ನಿನ್ನೊಳು ನೀನೆ ನಿನ್ನೊಳು ನೀನೆ ನಿನ್ನೊಳು ನೀನೆ ನೋಡಿ ಪೂರ್ಣ ಚನ್ನಾಗೇನಾರೆ ಮಾಡು ಪ್ರಾಣಿ pa
ಕಾಯಕ ವಾಚಕ ಮಾನಸದಿಂದ ಸ್ಥಾಯಿಕನಾಗಿ ನೋಡಿ ಸ್ಥಾಯಿಕನಾಗಿ ನೋಡಿ ಮಾಯಿಕಗುಣದೋರುದು ಬಿಟ್ಟು ನಾಯಕನಾಗಿ ಕುಡು ಪ್ರಾಣಿ 1
ಸೆರಗ ಬಿಟ್ಟು ಮರಗಬ್ಯಾಡ ಕರಗಿ ಮನ ಕೂರು ಕರಗಿ ಮನ ಕೂಡು ಎರಗಿ ಗುರು ಪಾದಕ್ಕಿನ್ನು ತಿರುಗಿ ನಿನ್ನ ನೋಡು ಪ್ರಾಣಿ 2
ಮರೆವು ಮಾಯ ಮುಸುಕ ಬಿಟ್ಟು ಅರುವಿನೊಳು ಕೂಡು ಅರುವಿನೊಳು ಕೂಡು ತರಳ ಮಹಿಪತಿ ನಿನ್ನ ಗುರುತು ನಿಜ ಮಾಡು ಪ್ರಾಣಿ 3
***
No comments:
Post a Comment