Friday, 27 December 2019

ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ಲಕ್ಷ್ಮೀ ಸಂಪ್ರದಾಯ ಹಾಡು ankita nageshashayana chaithra maasa gowri tritheeya haadu SAMPRADAYA


Kannada traditional song in praise of Shree Chaitra Gouri

ಶ್ರೀ ಚೈತ್ರಗೌರೀ ಪರವಾದ ಸಂಪ್ರದಾಯದ ಪದ

ಕೋಲು ಕೋಲೆನ್ನ ಕೋಲೆ, ಕೋಲು ಕೋಲೆನ್ನ ಕೋಲೆ |
ಕೋಲು ಶ್ರೀ ಲಕ್ಷ್ಮೀ ವೆಂಕಟನ್ನ ಬಲಗೊಂಬೆ || ಕೋಲೆ || ಪ ||

ಚೈತ್ರ ಶುದ್ಧ ತ್ರಿತಿಯಾದಿ ಮಿತ್ರೆ ಗೌರಿಯು ತನ್ನ |
ಅರ್ಥಿಯ ತೌರೂರಿಗೆಂದು ಬರುತಾಳೆ || ಕೋಲೆ ||
ಅರ್ಥಿಯ ತೌರೂರಿಗೆಂದು ಮುತ್ತಿನ ಅಂದಣವನೇರಿ |
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಎತ್ತಿಕೊಂಡು || ಕೋಲೆ || ೧ ||

ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಬರುವಾಗ|
ಛತ್ರ ಚಾಮರವ ಪಿಡಿದು ಸೇವಕರು || ಕೋಲೆ ||
ಛತ್ರ ಚಾಮರವ ಪಿಡಿದು ಭಕ್ತಿಯಿಂದ ಸೇವಕರು |
ಮತ್ತೆ ಬಹು ಪರಾಕವನು ಹೇಳುವರು || ಕೋಲೆ || || ೨ ||

ವರುಷ ಪ್ರಾರಂಭದಲ್ಲಿ ಗಿರಿಜೆಯನು ಪೂಜಿಸಲು |
ಸರಸದ ಉಯ್ಯಾಲೆಯಲಿ | ಗೌರಿಯನಿಟ್ಟು || ಕೋಲೆ ||
ಗಿರಿಯ ಮೇಲೆ ಗೌರಿಯನಿಟ್ಟು | ವರ ಧಾನ್ಯದಪೈರುಬೆಳೆಸಿ |
ಅರಿಷಿಣದೋಕುಳಿ ತುಂಬಿ ಕಳಶವಿಡು || ಕೋಲೆ || || ೩ ||

ಮುದದಿ ಕಳಶ ಕನ್ನಡಿಯ ಪದುಮ ನಯನೆಯರೆಲ್ಲ ಪಿಡಿದು |
ಎದುರುಗೊಂಡು ಗೌರಮ್ಮಗೆ ಕದಲಾರುತಿಯ || ಕೋಲೆ ||
ಎದುರುಗೊಂಡು ಗೌರಮ್ಮಗೆ ಕದಲಾರುತಿ ಎತ್ತುವಾಗ|
ಸುದತಿ ಗೌರಮ್ಮ ನಗುತಾಳೆ || ಕೋಲೆ || || ೪ ||

ಸಿರಿ ವಸಂತ ಕಾಲವಿದು | ಅರಳು ಮಲ್ಲಿಗೆ ವನದಿ |
ಹರದಿ ಗೌರಮ್ಮಗೆ ಅರಮನೆಯು || ಕೋಲೆ ||
ಅರಮನೆಯ ಸುತ್ತುಮುತ್ತು | ಹರಿವ ತಿಳಿ ನೀರ ಝರಿ |
ಮರಿ ಪಕ್ಷಿ ಸ್ವರವ ಕೇಳು || ಕೋಲೆ || || ೫ ||

ಮಲ್ಲಿಗೆ ತೈಲವ ತಂದು | ನಲ್ಲೆ ಗೌರಿಗೆ ಹಚ್ಚಿ |
ಸಲ್ಲಲಿತ ಪನ್ನೀರು ಎರೆಯುವೆನು || ಕೋಲೆ ||
ಸಲ್ಲಲಿತ ಪನ್ನೀರು ಚೆಲ್ವೆ ಶಂಕರಿಗೆರೆದು |
ಪಾಲ್ಮಡ್ಡಿ ಸುವಾಸಿತ ಧೂಪ ಹಾಕಿ || ಕೋಲೆ || || ೬ ||

