ಓರಂತೆ ಮುದ್ದಿಸಿ ಯಶೋದೆ ಕುಮಾರನೆ ಬಾರೈಂದಳೈ ||ಪ||
ಅಂದವಾದ ನಿನ್ನ ಮುದ್ದುಮುಖದ ಚೆಂದವನ್ನು ತಾ ನೋಡಿ |
ಕಂದಿಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ ||೧||
ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹನವಾಯಿತು | ದುಷ್ಟಮತಮಾತಂಗಕ್ಕೆ ಅಟ್ಟುವೊ ಸಿಂಹದ ಮರಿಯೆ ||೨||
ಇಂಥ ಹಯವದನ ನ ಇಂಥ ದೇವರ ನಾ ಕಾಣೆ |
ಪಂಥವೇನೊ ಎನ್ನ ಕೂಡೆ ದಿನಮಣಿ ತಿಂತಿಣಿಯೆ ಬಾರೆಂದಳೈ ||೩||
***********