ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಧನ್ಯವಾಯಿತು ಜನುಮ ಬಂದು ಕೂಡಿದ ಘನ ಮಹಿಮ ಧ್ರುವ ಏನು ಪುಣ್ಯ ಮಾಡಿದ್ದೆವೊ ಮೊದಲೆ ಖೂನಗಂಡೆವೊ ಹರಿಯ ಮನದಲಿ ಕಾಣದಿದ್ದೆವೊ ಏಸು ಜನ್ಮದಲಿ ತಾನೆ ಒಲಿದು ಬಂದು ಸುಪ್ರಸನ್ನಲಿ 1
ಬ್ರಹ್ಮಾದಿಕರಿಗೆ ದಾವ ದುರ್ಲಭ ನಮ್ಮ ನೆನವಿನೊಳಾದವ ಸುಲಭ ತಮ್ಮ ನಿಜಸುಖದ ನೆಲೆನಿಭ ಬ್ರಹ್ಮಾನಂದ ದೋರಿದ ಪ್ರಾಣದೊಲ್ಲಭ 2
ಖೂನದೋರಿತು ಮುನ್ನ ನಾ ಮಾಡಿದ ಭಾನುಕೋಟಿತೇಜನ ಕೈಗೂಡಿದ ಅನುಭವಾಮೃತಸಾರ ನೀಡಿದ ದೀನ ಮಹಿಪತಿ ಮನೋಹರ ಮಾಡಿದ 3
***