ಶ್ರೀ ಚೈತ್ರಗೌರೀ ಪರವಾದ ಸಂಪ್ರದಾಯದ ಪದ
ಕೋಲು ಕೋಲೆನ್ನ ಕೋಲೆ, ಕೋಲು ಕೋಲೆನ್ನ ಕೋಲೆ |
ಕೋಲು ಶ್ರೀ ಲಕ್ಷ್ಮೀ ವೆಂಕಟನ್ನ ಬಲಗೊಂಬೆ || ಕೋಲೆ || ಪ ||
ಚೈತ್ರ ಶುದ್ಧ ತ್ರಿತಿಯಾದಿ ಮಿತ್ರೆ ಗೌರಿಯು ತನ್ನ |
ಅರ್ಥಿಯ ತೌರೂರಿಗೆಂದು ಬರುತಾಳೆ || ಕೋಲೆ ||
ಅರ್ಥಿಯ ತೌರೂರಿಗೆಂದು ಮುತ್ತಿನ ಅಂದಣವನೇರಿ |
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಎತ್ತಿಕೊಂಡು || ಕೋಲೆ || ೧ ||
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಬರುವಾಗ|
ಛತ್ರ ಚಾಮರವ ಪಿಡಿದು ಸೇವಕರು || ಕೋಲೆ ||
ಛತ್ರ ಚಾಮರವ ಪಿಡಿದು ಭಕ್ತಿಯಿಂದ ಸೇವಕರು |
ಮತ್ತೆ ಬಹು ಪರಾಕವನು ಹೇಳುವರು || ಕೋಲೆ || || ೨ ||
ವರುಷ ಪ್ರಾರಂಭದಲ್ಲಿ ಗಿರಿಜೆಯನು ಪೂಜಿಸಲು |
ಸರಸದ ಉಯ್ಯಾಲೆಯಲಿ | ಗೌರಿಯನಿಟ್ಟು || ಕೋಲೆ ||
ಗಿರಿಯ ಮೇಲೆ ಗೌರಿಯನಿಟ್ಟು | ವರ ಧಾನ್ಯದಪೈರುಬೆಳೆಸಿ |
ಅರಿಷಿಣದೋಕುಳಿ ತುಂಬಿ ಕಳಶವಿಡು || ಕೋಲೆ || || ೩ ||
ಮುದದಿ ಕಳಶ ಕನ್ನಡಿಯ ಪದುಮ ನಯನೆಯರೆಲ್ಲ ಪಿಡಿದು |
ಎದುರುಗೊಂಡು ಗೌರಮ್ಮಗೆ ಕದಲಾರುತಿಯ || ಕೋಲೆ ||
ಎದುರುಗೊಂಡು ಗೌರಮ್ಮಗೆ ಕದಲಾರುತಿ ಎತ್ತುವಾಗ|
ಸುದತಿ ಗೌರಮ್ಮ ನಗುತಾಳೆ || ಕೋಲೆ || || ೪ ||
ಸಿರಿ ವಸಂತ ಕಾಲವಿದು | ಅರಳು ಮಲ್ಲಿಗೆ ವನದಿ |
ಹರದಿ ಗೌರಮ್ಮಗೆ ಅರಮನೆಯು || ಕೋಲೆ ||
ಅರಮನೆಯ ಸುತ್ತುಮುತ್ತು | ಹರಿವ ತಿಳಿ ನೀರ ಝರಿ |
ಮರಿ ಪಕ್ಷಿ ಸ್ವರವ ಕೇಳು || ಕೋಲೆ || || ೫ ||
ಮಲ್ಲಿಗೆ ತೈಲವ ತಂದು | ನಲ್ಲೆ ಗೌರಿಗೆ ಹಚ್ಚಿ |
ಸಲ್ಲಲಿತ ಪನ್ನೀರು ಎರೆಯುವೆನು || ಕೋಲೆ ||
ಸಲ್ಲಲಿತ ಪನ್ನೀರು ಚೆಲ್ವೆ ಶಂಕರಿಗೆರೆದು |
ಪಾಲ್ಮಡ್ಡಿ ಸುವಾಸಿತ ಧೂಪ ಹಾಕಿ || ಕೋಲೆ || || ೬ ||
ಪೀತಾಂಬರ ನೆರಿಗೆ ಕಟ್ಟಿ | ಮುತ್ತಿನ ಕಂಚುಕ ತೊಡಿಸಿ |
ರತ್ನ ಕೆತ್ತಿದ ಸರ್ವಾ | ಭರಣವಿಟ್ಟು || ಕೋಲೆ ||
ಹತ್ತು ಬೆರಳಿಗೆ ದಿವ್ಯ ಚಿತ್ರದುಂಗುರವಿಟ್ಟು |
ಮತ್ತೆ ಸರಪಳಿ ಕಟ್ಟಿ ಅಲಂಕಾರ || ಕೋಲೆ || || ೭ ||
ಚಂದ್ರ ಮುರುವು ಚಳ ತುಂಬು | ಛಂದದ ಮುತ್ತಿನ ಓಲೆ |
ಕುಂದಣ ಕೆತ್ತಿದ ಬುಗುಡಿ ಬಾವಲಿಯು || ಕೋಲೆ ||
ಸುಂದರಿ ಗೌರಮ್ಮಗೆ ಅಂದದ ಬುಲಾಕು ಮುಖಿರೆ |
ಇಂದುವ ಪೋಲುವ ಮುಖಕೆ ಕುಂಕುಮವು || ಕೋಲೆ || || ೮ ||
ಚಂದ್ರನ್ನ ಪೋಲುವ ಮುಖಕೆ | ಗಂಧ ಕಸ್ತೂರಿ ತಿಲಕ |
