posts
Showing posts with label ಈ ಪರಿಯ ಅಧಿಕಾರ ಒಲ್ಲೆ purandara vittala. Show all posts

Tuesday, 3 December 2019

ಈ ಪರಿಯ ಅಧಿಕಾರ ಒಲ್ಲೆ purandara vittala

ಪುರಂದರದಾಸರು
ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪ

ಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ ದುರ್ಗದಿ ||ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು 1

ದಾರಿಯಲಿ ಹೋಗಿ ಬರುವವರಉಪಟಳಘನ|ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |ಮಿರಿ ನಿನ್ನಲಿ ಮನವನೂರಿ ನಿಲಗೊಡರು 2

ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ 3

ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |ಸ್ವಾಮಿತ್ವವೋನೋಡುಮನೆಮನೆಯಲಿ ||ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು 4

ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |ಪಾಳೆಯವನೊಪ್ಪಿಸಿ ಕೊಡುವೆವೆಂದು ||ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ 5

ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |ಅನುವಾದ ದಿವಸವೊಂದಾದರಿಲ್ಲ ||ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ 6

ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |ಅನುಗಾಲಬದುಕುವೆನೊ ಪುರಂದರವಿಠಲ7
*******