..
ಎಂಜಲೆನ್ನಲಿಬಹುದೆ ಮನುಜರಿದನ ಅಘವನ ಧ-
ನಂಜಯ ಸುವೈಕುಂಠದಾಸರ ವದನದ ಕಣವ ಪ.
ವದನವೆಂಬಾಕಾಶದಲಿ ಭಕುತಿ ಜೀಮೂತಪದಮನಾಭನ ನಾಮಾಮೃತದÀ ಕಡಲಮುದದಿಂದ ತಕ್ಕೊಂಡು ಎನ್ನಂಗ ದೇಹದಲಿಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು 1
ಹೃದಯಕಾರಾಗೃಹದಿ ಶ್ರೀಹರಿಯನಾವಾಗಹುದುಗಿ ಅಗಲಿಸದ ಕಾರಣದೊಳುಂಗುಟದಿಉದಿಸಿ ಗಂಗೆಯು ಪೋಪೆಡೆಯು ಅಳಿದರೆ ಇವರವದನದಲಿ ಪೊರಟೆನ್ನ ಮ್ಯಾಲೆ ಹರಿದುದನು 2
ಪರಸನ್ನ ಹಯವದನ ಚರಣ ಸರಸಿಜಮಧು-ಕರ ಸುವೈಕುಂಠ ದಾಸೋತ್ತಮನ್ನವರ ವದನದಲಿ ವೇದಶಾಸ್ತ್ರಾಗಮದ ತಾ-ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು 3
***
No comments:
Post a Comment