ನಂದಿವಾಹನ ಸತಿಗೆ | ಅಡ್ಡಿಕೆಯು || ಕೋಲೆ ||
ನಂದಿವಾಹನನ್ನ ಸತಿಗೆ | ಚಂದ್ರ ಹಾರ ಕಾಸಿನ ಸರ |
ಸಿಂಧೂರ ಗಮನೆ ಸತಿಗೆ ಸಾಲು ಮುತ್ತಿನಹಾರ || ಕೋಲೆ || ೯ ||
ಹರಳಿನಡ್ಡಿಕೆ ಕಂಠಿ | ಸರಿಗೆ, ಸಮಜೋಡು ತಾಯ್ತ |
ಸರವು ನವರತ್ನಪಟ್ಟಿ | ಒಡ್ಡ್ಯಾಣವು || ಕೋಲೆ ||
ಹರಡಿ ಹಸ್ತ ಕಡಗ ನಾಗಮುರುಗಿ ವಂಕಿ |
ಪೌಂಛ ಕಡಗ, ದ್ವಾರ ಕಡಗ ಗೀರುಬಳೆ | ತೋಡ್ಯವಿಟ್ಟು || ಕೋಲೆ || || ೧೦ ||
ಘಿಲ್ಲು ಘಿಲ್ಲು ಗೆಜ್ಜೆ ಪೆಂಡೆ | ಲುಲ್ಲುರುಳಿ ಪೈಝಣಿ |
ಪಿಲ್ಲೆ ಕಾಲುಂಗುರವು ಮೆಂಟಕಿಯು || ಕೋಲೆ ||
ಪಿಲ್ಲೆ ಕಾಲುಂಗುರದ ಚೆಲ್ವ ಪಾದಗಳಿಗೆ ನಾನು |
ಉಲ್ಹಾಸದಿ ಚಾವಡಿಯ ಬರೆಯುವೆನು || ಕೋಲೆ || || ೧೧ ||
ಅರಿಷಿಣ ಚಾವಡಿಯಲ್ಲಿ ಹರುಷದಿ ರೇಖೆಯ ತಿದ್ದಿ |
ಅರಸಿ ಶಂಕರಿಗೀಗ ಎರಗುವೆನು || ಕೋಲೆ ||
ಹೆರಳು ಬಂಗಾರ ಕಟ್ಟಿ | ಹರಳಿನ ರಾಗಟೆ ಹಾಕಿ |
ತಿರಗಣಿಯ ಹರಳು ಹೂವು ಅರಳೆಲೆಯು || ಕೋಲೆ || || ೧೨ ||
ತಿರಗಣಿಯ ಹರಳು ಹೂವು ಅರಳು ಮಲ್ಲಿಗೆ ಜಾಜಿ |
ಸುರಗಿ ಸೇವಂತಿಗೆಯ ದಂಡೆ ಮುಡಿಸಿ || ಕೋಲೆ ||
ಸುರಗಿ ಸೇವಂತಿಗೆಯು | ಸುರ ಪಾರಿಜಾತದ ಪುಷ್ಪ |
ಅರಳಿದ ಚಂಪಕದ ಮಾಲೆ ಸೂಸುವವು || ಕೋಲೆ || || ೧೩ ||
ಹೆಸರು ಕಡಲೆಬೇಳೆಯ ಹಸಿಯ ಕೋಸಂಬರಿಯು |
ಹಸನಾದ ಮಜ್ಜಿಗೆ ಪಾನಕವು ಮಾವು || ಕೋಲೆ ||
ಹಸನಾದ ಮಜ್ಜಿಗೆಯ ಪಾನಕವು ಮಾವಿನ್ಹಣ್ಣು ವಿಳ್ಯ |
ಕುಸುಮಗಂಧಿ ಗೌರಮ್ಮಗೆ ನೈವೇದ್ಯವು || ಕೋಲೆ || || ೧೪ ||
ಪಾನಕ ಕೋಸಂಬರಿಯು ಮಜ್ಜಿಗೆ | ಜಾಣೆ ತ್ರಿಪುರ ಸುಂದರಿಗೆ|
ಎಲೆ ಅಡಿಕೆಯ ತಾಂಬೂಲ | ಜೇನುತುಪ್ಪ ಮಾವಿನ ಫಲವಿಡುವೆ || ಕೋಲೆ ||
ಜೇನುತುಪ್ಪ ಮಾವಿನ ಫಲವಿಟ್ಟು ಜಾನಕಿ ಕಾಂತನ |
ಮನದಲ್ಲಿ ನೆನೆಯುವೆನು || ಕೋಲೆ || || ೧೫ ||
ಸ್ವಚ್ಛವಾದ ಧಾನ್ಯಗಳ ತುಂಬಿ | ಬಿಚ್ಚೋಲೆ ಕರಿಮಣಿಗಳ ಹಾಕಿ |
ಬಿಚ್ಚೋಲೆ ಕರಿಮಣಿಗಳ ಹಾಕಿ | ಹಚ್ಚ ಹಸುರಿನ ವಸ್ತ್ರಗಳಿರಿಸಿ || ಕೋಲೆ ||
ಹಚ್ಚ ಹಸುರಿನ ವಸ್ತ್ರಗಳ ಇರಿಸಿ |
ಮುಚ್ಚು ಮರದ ಬಾಗಿಣಗಳ ಕೊಡುವೆನು || ಕೋಲೆ || || ೧೬ ||
ಕರಿಮಣಿ ಬಿಚ್ಚೋಲೆ ಕನ್ನಡಿ | ಸರ್ವ ಧಾನ್ಯಗಳ ತುಂಬಿ |
ಮರದ ಬಾಗಿಣ ವಸ್ತ್ರ ದಕ್ಷಿಣೆಯು || ಕೋಲೆ ||
ಕರವ ಪಿಡಿಯೆ ತಾಯಿ ಗೌರಿ | ಹರುಷದಿ ಬಾಗಿಣ ಕೊಡುವೆ |
ಸ್ಥಿರವಾಗಿ ಮುತ್ತೈದೆ ತನವ | ಎನಗೆ ನೀಡು || ಕೋಲೆ || || ೧೭||
ಶುಕ್ರ ಮಂಗಳವಾರಗಳಲ್ಲಿ | ಸುವಾಸಿನಿಯರ ಕರೆದು |
