..
kruti by shantibai dasaru ಶಾಂತಿಬಾಯಿ ದಾಸರು
ದೇವಾ ನಿನ್ನ ಪಾದವನ್ನು ಯಾವಾಗಲೂ ಸ್ಮರಿಸುವೆನೂ
ಭಾವ ಭಕ್ತಿ ಪ್ರೇಮವಿತ್ತು ಕಾವುವೆನ್ನ ಹರಿಯೇ ನೀನು ಪ
ದೀನನಾಥನೆಂಬ ಬಿರುದಾ ಮಾನಭಕ್ತರಿಂದ ಪೊರೆದಾ
ಹೀನ ದೀನನಾದ ಎನ್ನಾ ಜ್ಞಾನವಿತ್ತು ರಕ್ಷಿಪುದು 1
ಇಂದಿರೇಶ ನಾರಾಯಣಾ ಬೃದದಿಂದಾ ಭಜಿಪೆ ನಿನ್ನಾ
ಮಂದಮತಿಯ ಕಳೆದು ನಿಜಾನಂದದೊಳಗಿರಿಸೊ ಯನ್ನಾ 2
ಬೇಡಿಕೊಂಬೆನೀಗ ನಿನ್ನಾ ನೋಡುವುದು ಕೃಪೆಯೊಳೆನ್ನಾ]
ಬಿಡಬ್ಯಾಡಾ ಬ್ಯಾರೆನಗೆ ಇಡೊ ಇಡೊ ನಿನ್ನೊಳೆನ್ನಾ 3
ಚಿಂತೆಗಳನ್ನೆಲ್ಲಾ ತೊರಿಸೊ ಸಂತ ಸಂಗದೊಳಿರಿಸೊ
ಕಂತುಪಿತನೆ ಗುರುವೆ ಎನ್ನಾ ಶಾಂತಿ ಪದವ ಪಾಲಿಸೊ 4
***