Showing posts with label ಕೊಂಡಾಡಬಹುದೆ ಯತೀಂದ್ರ ಪಾಂಡವ ಪ್ರಿಯನಾ ಭಜಕ ವಾದಿರಾಜ vaikunta vittala vadiraja stutih. Show all posts
Showing posts with label ಕೊಂಡಾಡಬಹುದೆ ಯತೀಂದ್ರ ಪಾಂಡವ ಪ್ರಿಯನಾ ಭಜಕ ವಾದಿರಾಜ vaikunta vittala vadiraja stutih. Show all posts

Saturday 1 May 2021

ಕೊಂಡಾಡಬಹುದೆ ಯತೀಂದ್ರ ಪಾಂಡವ ಪ್ರಿಯನಾ ಭಜಕ ವಾದಿರಾಜ ankita vaikunta vittala vadiraja stutih

 ( 24.02.21 ಬುಧವಾರ  ) ಶ್ರೀ ಭಾವಿ ವಾಯುದೇವರ / ಶ್ರೀ ಭಾವಿ ಬ್ರಹ್ಮದೇವರಾದ ಶ್ರೀ ವಾದಿರಾಜ ಗುರುಸಾರ್ವಭೌಮರ ಜನುಮದಿನ "

" ಹರಿದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ವಾದಿರಾಜರ ಸ್ತೋತ್ರ  "

ರಚನೆ : ಶ್ರೀ ವೈಕುಂಠ ದಾಸರು 

ರಾಗ : ಮಖಾರಿ  ತಾಳ : ಝ೦ಪೆ 


ಕೊಂಡಾಡಬಹುದೆ ಯತೀಂದ್ರ ।

ಪಾಂಡವ ಪ್ರಿಯನಾ ಭಜಕ -

ವಾದಿರಾಜ ಯತೀ ।। ಪಲ್ಲವಿ ।।


ನಾನಾ ಜನುಮದಾ ।

ಯೋನಿ ಮುಖದಲಿ ಬಂದು ।

ಮಾನವಳಿದು ಜ್ಞಾನ ಶೂನ್ಯನಾಗಿ ।।

ದೀನ ಮನದಾ ಮೂಢ -

ಮನುಷ್ಯನಾಗಿಹೆ ।

ಹೀನ ಅಹಂಕಾರ ಪೂರಿತ -

ದೋಷಿಯಾ ।। ಚರಣ ।।


ಅರಿಷಡ್ವರ್ಗದೊಳು ಶಿಲುಕಿ -

ನರ ಗುರಿಯಾಗಿ ।

ಪರರ ವಾರ್ತಿಯ ಸವಿವ -

ಹಗಲು ಉರಳೂ ।

ದುರುಳ ದುಶ್ಚೇಷ್ಠಿಕನು 

ಬಹುದುರಾತ್ಮನು ನಾನು ।

ಗುರು ಹಿರಿಯರಿಗೆ ಎರಗದ 

ಗೂಢ ಪಾಪಿಯನು ।। ಚರಣ ।।


ಒಡೆಯ ವೈಕುಂಠ -

ವಿಠ್ಠಲನ ಭಜಿಸದೆ  ।

ಪೊಡವಿಯೊಳು ಕ್ಷುದ್ರ -

ದೈವಗಳಿಗೆಲ್ಲ ।

ಪೊಡಮಡುತಿಹೆ ಸ್ವಾಮಿ 

ದ್ರೋಹಿಯಾ ಗರುವಿಯಾ ।

ಕಡು  ಪಾತಕನ್ನ ನಡತಿಯನು -

ನೀನರಿಯದಲೆ ।। ಚರಣ ।।

***