Showing posts with label ಎಂಜಲೆನ್ನಲಿಬಹುದೆ ಮನುಜರಿದನ ಅಘವನ ಧನಂಜಯ ಸುವೈಕುಂಠದಾಸರ ವದನದ ಕಣವ hayavadana. Show all posts
Showing posts with label ಎಂಜಲೆನ್ನಲಿಬಹುದೆ ಮನುಜರಿದನ ಅಘವನ ಧನಂಜಯ ಸುವೈಕುಂಠದಾಸರ ವದನದ ಕಣವ hayavadana. Show all posts

Wednesday, 1 September 2021

ಎಂಜಲೆನ್ನಲಿಬಹುದೆ ಮನುಜರಿದನ ಅಘವನ ಧನಂಜಯ ಸುವೈಕುಂಠದಾಸರ ವದನದ ಕಣವ ankita hayavadana

 ..

ಎಂಜಲೆನ್ನಲಿಬಹುದೆ ಮನುಜರಿದನ ಅಘವನ ಧ-

ನಂಜಯ ಸುವೈಕುಂಠದಾಸರ ವದನದ ಕಣವ ಪ.


ವದನವೆಂಬಾಕಾಶದಲಿ ಭಕುತಿ ಜೀಮೂತಪದಮನಾಭನ ನಾಮಾಮೃತದÀ ಕಡಲಮುದದಿಂದ ತಕ್ಕೊಂಡು ಎನ್ನಂಗ ದೇಹದಲಿಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು 1


ಹೃದಯಕಾರಾಗೃಹದಿ ಶ್ರೀಹರಿಯನಾವಾಗಹುದುಗಿ ಅಗಲಿಸದ ಕಾರಣದೊಳುಂಗುಟದಿಉದಿಸಿ ಗಂಗೆಯು ಪೋಪೆಡೆಯು ಅಳಿದರೆ ಇವರವದನದಲಿ ಪೊರಟೆನ್ನ ಮ್ಯಾಲೆ ಹರಿದುದನು 2


ಪರಸನ್ನ ಹಯವದನ ಚರಣ ಸರಸಿಜಮಧು-ಕರ ಸುವೈಕುಂಠ ದಾಸೋತ್ತಮನ್ನವರ ವದನದಲಿ ವೇದಶಾಸ್ತ್ರಾಗಮದ ತಾ-ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು 3

***