ಮಂಗಳೆಂದು ಬೆಳಗಿರೆ ಕುರಂಗಕೇತು ವದನೆಯರೆ ಪ
ಕುಂಡಲಿಶಯನ ಶ್ರೀಧವಗೆ | ಕೋದಂಡಪಾಣಿ ವಾವನಗೆ |
ಪಾಂಡವಪಕ್ಷ ಪಿಡಿದವಗೆ | ಪಂಢರಿಪುರ ನಿವಾಸನಿಗೆ 1
ಸುರೇಶಮದವಿಭಂಜನಗೆ | ಪುರಾರಿ ಹರನ ಪೊರೆದವಗೆ |
ದರಾರಿ ಪದುಮಗದಾಧರಗೆ | ಧರಾಮರಾರ್ಚಿತಾಂಘ್ರಿಗೆ 2
ಚಟುಲ ಶಾಮಸುಂದರಗೆ | ವಿಠಲವೀಶವಾಹನಗೆ |
ಕುಟಿಲ ಚÀದುರೆಯರು ಬೇಗ | ಕುಠಾರಿಧರ ನರಮೃಗಗೆ 3
***