ಪೀತಾಂಬರ ನೆರಿಗೆ ಕಟ್ಟಿ | ಮುತ್ತಿನ ಕಂಚುಕ ತೊಡಿಸಿ |
ರತ್ನ ಕೆತ್ತಿದ ಸರ್ವಾ | ಭರಣವಿಟ್ಟು || ಕೋಲೆ ||
ಹತ್ತು ಬೆರಳಿಗೆ ದಿವ್ಯ ಚಿತ್ರದುಂಗುರವಿಟ್ಟು |
ಮತ್ತೆ ಸರಪಳಿ ಕಟ್ಟಿ ಅಲಂಕಾರ || ಕೋಲೆ || || ೭ ||

ಚಂದ್ರ ಮುರುವು ಚಳ ತುಂಬು | ಛಂದದ ಮುತ್ತಿನ ಓಲೆ |
ಕುಂದಣ ಕೆತ್ತಿದ ಬುಗುಡಿ ಬಾವಲಿಯು || ಕೋಲೆ ||
ಸುಂದರಿ ಗೌರಮ್ಮಗೆ ಅಂದದ ಬುಲಾಕು ಮುಖಿರೆ |
ಇಂದುವ ಪೋಲುವ ಮುಖಕೆ ಕುಂಕುಮವು || ಕೋಲೆ || || ೮ ||

ಚಂದ್ರನ್ನ ಪೋಲುವ ಮುಖಕೆ | ಗಂಧ ಕಸ್ತೂರಿ ತಿಲಕ |
ನಂದಿವಾಹನ ಸತಿಗೆ | ಅಡ್ಡಿಕೆಯು || ಕೋಲೆ ||
ನಂದಿವಾಹನನ್ನ ಸತಿಗೆ | ಚಂದ್ರ ಹಾರ ಕಾಸಿನ ಸರ |
ಸಿಂಧೂರ ಗಮನೆ ಸತಿಗೆ ಸಾಲು ಮುತ್ತಿನಹಾರ || ಕೋಲೆ || ೯ ||

ಹರಳಿನಡ್ಡಿಕೆ ಕಂಠಿ | ಸರಿಗೆ, ಸಮಜೋಡು ತಾಯ್ತ |
ಸರವು ನವರತ್ನಪಟ್ಟಿ | ಒಡ್ಡ್ಯಾಣವು || ಕೋಲೆ ||
ಹರಡಿ ಹಸ್ತ ಕಡಗ ನಾಗಮುರುಗಿ ವಂಕಿ |
ಪೌಂಛ ಕಡಗ, ದ್ವಾರ ಕಡಗ ಗೀರುಬಳೆ | ತೋಡ್ಯವಿಟ್ಟು || ಕೋಲೆ || || ೧೦ ||

ಘಿಲ್ಲು ಘಿಲ್ಲು ಗೆಜ್ಜೆ ಪೆಂಡೆ | ಲುಲ್ಲುರುಳಿ ಪೈಝಣಿ |
ಪಿಲ್ಲೆ ಕಾಲುಂಗುರವು ಮೆಂಟಕಿಯು || ಕೋಲೆ ||
ಪಿಲ್ಲೆ ಕಾಲುಂಗುರದ ಚೆಲ್ವ ಪಾದಗಳಿಗೆ ನಾನು |
ಉಲ್ಹಾಸದಿ ಚಾವಡಿಯ ಬರೆಯುವೆನು || ಕೋಲೆ || || ೧೧ ||

ಅರಿಷಿಣ ಚಾವಡಿಯಲ್ಲಿ ಹರುಷದಿ ರೇಖೆಯ ತಿದ್ದಿ |
ಅರಸಿ ಶಂಕರಿಗೀಗ ಎರಗುವೆನು || ಕೋಲೆ ||
ಹೆರಳು ಬಂಗಾರ ಕಟ್ಟಿ | ಹರಳಿನ ರಾಗಟೆ ಹಾಕಿ |
ತಿರಗಣಿಯ ಹರಳು ಹೂವು ಅರಳೆಲೆಯು || ಕೋಲೆ || || ೧೨ ||

