Audio by Mrs. Nandini Sripad
ಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀ ತುಳಸೀ ಮಹಿಮಾಸ್ತೋತ್ರ ಸುಳಾದಿ
ರಾಗ ಮಲಯಮಾರುತ
ಧ್ರುವತಾಳ
ಸಂತತ ಹನ್ನೆರಡು ಕೋಟಿ ಸುವರ್ಣದ ಪುಷ್ಪ
ಸಮರ್ಪಿಸಲು ಅಂಥ ಫಲದಿ
ಕೋಟಿ ಗುಣಿತ ಅರ್ಧ ತುಲಸೀ ದಳಕೆ
ಕಿಂತು ಮಾತ್ರದಿ ಭಕುತಿಯಿಂದ
ಸಂತತ ನಮಿಸಲು ಶ್ರೀಪುರಂದರವಿಟ್ಠಲ ವೈಕುಂಠವನೀವಾ ॥ 1 ॥
ಮಟ್ಟತಾಳ
ಆದಿವಾರದಲ್ಲಿ ಸಂಜೆ ರಾತ್ರಿಯಲ್ಲಿ
ಅಂಗಾರಕ ಶುಕ್ರವಾರದಲ್ಲಿ
ವೈಧೃತಿ ವ್ಯತಿಪಾತ ಸಂಕ್ರಮಣಗಳಲ್ಲಿ
ತುಳಸಿ ತೆಗೆದರೆ ಶ್ರೀಪುರಂದರವಿಟ್ಠಲ ಮುನಿವಾ ॥ 2 ॥
ತ್ರಿಪುಟತಾಳ
ಮೂರುದಿನ ಕಣಗಲ ಪುಷ್ಫ
ಆರು ತಿಂಗಳ ಬಿಲ್ವ ಸಂವತ್ಸರದ ತುಲಸೀ
ಮೂರು ತಿಂಗಳ ಕಮಲಾ ಅಚ್ಯುತಾರ್ಚನೆ ಬಾಹುದು
ಶ್ರೀಪುರಂದರವಿಟ್ಠಲ ॥ 3 ॥
ಅಟ್ಟತಾಳ
ಇಲ್ಲದಿದ್ದರೆ ಚಿಗುರು ಎಲಿಯು
ಇಲ್ಲದಿದ್ದರೆ ಬೇರು ಮೃತಿಕೆ
ಇಲ್ಲದಿದ್ದರೆ ಬರಡು ಕಟ್ಟಿಗಿ ಅದು
ಇಲ್ಲದಿದ್ದರೆ ತುಲಸೀ ತುಲಸೀ ಎಂದು ಕೂಗಿದರೆ ಸಾಕು
ಎಲ್ಲ ವಸ್ತುಗಳಿದ್ದು ತುಲಸಿ ಇಲ್ಲದಿದ್ದರೆ
ಶ್ರೀಪುರಂದರವಿಟ್ಠಲ ಮುನಿದು ಎಲ್ಲವಗಳೀಡಾಡುವುವು ॥ 4 ॥
ಆದಿತಾಳ
ಒಂದು ಒಂದು ಬೆರಳು ಜಪ
ಒಂದೆ ಐದು ಬೆರಳು ಗೆರೆಯ ಜಪ
ಒಂದೇ ಹತ್ತು ಪುಥುರಂಜ ಮಣಿ ಜಪ
ಒಂದೇ ಕೋಟಿ ದರ್ಭೆ ಗಂಟಿನ ಜಪ
ಒಂದೆ ಅನಂತ ತುಲಸಿ ಮಣಿಯ ಜಪ ಹೀ -
ಗೆಂದು ಪುರಂದರವಿಟ್ಠಲ ನೇಮಿಸಿದಾ ॥ 5 ॥
ಜತೆ
ಸ್ನಾನ ದಾನಕೆ ತುಲಸಿದಳ ಪ್ರಯೋಜನಕೆ ತುಲಸಿ
