Showing posts with label ಈತನೀಗ ಪ್ರಣವ ಪಾದ್ಯನೊ ಭೂತ ಪ್ರೇತ ಪ್ರಮಥ vijaya vittala EETANEEGA PRANAVA PAADYANO BHOOTA PRETA PRAMATHA. Show all posts
Showing posts with label ಈತನೀಗ ಪ್ರಣವ ಪಾದ್ಯನೊ ಭೂತ ಪ್ರೇತ ಪ್ರಮಥ vijaya vittala EETANEEGA PRANAVA PAADYANO BHOOTA PRETA PRAMATHA. Show all posts

Friday, 17 December 2021

ಈತನೀಗ ಪ್ರಣವ ಪಾದ್ಯನೊ ಭೂತ ಪ್ರೇತ ಪ್ರಮಥ ankita vijaya vittala EETANEEGA PRANAVA PAADYANO BHOOTA PRETA PRAMATHA



ವಿಜಯದಾಸ
ಈತನೀಗ ಪ್ರಣವ ಪಾದ್ಯನೊ |
ಭೂತ ಪ್ರೇತ ಪ್ರಮಥ ತತಿಗೆ |
ನಾಥನೆನಿಪ ನಮಗೆ ನಿರುತ |
ವಾಕನೊಳಗೆ ಹರಿಯ ತೋರುವ ಪ

ಗಜದನುಜ ವಿನಾಶನೀತ |
ಗಜವದನನ ಪೆತ್ತನೀತ |
ಗಜನ ಸದದನೀತ ಪೆತ್ತಂ |
ಗಜನ ಗೆದ್ದ ಗಂಭೀರನೀತ |
ಗಜರಿಪುರಥ ರಮಣನೀತಾ ನಂ |
ಗಜಮಾರಗೊಲಿದನೀತ |
ಗಜ ವರದನ ಭಕ್ತರಘವೆಂಬೊ |
ಗಜಕೆ ಕೇಸರಿಯಾಗಿಪ್ಪನೀತಾ 1

ದ್ವಿಜರಾಜ ಜುಟನೀತಸೋತ್ತಮ |
ದ್ವಿಜಗೆ ಪಾಲಿಪನೀತ ಸತತಾ |
ದ್ವಿಜ ಪನ್ನಗನ್ನ ಸಮಗುಣನೀತಾ |
ದ್ವಿಜ ಕುಲದಲ್ಲಿ ಉದ್ಭವನೀತ |
ದ್ವಿಜನ ಶಾಪವ ಕೈಕೊಂಡನೀತ |
ದ್ವಿಜ ಭೂಷಣ ಯಾಗದಲಿ ಸೂರ್ಯನ |
ಧ್ವಜವ ಕಿತ್ತಿದನೀತ ಕೈಲಾಸ |
ದ್ವಿಜವಾಗಿವುಳ್ಳ ಉಗ್ರೇಶನೀತ2

ತ್ರಿಗುಣಾಕಾರ ನೀತ ಮೂರು |
ಜಗವದಲ್ಲಣನೀತ ಮೇರು |
ನಗಚಾಪನೀತ ನಾರಾಯಣಾಸ್ತ್ರದಿ |
ನಗರನುರುಪಿ ಬಿಟ್ಟನೀತ |
ಬಗೆಬಗೆಯ ಜೀವಿಗಳಿಗೆ ಬಿಡದೆ |
ಅಗಣಿತ ಭೋಗ ಪ್ರದಾತನೀತ |
ಮೃಗಲಾಂಛನದ ಮೊಗನಗೆ ಈತ |
ನಿಗಮಾಶ್ರವದಗಧಿಕನೀತಾ 3

ಭಸುವ ರಾವಣ ಮಾಗಧ ಕಶ್ಯಪ |
ಅಸುರಗಣಕೆ ವರವಿತ್ತನೀತ |
ಪಶುವದನ ಪರಮೇಶ್ವರನೀತ |
ವಿಷವ ಭಂಜನಭವ ಶಿವನೀತ |
ಬಿಸಿಜ ಸಂಭವ ನಂದನನೀತ |
ಅಸಮವೀರ ವೈಷ್ಣವನೀತ |
ವಸುಧಿಯೊಳಗೆ ಶರಣ ಜನಕೆ |
ವಶವಾಗಿಯಿಪ್ಪ ಉಗ್ರೇಶನೀತಾ 4

ಹೇಮಕೂಟಾದ್ರಿ ನಿಲಯನೀತ |
ರಾಮದೇವ ವಾಸವಂದ್ಯ |
ಸೋಮವರ್ಣನೀತ ಸಕಲ |
ಕಾಮಿತಾರ್ಥವ ಕೊಡುವನೀತ |
ಯಾಮ ಯಾಮಕೆ ಮನದೊಳು ನಿಂದು |
ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ |
ರಾಮ ವಿಜಯವಿಠ್ಠಲನಂಘ್ರಿ |
ನಾಮನೆನಿಸಿ ಕೊಂಡಾಡುವನೀತಾ5
***