ತಿರಗಣಿಯ ಹರಳು ಹೂವು ಅರಳು ಮಲ್ಲಿಗೆ ಜಾಜಿ |
ಸುರಗಿ ಸೇವಂತಿಗೆಯ ದಂಡೆ ಮುಡಿಸಿ || ಕೋಲೆ ||
ಸುರಗಿ ಸೇವಂತಿಗೆಯು | ಸುರ ಪಾರಿಜಾತದ ಪುಷ್ಪ |
ಅರಳಿದ ಚಂಪಕದ ಮಾಲೆ ಸೂಸುವವು || ಕೋಲೆ || || ೧೩ ||

ಹೆಸರು ಕಡಲೆಬೇಳೆಯ ಹಸಿಯ ಕೋಸಂಬರಿಯು |
ಹಸನಾದ ಮಜ್ಜಿಗೆ ಪಾನಕವು ಮಾವು || ಕೋಲೆ ||
ಹಸನಾದ ಮಜ್ಜಿಗೆಯ ಪಾನಕವು ಮಾವಿನ್ಹಣ್ಣು ವಿಳ್ಯ |
ಕುಸುಮಗಂಧಿ ಗೌರಮ್ಮಗೆ ನೈವೇದ್ಯವು || ಕೋಲೆ || || ೧೪ ||

ಪಾನಕ ಕೋಸಂಬರಿಯು ಮಜ್ಜಿಗೆ | ಜಾಣೆ ತ್ರಿಪುರ ಸುಂದರಿಗೆ|
ಎಲೆ ಅಡಿಕೆಯ ತಾಂಬೂಲ | ಜೇನುತುಪ್ಪ ಮಾವಿನ ಫಲವಿಡುವೆ || ಕೋಲೆ ||
ಜೇನುತುಪ್ಪ ಮಾವಿನ ಫಲವಿಟ್ಟು ಜಾನಕಿ ಕಾಂತನ |
ಮನದಲ್ಲಿ ನೆನೆಯುವೆನು || ಕೋಲೆ || || ೧೫ ||
ಸ್ವಚ್ಛವಾದ ಧಾನ್ಯಗಳ ತುಂಬಿ | ಬಿಚ್ಚೋಲೆ ಕರಿಮಣಿಗಳ ಹಾಕಿ |
ಬಿಚ್ಚೋಲೆ ಕರಿಮಣಿಗಳ ಹಾಕಿ | ಹಚ್ಚ ಹಸುರಿನ ವಸ್ತ್ರಗಳಿರಿಸಿ || ಕೋಲೆ ||
ಹಚ್ಚ ಹಸುರಿನ ವಸ್ತ್ರಗಳ ಇರಿಸಿ |
ಮುಚ್ಚು ಮರದ ಬಾಗಿಣಗಳ ಕೊಡುವೆನು || ಕೋಲೆ || || ೧೬ ||

ಕರಿಮಣಿ ಬಿಚ್ಚೋಲೆ ಕನ್ನಡಿ | ಸರ್ವ ಧಾನ್ಯಗಳ ತುಂಬಿ |
ಮರದ ಬಾಗಿಣ ವಸ್ತ್ರ ದಕ್ಷಿಣೆಯು || ಕೋಲೆ ||
ಕರವ ಪಿಡಿಯೆ ತಾಯಿ ಗೌರಿ | ಹರುಷದಿ ಬಾಗಿಣ ಕೊಡುವೆ |
ಸ್ಥಿರವಾಗಿ ಮುತ್ತೈದೆ ತನವ | ಎನಗೆ ನೀಡು || ಕೋಲೆ || || ೧೭||

ಶುಕ್ರ ಮಂಗಳವಾರಗಳಲ್ಲಿ | ಸುವಾಸಿನಿಯರ ಕರೆದು |
ಅಕ್ಕರೆಯಿಂದ ಸುವಾಸಿನಿಯರಿಗೆ | ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ || ಕೋಲೆ ||
ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ |
ಅಕ್ಕ ಪಾರ್ವತಿ ನಿನಗರ್ಪಿಸುವೆನು || ಕೋಲೆ || || ೧೮ ||