ಅಕ್ಕರೆಯಿಂದ ಸುವಾಸಿನಿಯರಿಗೆ | ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ || ಕೋಲೆ ||
ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ |
ಅಕ್ಕ ಪಾರ್ವತಿ ನಿನಗರ್ಪಿಸುವೆನು || ಕೋಲೆ || || ೧೮ ||
ತೂಗುಮಣೆ ಮಂಚದಲ್ಲಿ ಭೋಗದ ಹಾಸಿಗೆ ಹಾಸಿ |
ನಾಗಸಂಪಿಗೆ ಹೂವು ವರಗನಿಟ್ಟು ಕೋಲೆ || ಕೋಲೆ ||
ನಾಗಸಂಪಿಗೆ ಒರಗು ಭೋಗಿ ಭೂಷಣನ ಕೂಡಿ |
ಭೋಗಿಭೂಷಣ ಗೌರಿಯ ತೂಗುವೆನು || ಕೋಲೆ || || ೧೯ ||
ತಿಂಗಳು ಮೀರಲು ಅಂಗನೆ ನಿನ್ನಯ | ಹೊಂಗಳಶವ ಕೊಂತಿಗಳ ಸಮೇತ |
ಕೊಂತಿಗಳ ಸಮೇತ | ಮಂಗಳ ಜಲದಿ ವಿಸರ್ಜಿಸಿ || ಕೋಲೆ ||
ಮಂಗಳ ಜಲದಿ ವಿಸರ್ಜಿಸಿ |
ಶ್ರೀಹರಿ ರಂಗ ನಾಗಶಯನ ನಿನಗರ್ಪಿಸುವೆನು || ಕೋಲೆ || ೨೦ ||
ಮೂರು ತದಿಗೆಯ ಈ ವೃತ | ಭಾರಿ ಭಕ್ತಿಯಿಂದ ಗೈಯೆ |
ಮಾರ ಹರನಾರ್ಧಾಂಗಿ ಒಲಿಯುವಳು || ಕೋಲೆ ||
ಮೂರನೆಯ ಅಕ್ಷಯತದಿಗೆ | ಭಾರಿ ಔತಣದೂಟ |
ಗೌರಿ ಹೆಸರಿನಲ್ಲಿ ಮುತ್ತೈದೆಗಿಡು || ಕೋಲೆ || || ೨೧ ||
ಹರಿಯೇ ಸರ್ವೋತ್ತಮನು | ಸಿರಿಯೇ ಆತನ ಸತಿ |
ಭಾರತಿರಮಣ ಮುಖ್ಯಪ್ರಾಣ ಗುರುವು || ಕೋಲೆ ||
ತಾರ ತಮ್ಯ ಪಂಚಭೇದ | ಮಾರುತನ ಮತದ ಜ್ಞಾನ |
ಸೂರಿ ಜನ ಸಂಗವಿತ್ತು ಸಲಹೆನ್ನ || ಕೋಲೆ || || ೨೨ ||
ಪತಿ, ಪುತ್ರ, ಬಂಧು, ಬಳಗ | ಹಿತವಾಗಿಹ ಭೋಗ ಭಾಗ್ಯ |
ರತಿ ಪತಿ ಪಿತನ ಭಕ್ತಿ | ಮತಿಯ ಕೇಳು || ಕೋಲೆ ||
ಹಿತದಿ ಹರನ ಅಂಕದಲ್ಲಿ ಸ್ಥಿತಳಾಗಿಹ ಗೌರಿ ಕಳಶ |
ಸತಿಯರಿಂದೊಡಗೂಡಿ ವನದಿ ಇಳುಹು || ಕೋಲೆ || || ೨೩ ||
ವರುಷಕ್ಕೊಮ್ಮೆ ಕರೆದು ಬಲು | ಹರುಷದಿ ಪೂಜಿಸುತಲಿ |
ಹರನ ರಾಣಿಯಲ್ಲಿರುವ ಹರಿಗರ್ಪಿಸು || ಕೋಲೆ ||
ಧರಣಿ ಜಾನಕಿ ಪತಿ | ಮಾರುತಿ ವಲ್ಲಭ ರಾಮ |
ಕರುಣಿಸಿ ನಾಗೇಶ ಶಯನ ಪೊರೆಯುವನು || ಕೋಲೆ || ೨೪ ||
**********
chaithra maasa gowri tritheeya haadu
ಕೋಲು ಕೋಲೆನ್ನ ಕೋಲೆ, ಕೋಲು ಕೋಲೆನ್ನ ಕೋಲೆ |
ಕೋಲು ಶ್ರೀ ಲಕ್ಷ್ಮೀ ವೆಂಕಟನ್ನ ಬಲಗೊಂಬೆ ಕೋಲೆ ಪ
ಚೈತ್ರ ಶುದ್ಧ ತ್ರಿತಿಯಾದಿ ಮಿತ್ರೆ ಗೌರಿಯು ತನ್ನ |
ಅರ್ಥಿಯ ತೌರೂರಿಗೆಂದು ಬರುತಾಳೆ ಕೋಲೆ
ಅರ್ಥಿಯ ತೌರೂರಿಗೆಂದು ಮುತ್ತಿನ ಅಂದಣವನೇರಿ |
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಎತ್ತಿಕೊಂಡು ಕೋಲೆ ೧
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಬರುವಾಗ|
