ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯೊ ಮನವೆ ಯುಕ್ತಿಯ ಕಳಿಯೋ ನೀ ವಿಷಯಾಸಕ್ತಿಯ ಬಲಿಯೊ ಭಕ್ತಿಯ ಪ
ಪಥ ಹೊಂದು ಈಗ ಹಣ್ಣು ಶರೀರಾಗದಾಗ ನಿನ್ನೊಳು ತಿಳಿ ಬ್ಯಾಗ 1
ಬಲವು ದೇಹಲಿದ್ದಾಗ ಬಲಿಯೊ ಭಾವ ಭಕ್ತಿಲೀಗ ನೆಲೆ ನಿಭಗೊಂಬುವ್ಹಾಂಗೆ ಸಲೆ ಮರೆಹೊಗು ಹೀಂಗ 2
ಬಂದ ಕೈಯಲಿ ಬ್ಯಾಗ ಹೊಂದು ಸದ್ಗುರು ಪಾದೀಗ ಎಂದೆಂದಗಲದ್ಹಾಂಗ ಸಂಧಿಸು ಘನ ಹೀಂಗ 3
ಸೋಹ್ಯದೋರುವ ಕೈಯ ಧ್ಯಾಯಿಸೊ ನೀ ಶ್ರೀಹರಿಯ ನ್ಯಾಯ ನಿನಗೆ ನಿಶ್ಚಯ ಇಹಪರಾಶ್ರಯ 4
ಗುರುಪಾದ ಕಂಡಾಕ್ಷಣ ಎರಗೊ ಮಹಿಪತಿ ಪೂರ್ಣ ಹರಿಯೊ ಅಹಂಭಾವಗುಣ ಬೆರಿಯೊ ನಿರ್ಗುಣ 5
****