ತೂಗುಮಣೆ ಮಂಚದಲ್ಲಿ ಭೋಗದ ಹಾಸಿಗೆ ಹಾಸಿ |
ನಾಗಸಂಪಿಗೆ ಹೂವು ವರಗನಿಟ್ಟು ಕೋಲೆ || ಕೋಲೆ ||
ನಾಗಸಂಪಿಗೆ ಒರಗು ಭೋಗಿ ಭೂಷಣನ ಕೂಡಿ |
ಭೋಗಿಭೂಷಣ ಗೌರಿಯ ತೂಗುವೆನು || ಕೋಲೆ || || ೧೯ ||

ತಿಂಗಳು ಮೀರಲು ಅಂಗನೆ ನಿನ್ನಯ | ಹೊಂಗಳಶವ ಕೊಂತಿಗಳ ಸಮೇತ |
ಕೊಂತಿಗಳ ಸಮೇತ | ಮಂಗಳ ಜಲದಿ ವಿಸರ್ಜಿಸಿ || ಕೋಲೆ ||
ಮಂಗಳ ಜಲದಿ ವಿಸರ್ಜಿಸಿ |
ಶ್ರೀಹರಿ ರಂಗ ನಾಗಶಯನ ನಿನಗರ್ಪಿಸುವೆನು || ಕೋಲೆ || ೨೦ ||

ಮೂರು ತದಿಗೆಯ ಈ ವೃತ | ಭಾರಿ ಭಕ್ತಿಯಿಂದ ಗೈಯೆ |
ಮಾರ ಹರನಾರ್ಧಾಂಗಿ ಒಲಿಯುವಳು || ಕೋಲೆ ||
ಮೂರನೆಯ ಅಕ್ಷಯತದಿಗೆ | ಭಾರಿ ಔತಣದೂಟ |
ಗೌರಿ ಹೆಸರಿನಲ್ಲಿ ಮುತ್ತೈದೆಗಿಡು || ಕೋಲೆ || || ೨೧ ||

ಹರಿಯೇ ಸರ್ವೋತ್ತಮನು | ಸಿರಿಯೇ ಆತನ ಸತಿ |
ಭಾರತಿರಮಣ ಮುಖ್ಯಪ್ರಾಣ ಗುರುವು || ಕೋಲೆ ||
ತಾರ ತಮ್ಯ ಪಂಚಭೇದ | ಮಾರುತನ ಮತದ ಜ್ಞಾನ |
ಸೂರಿ ಜನ ಸಂಗವಿತ್ತು ಸಲಹೆನ್ನ || ಕೋಲೆ || || ೨೨ ||

ಪತಿ, ಪುತ್ರ, ಬಂಧು, ಬಳಗ | ಹಿತವಾಗಿಹ ಭೋಗ ಭಾಗ್ಯ |
ರತಿ ಪತಿ ಪಿತನ ಭಕ್ತಿ | ಮತಿಯ ಕೇಳು || ಕೋಲೆ ||
ಹಿತದಿ ಹರನ ಅಂಕದಲ್ಲಿ ಸ್ಥಿತಳಾಗಿಹ ಗೌರಿ ಕಳಶ |
ಸತಿಯರಿಂದೊಡಗೂಡಿ ವನದಿ ಇಳುಹು || ಕೋಲೆ || || ೨೩ ||

ವರುಷಕ್ಕೊಮ್ಮೆ ಕರೆದು ಬಲು | ಹರುಷದಿ ಪೂಜಿಸುತಲಿ |
ಹರನ ರಾಣಿಯಲ್ಲಿರುವ ಹರಿಗರ್ಪಿಸು || ಕೋಲೆ ||
ಧರಣಿ ಜಾನಕಿ ಪತಿ | ಮಾರುತಿ ವಲ್ಲಭ ರಾಮ |
ಕರುಣಿಸಿ ನಾಗೇಶ ಶಯನ ಪೊರೆಯುವನು || ಕೋಲೆ || ೨೪ ||
**********

chaithra maasa gowri tritheeya haadu

ಕೋಲು ಕೋಲೆನ್ನ ಕೋಲೆ, ಕೋಲು ಕೋಲೆನ್ನ ಕೋಲೆ |
ಕೋಲು ಶ್ರೀ ಲಕ್ಷ್ಮೀ ವೆಂಕಟನ್ನ ಬಲಗೊಂಬೆ  ಕೋಲೆ  ಪ

