..
kruti by ವೀರನಾರಾಯಣ Veeranarayana
ಜನುಮದ ದಿವಸವಿದು ಹನುಮ ನಿನ್ನಜನುಮದ ದಿವಸವಿದೂ ಪ
ಜನುಮದ ದಿನವಿದು ಅನುದಿನ ನಿನ್ನನುನೆನೆಯುವ ಜನರಿಗೆ ಘನ ಮುದ ಕೊಡುವಂಥ ಅ.ಪ.
ಯಾವಾಗಲೂ ಹರಿಯ ಭಕುತಿಯಲಿಸೇವೆಮಾಳ್ಪ ಪರಿಯಭಾವುಕರಿಗೆ ಕಲಿಸುವುದಕೆ ಗಡಜೀವಿಯಾಗಿ ಅವತರಿಸಿದ ನಿನ್ನದೂ 1
ಪೊಡವಿಯ ಮಾತೆಯನು ದನುಜಬ ಚ್ಚಿಡಲವಳಿರುವದನುಹುಡುಕಿ ತೆಗೆಯಲಾ ಕಡಲನೆ ಜಿಗಿಯುವಕಡುಶಕ್ತಿಯ ಗಡ ಪಡೆದ ನಿನ್ನಯ 2
ಧಾರುಣಿನ ಕಾರಣ ಗದುಗಿನವೀರನಾರಾಯಣಚಾರು ಚರಣದಿ ತೋರಿ ಭಕುತಿಯನುಸೂರೆಗೈಯ್ಯೆ ಮೈದೋರಿದ ನಿನ್ನನು 3
***