ಛತ್ರ ಚಾಮರವ ಪಿಡಿದು ಸೇವಕರು ಕೋಲೆ
ಛತ್ರ ಚಾಮರವ ಪಿಡಿದು ಭಕ್ತಿಯಿಂದ ಸೇವಕರು |
ಮತ್ತೆ ಬಹು ಪರಾಕವನು ಹೇಳುವರು ಕೋಲೆ ೨
ವರುಷ ಪ್ರಾರಂಭದಲ್ಲಿ ಗಿರಿಜೆಯನು ಪೂಜಿಸಲು |
ಸರಸದ ಉಯ್ಯಾಲೆಯಲಿ | ಗೌರಿಯನಿಟ್ಟು ಕೋಲೆ
ಗಿರಿಯ ಮೇಲೆ ಗೌರಿಯನಿಟ್ಟು | ವರ ಧಾನ್ಯದಪೈರುಬೆಳೆಸಿ |
ಅರಿಷಿಣದೋಕುಳಿ ತುಂಬಿ ಕಳಶವಿಡು ಕೋಲೆ ೩
ಮುದದಿ ಕಳಶ ಕನ್ನಡಿಯ ಪದುಮ ನಯನೆಯರೆಲ್ಲ ಪಿಡಿದು |
ಎದುರುಗೊಂಡು ಗೌರಮ್ಮಗೆ ಕದಲಾರುತಿಯ ಕೋಲೆ
ಎದುರುಗೊಂಡು ಗೌರಮ್ಮಗೆ ಕದಲಾರುತಿ ಎತ್ತುವಾಗ|
ಸುದತಿ ಗೌರಮ್ಮ ನಗುತಾಳೆ ಕೋಲೆ ೪
ಸಿರಿ ವಸಂತ ಕಾಲವಿದು | ಅರಳು ಮಲ್ಲಿಗೆ ವನದಿ |
ಹರದಿ ಗೌರಮ್ಮಗೆ ಅರಮನೆಯು ಕೋಲೆ
ಅರಮನೆಯ ಸುತ್ತುಮುತ್ತು | ಹರಿವ ತಿಳಿ ನೀರ ಝರಿ |
ಮರಿ ಪಕ್ಷಿ ಸ್ವರವ ಕೇಳು ಕೋಲೆ ೫
ಮಲ್ಲಿಗೆ ತೈಲವ ತಂದು | ನಲ್ಲೆ ಗೌರಿಗೆ ಹಚ್ಚಿ |
ಸಲ್ಲಲಿತ ಪನ್ನೀರು ಎರೆಯುವೆನು ಕೋಲೆ
ಸಲ್ಲಲಿತ ಪನ್ನೀರು ಚೆಲ್ವೆ ಶಂಕರಿಗೆರೆದು |
ಪಾಲ್ಮಡ್ಡಿ ಸುವಾಸಿತ ಧೂಪ ಹಾಕಿ ಕೋಲೆ ೬
ಪೀತಾಂಬರ ನೆರಿಗೆ ಕಟ್ಟಿ | ಮುತ್ತಿನ ಕಂಚುಕ ತೊಡಿಸಿ |
ರತ್ನ ಕೆತ್ತಿದ ಸರ್ವಾ | ಭರಣವಿಟ್ಟು ಕೋಲೆ
ಹತ್ತು ಬೆರಳಿಗೆ ದಿವ್ಯ ಚಿತ್ರದುಂಗುರವಿಟ್ಟು |
ಮತ್ತೆ ಸರಪಳಿ ಕಟ್ಟಿ ಅಲಂಕಾರ ಕೋಲೆ ೭
ಚಂದ್ರ ಮುರುವು ಚಳ ತುಂಬು | ಛಂದದ ಮುತ್ತಿನ ಓಲೆ |
ಕುಂದಣ ಕೆತ್ತಿದ ಬುಗುಡಿ ಬಾವಲಿಯು ಕೋಲೆ
ಸುಂದರಿ ಗೌರಮ್ಮಗೆ ಅಂದದ ಬುಲಾಕು ಮುಖಿರೆ |
ಇಂದುವ ಪೋಲುವ ಮುಖಕೆ ಕುಂಕುಮವು ಕೋಲೆ ೮
ಚಂದ್ರನ್ನ ಪೋಲುವ ಮುಖಕೆ | ಗಂಧ ಕಸ್ತೂರಿ ತಿಲಕ |
ನಂದಿವಾಹನ ಸತಿಗೆ | ಅಡ್ಡಿಕೆಯು ಕೋಲೆ
ನಂದಿವಾಹನನ್ನ ಸತಿಗೆ | ಚಂದ್ರ ಹಾರ ಕಾಸಿನ ಸರ |
ಸಿಂಧೂರ ಗಮನೆ ಸತಿಗೆ ಸಾಲು ಮುತ್ತಿನಹಾರ ಕೋಲೆ ೯
ಹರಳಿನಡ್ಡಿಕೆ ಕಂಠಿ | ಸರಿಗೆ, ಸಮಜೋಡು ತಾಯ್ತ |
ಸರವು ನವರತ್ನಪಟ್ಟಿ | ಒಡ್ಡ್ಯಾಣವು ಕೋಲೆ
ಹರಡಿ ಹಸ್ತ ಕಡಗ ನಾಗಮುರುಗಿ ವಂಕಿ |
ಪೌಂಛ ಕಡಗ, ದ್ವಾರ ಕಡಗ ಗೀರುಬಳೆ | ತೋಡ್ಯವಿಟ್ಟು ಕೋಲೆ ೧೦
ಘಿಲ್ಲು ಘಿಲ್ಲು ಗೆಜ್ಜೆ ಪೆಂಡೆ | ಲುಲ್ಲುರುಳಿ ಪೈಝಣಿ |
ಪಿಲ್ಲೆ ಕಾಲುಂಗುರವು ಮೆಂಟಕಿಯು ಕೋಲೆ
ಪಿಲ್ಲೆ ಕಾಲುಂಗುರದ ಚೆಲ್ವ ಪಾದಗಳಿಗೆ ನಾನು |
ಉಲ್ಹಾಸದಿ ಚಾವಡಿಯ ಬರೆಯುವೆನು ಕೋಲೆ ೧೧
ಅರಿಷಿಣ ಚಾವಡಿಯಲ್ಲಿ ಹರುಷದಿ ರೇಖೆಯ ತಿದ್ದಿ |
ಅರಸಿ ಶಂಕರಿಗೀಗ ಎರಗುವೆನು ಕೋಲೆ
ಹೆರಳು ಬಂಗಾರ ಕಟ್ಟಿ | ಹರಳಿನ ರಾಗಟೆ ಹಾಕಿ |