ಚೈತ್ರ ಶುದ್ಧ ತ್ರಿತಿಯಾದಿ ಮಿತ್ರೆ ಗೌರಿಯು ತನ್ನ |
ಅರ್ಥಿಯ ತೌರೂರಿಗೆಂದು ಬರುತಾಳೆ  ಕೋಲೆ
ಅರ್ಥಿಯ ತೌರೂರಿಗೆಂದು ಮುತ್ತಿನ ಅಂದಣವನೇರಿ |
ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಎತ್ತಿಕೊಂಡು  ಕೋಲೆ  ೧

ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಬರುವಾಗ|
ಛತ್ರ ಚಾಮರವ ಪಿಡಿದು ಸೇವಕರು  ಕೋಲೆ
ಛತ್ರ ಚಾಮರವ ಪಿಡಿದು ಭಕ್ತಿಯಿಂದ ಸೇವಕರು |
ಮತ್ತೆ ಬಹು ಪರಾಕವನು ಹೇಳುವರು  ಕೋಲೆ   ೨

ವರುಷ ಪ್ರಾರಂಭದಲ್ಲಿ ಗಿರಿಜೆಯನು ಪೂಜಿಸಲು |
ಸರಸದ ಉಯ್ಯಾಲೆಯಲಿ | ಗೌರಿಯನಿಟ್ಟು  ಕೋಲೆ
ಗಿರಿಯ ಮೇಲೆ ಗೌರಿಯನಿಟ್ಟು | ವರ ಧಾನ್ಯದಪೈರುಬೆಳೆಸಿ |
ಅರಿಷಿಣದೋಕುಳಿ ತುಂಬಿ ಕಳಶವಿಡು  ಕೋಲೆ   ೩

ಮುದದಿ ಕಳಶ ಕನ್ನಡಿಯ ಪದುಮ ನಯನೆಯರೆಲ್ಲ ಪಿಡಿದು |
ಎದುರುಗೊಂಡು ಗೌರಮ್ಮಗೆ ಕದಲಾರುತಿಯ  ಕೋಲೆ
ಎದುರುಗೊಂಡು ಗೌರಮ್ಮಗೆ ಕದಲಾರುತಿ ಎತ್ತುವಾಗ|
ಸುದತಿ ಗೌರಮ್ಮ ನಗುತಾಳೆ  ಕೋಲೆ   ೪

ಸಿರಿ ವಸಂತ ಕಾಲವಿದು | ಅರಳು ಮಲ್ಲಿಗೆ ವನದಿ |
ಹರದಿ ಗೌರಮ್ಮಗೆ ಅರಮನೆಯು  ಕೋಲೆ
ಅರಮನೆಯ ಸುತ್ತುಮುತ್ತು | ಹರಿವ ತಿಳಿ ನೀರ ಝರಿ |
ಮರಿ ಪಕ್ಷಿ ಸ್ವರವ ಕೇಳು  ಕೋಲೆ   ೫

ಮಲ್ಲಿಗೆ ತೈಲವ ತಂದು | ನಲ್ಲೆ ಗೌರಿಗೆ ಹಚ್ಚಿ |
ಸಲ್ಲಲಿತ ಪನ್ನೀರು ಎರೆಯುವೆನು  ಕೋಲೆ
ಸಲ್ಲಲಿತ ಪನ್ನೀರು ಚೆಲ್ವೆ ಶಂಕರಿಗೆರೆದು |
ಪಾಲ್ಮಡ್ಡಿ ಸುವಾಸಿತ ಧೂಪ ಹಾಕಿ  ಕೋಲೆ   ೬

ಪೀತಾಂಬರ ನೆರಿಗೆ ಕಟ್ಟಿ | ಮುತ್ತಿನ ಕಂಚುಕ ತೊಡಿಸಿ |
ರತ್ನ ಕೆತ್ತಿದ ಸರ್ವಾ | ಭರಣವಿಟ್ಟು  ಕೋಲೆ
ಹತ್ತು ಬೆರಳಿಗೆ ದಿವ್ಯ ಚಿತ್ರದುಂಗುರವಿಟ್ಟು |
ಮತ್ತೆ ಸರಪಳಿ ಕಟ್ಟಿ ಅಲಂಕಾರ  ಕೋಲೆ   ೭

