Showing posts with label ಉದರ ಪೂರ್ತಿಯ ಕೊಡದಿರು ಉದಧಿಶಯನ vijaya vittala. Show all posts
Showing posts with label ಉದರ ಪೂರ್ತಿಯ ಕೊಡದಿರು ಉದಧಿಶಯನ vijaya vittala. Show all posts

Wednesday, 16 October 2019

ಉದರ ಪೂರ್ತಿಯ ಕೊಡದಿರು ಉದಧಿಶಯನ ankita vijaya vittala

ವಿಜಯದಾಸ
ಉದರ ಪೂರ್ತಿಯ ಕೊಡದಿರು ಉದಧಿಶಯನ ಪ

ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಅ.ಪ

ಮುದದಿ ನಿನ್ನ ಚರಣವನು ಸ್ಮರಿಸುವುದು |
ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ |
ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ |
ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ 1

ತನುಮನವು ನಿನ್ನ ವಿಷಯಕ್ಕೆರಗಲಿ |
ಅನುಮಾನವಿದ್ದ ಪರಿಯೆಲ್ಲ ತೊಲಗಿ ||
ವನಜಸಂಭವನೈಯ್ಯ ವೈಕುಂಠಪತಿ ನಿನಗೆ |
ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ2

ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ |
ಅಜಮಿಳಗೆ ಒಲಿದಂತೆ ಎನಗೆ ವೊಲಿದೂ ||
ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ |
ನಿಜವಾಗಿ ದಯಮಾಡೊ ವಿಜಯವಿಠ್ಠಲನೇ3
**********