ತಿರಗಣಿಯ ಹರಳು ಹೂವು ಅರಳೆಲೆಯು ಕೋಲೆ ೧೨
ತಿರಗಣಿಯ ಹರಳು ಹೂವು ಅರಳು ಮಲ್ಲಿಗೆ ಜಾಜಿ |
ಸುರಗಿ ಸೇವಂತಿಗೆಯ ದಂಡೆ ಮುಡಿಸಿ ಕೋಲೆ
ಸುರಗಿ ಸೇವಂತಿಗೆಯು | ಸುರ ಪಾರಿಜಾತದ ಪುಷ್ಪ |
ಅರಳಿದ ಚಂಪಕದ ಮಾಲೆ ಸೂಸುವವು ಕೋಲೆ ೧೩
ಹೆಸರು ಕಡಲೆಬೇಳೆಯ ಹಸಿಯ ಕೋಸಂಬರಿಯು |
ಹಸನಾದ ಮಜ್ಜಿಗೆ ಪಾನಕವು ಮಾವು ಕೋಲೆ
ಹಸನಾದ ಮಜ್ಜಿಗೆಯ ಪಾನಕವು ಮಾವಿನ್ಹಣ್ಣು ವಿಳ್ಯ |
ಕುಸುಮಗಂಧಿ ಗೌರಮ್ಮಗೆ ನೈವೇದ್ಯವು ಕೋಲೆ ೧೪
ಪಾನಕ ಕೋಸಂಬರಿಯು ಮಜ್ಜಿಗೆ | ಜಾಣೆ ತ್ರಿಪುರ ಸುಂದರಿಗೆ|
ಎಲೆ ಅಡಿಕೆಯ ತಾಂಬೂಲ | ಜೇನುತುಪ್ಪ ಮಾವಿನ ಫಲವಿಡುವೆ ಕೋಲೆ
ಜೇನುತುಪ್ಪ ಮಾವಿನ ಫಲವಿಟ್ಟು ಜಾನಕಿ ಕಾಂತನ |
ಮನದಲ್ಲಿ ನೆನೆಯುವೆನು ಕೋಲೆ ೧೫
ಸ್ವಚ್ಛವಾದ ಧಾನ್ಯಗಳ ತುಂಬಿ | ಬಿಚ್ಚೋಲೆ ಕರಿಮಣಿಗಳ ಹಾಕಿ |
ಬಿಚ್ಚೋಲೆ ಕರಿಮಣಿಗಳ ಹಾಕಿ | ಹಚ್ಚ ಹಸುರಿನ ವಸ್ತ್ರಗಳಿರಿಸಿ ಕೋಲೆ
ಹಚ್ಚ ಹಸುರಿನ ವಸ್ತ್ರಗಳ ಇರಿಸಿ |
ಮುಚ್ಚು ಮರದ ಬಾಗಿಣಗಳ ಕೊಡುವೆನು ಕೋಲೆ ೧೬
ಕರಿಮಣಿ ಬಿಚ್ಚೋಲೆ ಕನ್ನಡಿ | ಸರ್ವ ಧಾನ್ಯಗಳ ತುಂಬಿ |
ಮರದ ಬಾಗಿಣ ವಸ್ತ್ರ ದಕ್ಷಿಣೆಯು ಕೋಲೆ
ಕರವ ಪಿಡಿಯೆ ತಾಯಿ ಗೌರಿ | ಹರುಷದಿ ಬಾಗಿಣ ಕೊಡುವೆ |
ಸ್ಥಿರವಾಗಿ ಮುತ್ತೈದೆ ತನವ | ಎನಗೆ ನೀಡು ಕೋಲೆ ೧೭
ಶುಕ್ರ ಮಂಗಳವಾರಗಳಲ್ಲಿ | ಸುವಾಸಿನಿಯರ ಕರೆದು |
ಅಕ್ಕರೆಯಿಂದ ಸುವಾಸಿನಿಯರಿಗೆ | ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ ಕೋಲೆ
ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ |
ಅಕ್ಕ ಪಾರ್ವತಿ ನಿನಗರ್ಪಿಸುವೆನು ಕೋಲೆ ೧೮
ತೂಗುಮಣೆ ಮಂಚದಲ್ಲಿ ಭೋಗದ ಹಾಸಿಗೆ ಹಾಸಿ |
ನಾಗಸಂಪಿಗೆ ಹೂವು ವರಗನಿಟ್ಟು ಕೋಲೆ ಕೋಲೆ
ನಾಗಸಂಪಿಗೆ ಒರಗು ಭೋಗಿ ಭೂಷಣನ ಕೂಡಿ |
ಭೋಗಿಭೂಷಣ ಗೌರಿಯ ತೂಗುವೆನು ಕೋಲೆ ೧೯
ತಿಂಗಳು ಮೀರಲು ಅಂಗನೆ ನಿನ್ನಯ | ಹೊಂಗಳಶವ ಕೊಂತಿಗಳ ಸಮೇತ |
ಕೊಂತಿಗಳ ಸಮೇತ | ಮಂಗಳ ಜಲದಿ ವಿಸರ್ಜಿಸಿ ಕೋಲೆ
ಮಂಗಳ ಜಲದಿ ವಿಸರ್ಜಿಸಿ |
ಶ್ರೀಹರಿ ರಂಗ ನಾಗಶಯನ ನಿನಗರ್ಪಿಸುವೆನು ಕೋಲೆ ೨೦
ಮೂರು ತದಿಗೆಯ ಈ ವೃತ | ಭಾರಿ ಭಕ್ತಿಯಿಂದ ಗೈಯೆ |
ಮಾರ ಹರನಾರ್ಧಾಂಗಿ ಒಲಿಯುವಳು ಕೋಲೆ
ಮೂರನೆಯ ಅಕ್ಷಯತದಿಗೆ | ಭಾರಿ ಔತಣದೂಟ |
ಗೌರಿ ಹೆಸರಿನಲ್ಲಿ ಮುತ್ತೈದೆಗಿಡು ಕೋಲೆ ೨೧
ಹರಿಯೇ ಸರ್ವೋತ್ತಮನು | ಸಿರಿಯೇ ಆತನ ಸತಿ |
