Showing posts with label ಕಾಲ ಕಾಳೆದೆವಲ್ಲ ಜ್ಞಾನ ಬರಲಿಲ್ಲವಲ್ಲ purandara vittala. Show all posts
Showing posts with label ಕಾಲ ಕಾಳೆದೆವಲ್ಲ ಜ್ಞಾನ ಬರಲಿಲ್ಲವಲ್ಲ purandara vittala. Show all posts

Thursday, 5 December 2019

ಕಾಲ ಕಾಳೆದೆವಲ್ಲ ಜ್ಞಾನ ಬರಲಿಲ್ಲವಲ್ಲ purandara vittala

ರಾಗ ಪುನ್ನಾವರಾಳಿ ಛಾಪುತಾಳ 

ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ ||ಪ||
ಕಾಲನವರು ಕರೆಯಬಂದರೆ ಏನು ಹೇಳಲಿ ಸೊಲ್ಲ ||ಅ||

ಬಾಲನಾಗಿ ಜನಿಸಿ , ತಾಯ ಮೊಲೆಗೆ ಭ್ರಮಿಸಿ
ಹಾಲು ಬೆಣ್ಣೆ ಉಣಿಸಿ , ಹಸುಗೂಸು ಎಂದೆನಿಸಿ ||

ಚೆಂಡುಬುಗರಿಯಾಡಿ , ಚೆಲುವ ವಸನ ಬೇಡಿ
ಹಿಂಡು ದುಷ್ಟರ ಕೂಡಿ , ಕ್ರೂರಕೃತ್ಯ ಮಾಡಿ ||

ಪ್ರಾಯದಲಿ ಸಿಕ್ಕಿ , ಮಾಯದಲಿ ಸೊಕ್ಕಿ
ಸ್ತ್ರೀಯರೊಡನೆ ಮಿಕ್ಕಿ , ಹೇಯ ಬುದ್ಧಿಲಿ ಸಿಕ್ಕಿ ||

ಮಕ್ಕಳಾಧೀನದಿ ಸಿಕ್ಕಿದೆ ದೈನ್ಯದಿ
ಕಕ್ಕುಲತಿ ಬುದ್ಧಿ ಕೊಕ್ಕದಿಟ್ಟು ಮೋದದಿ ||

ರಾಮಪೂಜೆಯನ್ನು ಮಾಡಲಿಲ್ಲವು ಇನ್ನು
ಸ್ವಾಮಿ ಪುರಂದರವಿಠಲನ್ನ ಪ್ರೇಮಕ್ಕೆ ದೂರನು ||
***

pallavi

kAla kaLedevalla jnAna baralillavalla

anupallavi

kAlanavaru kareya bandare Enu hELali solla

caraNam 1

bAlanAgi janisi tAya molege bhramisi hAlu beNNe uNisi hasukUsu endenisi

caraNam 2

ceNDu bugariyADi celuva vasana bEDi hiNDu duSTara kUDi krUra krtya mADi

caraNam 3

prAyadalli sikki mAyadalli sokki strIyaroDane mikki hEya buddhili sikki

caraNam 4

mangaLAdhInadi sikkide dainyadi kakkulate buddhi kokkadiTTu mOdadi

caraNam 5

rAma pUjeyannu mADalillivu innu svAmi purandara viTTalanna prEmakke dUranu
***