Showing posts with label ಮಾರುತೀ ಸೇವಕನ ಮಾಡೋ ಮಾರುತೀ others. Show all posts
Showing posts with label ಮಾರುತೀ ಸೇವಕನ ಮಾಡೋ ಮಾರುತೀ others. Show all posts

Friday, 27 December 2019

ಮಾರುತೀ ಸೇವಕನ ಮಾಡೋ ಮಾರುತೀ others

ಮಾರುತಿ  ಸೇವಕನ ಮಾಡೋ  ಮಾರುತಿ
ಸೇವಕನ ಮಾಡೋ ನಿನ್ನಂತೆ ನನ್ನ
ಸೇವಕನ ಮಾಡೋ ರಾಮಚಂದ್ರನ
ಸೇವಿಸಿ  ಪೂಜಿಸಿ ರಾಮಚಂದ್ರನ
ಸೇವಿಸಿ ಪೂಜಿಸಿ ರಾಮಚಂದ್ರನ

ಧನ್ಯನಾಗುವಂತೆ ಹರಸಿ ನನ್ನ
ಸೇವಕನ ಮಾಡೋ ನಿನ್ನಂತೆ ನನ್ನ ..... ಮಾರುತಿ ..... ।।


ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲಾ
ಸೇವೆಯು ನೀಡುವ ಮಹದಾನಂದ ಬಣ್ಣಿಸೆ  ಮಾತುಗಳಿಲ್ಲಾ
ಸೇವೆಯು ಕೊಡುವ ಫಲದ ಕಲ್ಪನೆ  ಕಲ್ಪವೃಕ್ಷಕೂ   ಇಲ್ಲಾ
ಸೇವಕನ ಮಾಡೋ ನಿನ್ನಂತೆ ನನ್ನ ...
ಸೇವಕನ ಮಾಡೋ ನಿನ್ನಂತೆ ನನ್ನ.....  ಮಾರುತಿ.... ।।


ಸೇವಕನಂದೆ ನಂದಿಗೆ ದೊರಕಿತು ಕೈಲಾಸದಲಿ ಸ್ಥಾನ
ಸೇವಕನಾಗಿ ಗರುಡನು ಪಡೆದ ವೈಕುಂಠದಲಿ ತಾಣ
ಸೇವಕನಾದರೆ ನನ್ನಲಿ ಆಗ ಕರಗುವುದು ಅಜ್ಞಾನ
ಸೇವಕನ ಮಾಡೋ ನಿನ್ನಂತೆ ನನ್ನ ...
ಸೇವಕನ ಮಾಡೋ ನಿನ್ನಂತೆ ನನ್ನ.....  ಮಾರುತಿ.... ।।


ಸೇವಕನಾಗಿ ಎಲ್ಲಾ  ಶಕ್ತಿಯೂ  ನಿನ್ನ ಕೈ ಸೇರಿತು ಹನುಮ
ಪೂಜೆಯ ಹೊಂದುವ ಭಾಗ್ಯ ನೀಡಿತು ನಿನಗಾರಾಮ  ನಾಮ
ನನ್ನೀ ಜನುಮವು ಸಾರ್ಥಕ ತಂದೆ ಪಡೆದರೆ ನಿನ್ನಾ  ಪ್ರೇಮ ......
ಸೇವಕನ ಮಾಡೋ ನಿನ್ನಂತೆ ನನ್ನ ...
ಸೇವಕನ ಮಾಡೋ ನಿನ್ನಂತೆ ನನ್ನ.... ಮಾರುತಿ.... ।।
********