ಭಾರತಿರಮಣ ಮುಖ್ಯಪ್ರಾಣ ಗುರುವು ಕೋಲೆ
ತಾರ ತಮ್ಯ ಪಂಚಭೇದ | ಮಾರುತನ ಮತದ ಜ್ಞಾನ |
ಸೂರಿ ಜನ ಸಂಗವಿತ್ತು ಸಲಹೆನ್ನ ಕೋಲೆ ೨೨
ಪತಿ, ಪುತ್ರ, ಬಂಧು, ಬಳಗ | ಹಿತವಾಗಿಹ ಭೋಗ ಭಾಗ್ಯ |
ರತಿ ಪತಿ ಪಿತನ ಭಕ್ತಿ | ಮತಿಯ ಕೇಳು ಕೋಲೆ
ಹಿತದಿ ಹರನ ಅಂಕದಲ್ಲಿ ಸ್ಥಿತಳಾಗಿಹ ಗೌರಿ ಕಳಶ |
ಸತಿಯರಿಂದೊಡಗೂಡಿ ವನದಿ ಇಳುಹು ಕೋಲೆ ೨೩
ವರುಷಕ್ಕೊಮ್ಮೆ ಕರೆದು ಬಲು | ಹರುಷದಿ ಪೂಜಿಸುತಲಿ |
ಹರನ ರಾಣಿಯಲ್ಲಿರುವ ಹರಿಗರ್ಪಿಸು ಕೋಲೆ
ಧರಣಿ ಜಾನಕಿ ಪತಿ | ಮಾರುತಿ ವಲ್ಲಭ ರಾಮ |
ಕರುಣಿಸಿ ನಾಗೇಶ ಶಯನ ಪೊರೆಯುವನು ಕೋಲೆ ೨೪
kOlu kOlenna kOle, kOlu kOlenna kOle |
kOlu SrI lakShmI venkaTanna balagoMbe kOle pa
caitra Suddha tritiyAdi mitre gauriyu tanna |
arthiya taurUrigendu barutALe kOle
arthiya taurUrigendu muttina andaNavanEri |
putra gaNapa skandarannu ettikonDu ettikoMDu kOle 1
putra gaNapa skandarannu ettikonDu baruvAga|
Catra cAmarava piDidu sEvakaru kOle
Catra cAmarava piDidu Baktiyinda sEvakaru |
matte bahu parAkavanu hELuvaru kOle 2
varuSha prAraMBadalli girijeyanu pUjisalu |
sarasada uyyAleyali | gauriyaniTTu kOle
giriya mEle gauriyaniTTu | vara dhAnyadapairubeLesi |
ariShiNadOkuLi tuMbi kaLaSaviDu kOle 3
mudadi kaLaSa kannaDiya paduma nayaneyarella piDidu |
edurugonDu gaurammage kadalArutiya kOle
edurugonDu gaurammage kadalAruti ettuvAga|
sudati gauramma nagutALe kOle 4
siri vasanta kAlavidu | araLu mallige vanadi |
haradi gaurammage aramaneyu kOle
aramaneya suttumuttu | hariva tiLi nIra Jari |
mari pakShi svarava kELu kOle 5
mallige tailava tandu | nalle gaurige hacci |
sallalita pannIru ereyuvenu kOle
sallalita pannIru celve Sankarigeredu |
pAlmaDDi suvAsita dhUpa hAki kOle 6
pItAMbara nerige kaTTi | muttina kancuka toDisi |
