Showing posts with label ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ ನೀ ಪೇಳಬಾರದೆ vidyakanta KAAPAADABEKENDU GOPALA KRISHNAGE NEE PELABAARADE. Show all posts
Showing posts with label ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ ನೀ ಪೇಳಬಾರದೆ vidyakanta KAAPAADABEKENDU GOPALA KRISHNAGE NEE PELABAARADE. Show all posts

Wednesday, 3 November 2021

ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ ನೀ ಪೇಳಬಾರದೆ ankita vidyakanta KAAPAADABEKENDU GOPALA KRISHNAGE NEE PELABAARADE

kruti by Vidyakanta Teertharu

ವಿದ್ಯಾಕಾಂತ ಯತಿಗಳ ಕೀರ್ತನೆ

ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ

ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ

ಪಾಪ ಮಾಡುವನೆಂದು ಕೋಪ ಮಾಡಿದಿರೆಂದು

ನಾ ಪಾದಪದುಮಕ್ಕೆ ಶರಣೆಂಬೆ ತಾಯೆ 1

ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ

ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ 2

ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ

ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ3

ಪಾದ ನಂಬಿದವರಿಗೆ ಮೋದವ ಕೊಡುವಂಥ

ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ 4

ವಿದ್ಯಾಕಾಂತನ ಮನವಿದ್ದಂತೆ ಒಲಿಯುವ

ಸದ್ದಯಾನಿಧಿ ನಮ್ಮ ನರಸಿಂಹ ತಾಯೆ 5

(ವಿದ್ಯಾಕಾಂತತೀರ್ಥರು (1824)

ವ್ಯಾಸರಾಜ ಮಠದ 16 ನೇ ಯತಿಗಳು)

***