..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಶರಣಾಗ್ರಣಿ ರಾಮ ಚರಣಾಂಬುಜ ಬಿಡೆ
ತರುಳ ನಳಿನ ಷಟ್ ಚರಣ ಬಿಡ ಬಲ್ಲದೆ ಪ
ಹನುಮನ ಭಜನೆಂಬ ಘನವಾರಿ ಪೂರಿತ
ಮನ ಸರೋವರ ಅಯನವಾಗಿಪ್ಪಾ
ಜನಕಸುತೆ ಹಂಸಿ ಮನಸಾಪ ಹಾರಿ
ದಿನಕರನ್ವಯದಿಂದ ವಿನುತವಾಗಿಪ್ಪ 1
ಅಮರರೋತ್ತಮರೆಂಬ ಭ್ರಮರರಾ ರವಗಳ
ಸಮಯೋಚಿತ ಸಾಮಭಿ ಸೇವಿತ
ವಿಮಲಾತಮದಿಂದ ಸಾಂದ್ರ ಶಮಲಾತಿ ದೂರ
ಕಮಲಾಸನ ಪ್ರಿಯ ಕಮಲೋತ್ತುಮ ಪಾದ 2
ಶಿಲೆಯ ಬಾಲೆಯ ಮಾಡಿ ಮಲವಳಿದು ಮುನಿ
ಕುಲವಗೆಡಿಸಿ ಸತ್ಕುಲನೆನಿಸಿದೆ
ಜಲಧಿಯೊಳಗೆ ಸೇತು ನಿಲಿಸಿ ಸಜ್ಜನರಿಗೆ
ನೆಲೆ ವಾಸುದೇವವಿಠಲದೇವ ಪಾದಪದುಮ3
***