ratna kettida sarvA | BaraNaviTTu kOle
hattu beraLige divya citradunguraviTTu |
matte sarapaLi kaTTi alankAra kOle 7
caMdra muruvu caLa tuMbu | Candada muttina Ole |
kuMdaNa kettida buguDi bAvaliyu kOle
suMdari gaurammage andada bulAku muKire |
iMduva pOluva muKake kuMkumavu kOle 8
chandranna pOluva muKake | gandha kastUri tilaka |
nandivAhana satige | aDDikeyu kOle
nandivAhananna satige | chandra hAra kAsina sara |
sindhUra gamane satige sAlu muttinahAra kOle 9
haraLinaDDike kanThi | sarige, samajODu tAyta |
saravu navaratnapaTTi | oDDyANavu kOle
haraDi hasta kaDaga nAgamurugi vanki |
paunCa kaDaga, dvAra kaDaga gIrubaLe | tODyaviTTu kOle 10
Gillu Gillu gejje penDe | lulluruLi paiJaNi |
pille kAlunguravu menTakiyu kOle
pille kAlungurada celva pAdagaLige nAnu |
ulhAsadi cAvaDiya bareyuvenu kOle 11
ariShiNa cAvaDiyalli haruShadi rEKeya tiddi |
arasi SankarigIga eraguvenu kOle
heraLu bangAra kaTTi | haraLina rAgaTe hAki |
tiragaNiya haraLu hUvu araLeleyu kOle 12
tiragaNiya haraLu hUvu araLu mallige jAji |
suragi sEvantigeya danDe muDisi kOle
suragi sEvantigeyu | sura pArijAtada puShpa |
araLida caMpakada mAle sUsuvavu kOle 13
hesaru kaDalebELeya hasiya kOsaMbariyu |
hasanAda majjige pAnakavu mAvu kOle
hasanAda majjigeya pAnakavu mAvinhaNNu viLya |
kusumagandhi gaurammage naivEdyavu kOle 14
pAnaka kOsaMbariyu majjige | jANe tripura sundarige|
ele aDikeya tAMbUla | jEnutuppa mAvina PalaviDuve kOle
jEnutuppa mAvina PalaviTTu jAnaki kAntana |
manadalli neneyuvenu kOle 15
svacCavAda dhAnyagaLa tuMbi | biccOle karimaNigaLa hAki |
