Showing posts with label ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ varadesha vittala. Show all posts
Showing posts with label ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ varadesha vittala. Show all posts

Sunday, 1 August 2021

ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ ankita varadesha vittala

 ..

kruti by ವರದೇಶ ವಿಠಲರು varadesha vittala dasaru


ಬಾರೋ ನೂತನ ಗೃಹಕೆ ಹರಿಯೆ ಸಿರಿ

ಮಾರುತ ಮುಖಸುರರೊಡಗೂಡಿ ಧೊರಿಯೆ ಪ


ಯಾರು ಕೇಳದಲಿಹ ಸ್ಥಳವ ನೀನೆ

ಪ್ರೇರಿಸಿ ಗೃಹವ ನಿರ್ಮಿಸಿದೆಯೋ ದೇವ

ನೂರಾರು ಪರಿರೂಪಾಂತರವ ಪೊಂದಿ

ಈ ರೀತಿ ನವಸುಸಂಸ್ಕøತವಾದ ಗೃಹವ 1


ಈರಪ್ಪÀ ಬಡಿಗನೆಂಬುವನು ಮನಿಯ

ಚಾರುತನದಲಿಂದ ನಿರ್ಮಿಸಿರುವನು

ತೋರುವ ಸಿಂಹಾಸನವನು ಮಧ್ಯಾ

ಗಾರದಿನಿನಗಾಗಿ ವಿರಿಚಿಸಿಹನು 2


ಸುತ್ತಲು ನಿರ್ಭಯವಿಹುದು ವಂ -

ಭತ್ತು ದ್ವಾರಗಳಿಂದ ಶೋಭಿಸುತಿಹುದು

ಹತ್ತಿರೆ ಗುರುಗೃಹ ವಿಹುದು ಮುಂದೆ

ಚಿತ್ತಜನಯ್ಯನ ಮಂದಿರ ವಿಹುದು 3


ಉತ್ತಮ ಗೃಹವೆನಿಸುವದು ಇ -

ಪ್ತತ್ತುನಾಲಕುವಸ್ತುಗಳಕೂಡಿಹುದು

ಸುತ್ತೇಳು ಪ್ರಾಕಾರವಿಹುದು ಸುತ್ತು

ಮುತ್ತಲು ದ್ವಿಜಜನಹೊಂದಿ ಕೊಂಡಿಹುದು 4


ಗೃಹವುನಾಲ್ಕು ವಿಧವಿಹುದು ಸೂಕ್ಷ್ಮ

ಗೃಹ ನಿನಗಾಗಿಯೆ ನೇಮಿಸಿಯಿಹುದು

ಬಹಿರದಿ ಪಾಕಗೃಹ ವಿಹುದು ಅಲ್ಲಿ

ಗೃಹಿಣಿಯಿಂ ತ್ರಿವಿಧಾನ್ನ ಪಕ್ವಗೈತಿಹುದು5


ನಡುಮನೆ ದೊಡ್ಡದಾಗಿಹುದು ಅಲ್ಲಿ

ಸಡಗರದಲಿ ಬ್ರಹ್ಮವೃಂದ ಕೂಡುವದು

ಬಿಡದೆ ಸತ್ಕಥೆನಡೆಯುವದು ಮುಂದೆ

ಪಡಸಾಲೆಯಲಿ ಸರ್ವಜನ ಸಭೆಯಹುದು 6


ಶ್ವಸನ ಮಾರ್ಗವಲಂಬಿಸಿರುವೆ ಮನಿಯ

ಹಸನ ಮೆಹದೀನಾದಿಯಿಂ ಮಾಡಿಸಿರುವೆ

ಹೊಸಸುಣ್ಣವನು ಹಚ್ಚಿಸಿರುವೆ ಏಕಾ

ದಶ ಸೇವಕರ ನಿನ್ನ ವಶದೊಳಿರುಸುವೆ 7


ನಾನಾಧನ ನಿನಗರ್ಪಿಸುವೆನು ತನು

ಮಾನಿನಿಸಹ ನಿನ್ನಾಧೀನ ಮಾಡುವೆನು

ಜ್ಞಾನಭಕ್ತಿಯೆ ಇಚ್ಛಿಸುವೆನು ನಿನ್ನ

ಧ್ಯಾನಾನಂದದಿ ಧನ್ಯನೆಂದಿನಿಸುವೆನು8


ಹರಿಯೆ ಲಾಲಿಸು ಎನ್ನ ಸೊಲ್ಲಾ ಮುಂದೀ -

ಪರಿಗೃಹದೊರೆವುದು ಸುಲಭವೇನಲ್ಲಾ

¨ರೆ ನಿನ್ನ ಬಿಡೆನೊ ಶ್ರೀ ನಲ್ಲಾ ಎನ್ನ

ಮೊರೆಯ ನಾಲಿಸಿ ನೋಡೋ ವರದೇಶವಿಠಲಾ9

***