Showing posts with label ಬಾರನಲ್ಲೆ ಸಖಿ ಪರಿಪೂರ್ಣ ಕಾಮನು ತೋರನಲ್ಲೆ ಅವನ ಚರಣ ಕಮಲವನ್ನು vijayaramachandra vittala. Show all posts
Showing posts with label ಬಾರನಲ್ಲೆ ಸಖಿ ಪರಿಪೂರ್ಣ ಕಾಮನು ತೋರನಲ್ಲೆ ಅವನ ಚರಣ ಕಮಲವನ್ನು vijayaramachandra vittala. Show all posts

Friday, 6 August 2021

ಬಾರನಲ್ಲೆ ಸಖಿ ಪರಿಪೂರ್ಣ ಕಾಮನು ತೋರನಲ್ಲೆ ಅವನ ಚರಣ ಕಮಲವನ್ನು ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಬಾರನಲ್ಲೆ ಸಖಿ ಪರಿಪೂರ್ಣ ಕಾಮನು ಪ


ತೋರನಲ್ಲೆ ಅವನ ಚರಣ ಕಮಲವನ್ನು ಅ.ಪ


ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದ

ಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ 1


ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವ

ತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ2

ಒರಳನೆಳೆದು ಮರವನ್ನು ಮುರಿದು ನಿಲ್ಲುವ

ಅರಿಯದಬಲೆಯರ ಸೀರೆ ಮರಕೆ ಕಟ್ಟಿ ಪೋಗುವ 3


ವÀ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವ

ಭುಜಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ 4


ಏಸು ಕಾಲದಿಂದ ಅವನ ಬಯಸಿ ನಾ ಬೇಡುವೆ

ವಾಸುದೇವ ವಿಜಯ ರಾಮಚಂದ್ರವಿಠಲನ 5

***