..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ಎಂದಿಗೆ ನೀ ಯೆನ್ನ ಮುಂದಕೆ ಬರುವೆಯೊ
ಸುಂದರ ಮೂರುತಿಯೆ ನಂದದಿ ಭಕುತರ
ವೃಂದಗಳೆಲ್ಲವ ಸಂದೇಹವಿಲ್ಲದೆ
ಮುಂದಕೆ ಕರದೊಯ್ವೆ ಪ
ಪಂಕಜಾಕ್ಷನೆ ನೀನು ಕಿಂಕರ ಜನರಾ-
ತಂಕಗಳೆಲ್ಲವ ಶಂಕಿಸದೆ
ವೆಂಕಟನಾಮಕ ಸಂಕಟಪರಿºರವಿವ-
ಳಾಂಕರನÀರವ ನಿಶ್ಶಂಕೆಯಿಂದಲಿಯಿತ್ತು 1
ಆರುವೈರಿಗಳೆನ್ನ ಗಾರುಮಾಡುವರಯ್ಯಾ
ಆರು ಕಾವರು ಇಲ್ಲಾ ಮಾರಜನಕನೆ
ಪಾರುಗಾಣಿಸದೆ ನೀ ದೂರಗೈಸಲು ಯನ್ನ-
ನಾರು ರಕ್ಷಿಪರೊ ದೋಷವಿದೂರನೆ ಪೇಳೋ 2
ಯರಬೆರಡೆನಾಗಿತ್ತು ಪೊರಿಯೋ ದೇವರ ದೇವ
ಕರುಣಾಬ್ಧಿ ನೀನೆಂದು ವರವೋದು ಶ್ರುತಿಯು
ಶರಣಾಗತನನ್ನು ಪೊರೆಯದೆ ಬಿಡುವಂದು
ಸರಿಯೇನೋ ಕರುಣಾಳು ಸಿರಿವತ್ಸಾಂಕಿತನೆ 3
***