biccOle karimaNigaLa hAki | hacca hasurina vastragaLirisi kOle
hacca hasurina vastragaLa irisi |
muccu marada bAgiNagaLa koDuvenu kOle 16
karimaNi biccOle kannaDi | sarva dhAnyagaLa tuMbi |
marada bAgiNa vastra dakShiNeyu kOle
karava piDiye tAyi gauri | haruShadi bAgiNa koDuve |
sthiravAgi muttaide tanava | enage nIDu kOle 17
Sukra mangaLavAragaLalli | suvAsiniyara karedu |
akkareyinda suvAsiniyarige | sakkare kShIra pakvAnnavanuNisi kOle
sakkare kShIra pakvAnnavanuNisi |
akka pArvati ninagarpisuvenu kOle 18
tUgumaNe mancadalli BOgada hAsige hAsi |
nAgasaMpige hUvu varaganiTTu kOle kOle
nAgasaMpige oragu BOgi BUShaNana kUDi |
BOgiBUShaNa gauriya tUguvenu kOle 19
tingaLu mIralu angane ninnaya | hongaLaSava kontigaLa samEta |
kontigaLa samEta | maMgaLa jaladi visarjisi kOle
mangaLa jaladi visarjisi |
SrIhari ranga nAgaSayana ninagarpisuvenu kOle 20
mUru tadigeya I vRuta | BAri Baktiyinda gaiye |
mAra haranArdhAngi oliyuvaLu kOle
mUraneya akShayatadige | BAri autaNadUTa |
gauri hesarinalli muttaidegiDu kOle 21
hariyE sarvOttamanu | siriyE Atana sati |
BAratiramaNa muKyaprANa guruvu kOle
tAra tamya pancaBEda | mArutana matada j~jAna |
sUri jana sangavittu salahenna kOle 22
pati, putra, bandhu, baLaga | hitavAgiha BOga BAgya |
rati pati pitana Bakti | matiya kELu kOle
hitadi harana ankadalli sthitaLAgiha gauri kaLaSa |
satiyarindoDagUDi vanadi iLuhu kOle 23
varuShakkomme karedu balu | haruShadi pUjisutali |
harana rANiyalliruva harigarpisu kOle
dharaNi jAnaki pati | mAruti vallaBa rAma |
karuNisi nAgESa Sayana poreyuvanu kOle 24
*****