..
kruti by radhabai
ಶ್ರೀಗುರುರಾಜ ಪ್ರಭೋ | ನಮೊ ನಮೊ ಗುರು ರಾಜಪ್ರಭೋ ಪ
ಪರಿಪರಿಯಿಂದಲಿ ನಿನ್ನನಾ ಅನುದಿನಸ್ತುತಿ ಸುವೆನಾ
ಪರಮದಯಾಳು ಶ್ರೀ ಗುರು ರಾಘವೇಂದ್ರಾ
ತ್ವರಿತದಿಂದಲಿ ಎಮ್ಮ ಕರುಣಿಸಿ ಪೊರೆವುದು 1
ಅಡಿಗಡಿಗೇ ನುಡಿನುಡಿಗೇ ಎಡಬಿಡದೇ ಭಜಿಸುವೆನಾ
ತಡಮಾಡದೆ ದಯೆತೋರುವುದೈ
ಬಿಡೆ ಬಿಡೆ ನಿಮ್ಮಯ ಅಡಿಗಳ ನಾನೆಂದೂ 2
ಕನಿಕರಿಸೀ ದಯಸುರಿಸೀ ಭಯಹರಿಸೀ ಆದರ
ಪಡಿಸೀ ನಿಮಗೆ
ಸರಿಕಾಣೆನೊ ಧರಣೆಮಂಡಲದೊಳು
ಕರುಣಾಮಯ ಶ್ರೀ ರಾಘವೇಂದ್ರಾ 3
***