Showing posts with label ನೀಲೆ ತೋರೆಲೆ ಜಗಪಾಲ ಮುಕುಂದನಾ ಶೂಲಧರನ ಮಿತ್ರನಾ mahipati NEELE TORELE JAGAPAALA MUKUNDANA SHOOLADHARANA MITRANAA. Show all posts
Showing posts with label ನೀಲೆ ತೋರೆಲೆ ಜಗಪಾಲ ಮುಕುಂದನಾ ಶೂಲಧರನ ಮಿತ್ರನಾ mahipati NEELE TORELE JAGAPAALA MUKUNDANA SHOOLADHARANA MITRANAA. Show all posts

Thursday, 16 December 2021

ನೀಲೆ ತೋರೆಲೆ ಜಗಪಾಲ ಮುಕುಂದನಾ ಶೂಲಧರನ ಮಿತ್ರನಾ ankita mahipati NEELE TORELE JAGAPAALA MUKUNDANA SHOOLADHARANA MITRANAA

ನೀಲೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ 

ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 

ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 

ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾನಾ| ವನರುಹ ಯೋನಿವಂದ್ಯನ ಮಧು ಸೂಧನ| ಘನ ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3

****