ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಪ
ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ ಬೋಧ 1
ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ 2
ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ ಶೂನ್ಯ ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ 3
***