Showing posts with label ನಿನ್ನೊಳು ನೀನೆ ನಿನ್ನೊಳು ನೀನೆ ನಿನ್ನೊಳು ನೀನೆ ನೋಡಿ mahipati. Show all posts
Showing posts with label ನಿನ್ನೊಳು ನೀನೆ ನಿನ್ನೊಳು ನೀನೆ ನಿನ್ನೊಳು ನೀನೆ ನೋಡಿ mahipati. Show all posts

Wednesday, 1 September 2021

ನಿನ್ನೊಳು ನೀನೆ ನಿನ್ನೊಳು ನೀನೆ ನಿನ್ನೊಳು ನೀನೆ ನೋಡಿ ankita mahipati

 ನಿನ್ನೊಳು ನೀನೆ ನಿನ್ನೊಳು ನೀನೆ ನಿನ್ನೊಳು ನೀನೆ ನೋಡಿ ಪೂರ್ಣ ಚನ್ನಾಗೇನಾರೆ ಮಾಡು ಪ್ರಾಣಿ pa


ಕಾಯಕ ವಾಚಕ ಮಾನಸದಿಂದ ಸ್ಥಾಯಿಕನಾಗಿ ನೋಡಿ ಸ್ಥಾಯಿಕನಾಗಿ ನೋಡಿ ಮಾಯಿಕಗುಣದೋರುದು ಬಿಟ್ಟು ನಾಯಕನಾಗಿ ಕುಡು ಪ್ರಾಣಿ 1 

ಸೆರಗ ಬಿಟ್ಟು ಮರಗಬ್ಯಾಡ ಕರಗಿ ಮನ ಕೂರು ಕರಗಿ ಮನ ಕೂಡು ಎರಗಿ ಗುರು ಪಾದಕ್ಕಿನ್ನು ತಿರುಗಿ ನಿನ್ನ ನೋಡು ಪ್ರಾಣಿ 2 

ಮರೆವು ಮಾಯ ಮುಸುಕ ಬಿಟ್ಟು ಅರುವಿನೊಳು ಕೂಡು ಅರುವಿನೊಳು ಕೂಡು ತರಳ ಮಹಿಪತಿ ನಿನ್ನ ಗುರುತು ನಿಜ ಮಾಡು ಪ್ರಾಣಿ 3

***