ಶ್ರೀಪುರಂದರವಿಟ್ಠಲಗೆ ಅತಿ ಪ್ರೀಯ ತುಲಸೀ ॥
******
Audio by Mrs. Nandini Sripad
ರಾಗ ಸಾವೇರಿ
ಧ್ರುವತಾಳ
ಸಂತತ ಹನ್ನೆರಡು ಕೋಟಿ ಸುವರ್ಣದ ಪುಷ್ಪ
ಸಮರ್ಪಿಸಲು ಅಂಥ ಫಲದಿ
ಕೋಟಿ ಗುಣಿತ ಅರ್ಧ ತುಲಸೀ ದಳಕೆ
ಕಿಂತು ಮಾತ್ರದಿ ಭಕುತಿಯಿಂದ
ಸಂತತ ನಮಿಸಲು ಶ್ರೀಪುರಂದರವಿಠ್ಠಲ ವೈ -
ಕುಂಠವನೀವಾ ॥ 1 ॥
ಮಟ್ಟತಾಳ
ಆದಿವಾರದಲ್ಲಿ ಸಂಜೆ ರಾತ್ರಿಯಲ್ಲಿ
ಅಂಗಾರಕ ಶುಕ್ರವಾರದಲ್ಲಿ
ವೈಧೃತಿ ವ್ಯತಿಪಾತ ಸಂಕ್ರಮಣಗಳಲ್ಲಿ
ತುಳಸಿ ತೆಗೆದರೆ ಶ್ರೀ ಪುರಂದರವಿಠ್ಠಲ ಮುನಿವ ॥ 2 ॥
ತ್ರಿಪುಟತಾಳ
ಮೂರುದಿನ ಕಣಗಲ ಪುಷ್ಫ
ಆರು ತಿಂಗಳ ಬಿಲ್ವ ಸಂವತ್ಸರದ ತುಲಸೀ
ಮೂರು ತಿಂಗಳ ಕಮಲ ಅಚ್ಯುತನರ್ಚನೆ ಬಾಹುದು
ಶ್ರೀ ಪುರಂದರವಿಠ್ಠಲ ॥ 3 ॥
ಅಟ್ಟತಾಳ
ಇಲ್ಲದಿದ್ದರೆ ಚಿಗುರು ಎಲಿಯು
ಇಲ್ಲದಿದ್ದರೆ ಬೇರು ಮೃತಿಕೆ
ಇಲ್ಲದಿದ್ದರೆ ಬರಡು ಕಟ್ಟಿಗಿ ಅದು
ಇಲ್ಲದಿದ್ದರೆ ತುಲಸೀ ತುಲಸೀ ಎಂದು ಕೂಗಿದರೆ ಸಾಕು
ಎಲ್ಲ ವಸ್ತುಗಳಿದ್ದು ತುಲಸಿ ಇಲ್ಲದಿದ್ದರೆ
ಶ್ರೀಪುರಂದರವಿಠ್ಠಲ ಮುನಿದು ಎಲ್ಲವಗಳೀಡಾಡುವುವು ॥ 4 ॥
ಆದಿತಾಳ
ಒಂದು ಒಂದು ಬೆರಳು ಜಪ
ಒಂದೇ ಐದು ಬೆರಳು ಗೆರೆಯ ಜಪ
ಒಂದೇ ಹತ್ತು ಪುಥುರಂಜ ಮಣಿ ಜಪ
ಒಂದೇ ಕೋಟಿ ದರ್ಭೆ ಗಂಟಿನ ಜಪ
ಒಂದೇ ಅನಂತ ತುಲಸೀ ಮಣಿಯ ಜಪ ಹೀ -
ಗೆಂದು ಪುರಂದರವಿಠ್ಠಲ ನೇಮಿಸಿದಾ ॥ 5 ॥
ಜತೆ
ಸ್ನಾನ ದಾನಕೆ ತುಲಸಿದಳ ಪ್ರಯೋಜನಕೆ ತುಲಸಿ
ಶ್ರೀಪುರಂದರವಿಠ್ಠಲಗೆ ಅತಿ ಪ್ರಿಯ ತುಲಸೀ ॥
********