ಚಂದ್ರ ಮುರುವು ಚಳ ತುಂಬು | ಛಂದದ ಮುತ್ತಿನ ಓಲೆ |
ಕುಂದಣ ಕೆತ್ತಿದ ಬುಗುಡಿ ಬಾವಲಿಯು  ಕೋಲೆ
ಸುಂದರಿ ಗೌರಮ್ಮಗೆ ಅಂದದ ಬುಲಾಕು ಮುಖಿರೆ |
ಇಂದುವ ಪೋಲುವ ಮುಖಕೆ ಕುಂಕುಮವು  ಕೋಲೆ   ೮

ಚಂದ್ರನ್ನ ಪೋಲುವ ಮುಖಕೆ | ಗಂಧ ಕಸ್ತೂರಿ ತಿಲಕ |
ನಂದಿವಾಹನ ಸತಿಗೆ | ಅಡ್ಡಿಕೆಯು  ಕೋಲೆ
ನಂದಿವಾಹನನ್ನ ಸತಿಗೆ | ಚಂದ್ರ ಹಾರ ಕಾಸಿನ ಸರ |
ಸಿಂಧೂರ ಗಮನೆ ಸತಿಗೆ ಸಾಲು ಮುತ್ತಿನಹಾರ  ಕೋಲೆ  ೯

ಹರಳಿನಡ್ಡಿಕೆ ಕಂಠಿ | ಸರಿಗೆ, ಸಮಜೋಡು ತಾಯ್ತ |
ಸರವು ನವರತ್ನಪಟ್ಟಿ | ಒಡ್ಡ್ಯಾಣವು  ಕೋಲೆ
ಹರಡಿ ಹಸ್ತ ಕಡಗ ನಾಗಮುರುಗಿ ವಂಕಿ |
ಪೌಂಛ ಕಡಗ, ದ್ವಾರ ಕಡಗ ಗೀರುಬಳೆ | ತೋಡ್ಯವಿಟ್ಟು  ಕೋಲೆ   ೧೦

ಘಿಲ್ಲು ಘಿಲ್ಲು ಗೆಜ್ಜೆ ಪೆಂಡೆ | ಲುಲ್ಲುರುಳಿ ಪೈಝಣಿ |
ಪಿಲ್ಲೆ ಕಾಲುಂಗುರವು ಮೆಂಟಕಿಯು  ಕೋಲೆ
ಪಿಲ್ಲೆ ಕಾಲುಂಗುರದ ಚೆಲ್ವ ಪಾದಗಳಿಗೆ ನಾನು |
ಉಲ್ಹಾಸದಿ ಚಾವಡಿಯ ಬರೆಯುವೆನು  ಕೋಲೆ   ೧೧

ಅರಿಷಿಣ ಚಾವಡಿಯಲ್ಲಿ ಹರುಷದಿ ರೇಖೆಯ ತಿದ್ದಿ |
ಅರಸಿ ಶಂಕರಿಗೀಗ ಎರಗುವೆನು  ಕೋಲೆ
ಹೆರಳು ಬಂಗಾರ ಕಟ್ಟಿ | ಹರಳಿನ ರಾಗಟೆ ಹಾಕಿ |
ತಿರಗಣಿಯ ಹರಳು ಹೂವು ಅರಳೆಲೆಯು  ಕೋಲೆ   ೧೨

ತಿರಗಣಿಯ ಹರಳು ಹೂವು ಅರಳು ಮಲ್ಲಿಗೆ ಜಾಜಿ |
ಸುರಗಿ ಸೇವಂತಿಗೆಯ ದಂಡೆ ಮುಡಿಸಿ  ಕೋಲೆ
ಸುರಗಿ ಸೇವಂತಿಗೆಯು | ಸುರ ಪಾರಿಜಾತದ ಪುಷ್ಪ |
ಅರಳಿದ ಚಂಪಕದ ಮಾಲೆ ಸೂಸುವವು  ಕೋಲೆ   ೧೩

ಹೆಸರು ಕಡಲೆಬೇಳೆಯ ಹಸಿಯ ಕೋಸಂಬರಿಯು |
ಹಸನಾದ ಮಜ್ಜಿಗೆ ಪಾನಕವು ಮಾವು  ಕೋಲೆ
ಹಸನಾದ ಮಜ್ಜಿಗೆಯ ಪಾನಕವು ಮಾವಿನ್ಹಣ್ಣು ವಿಳ್ಯ |
ಕುಸುಮಗಂಧಿ ಗೌರಮ್ಮಗೆ ನೈವೇದ್ಯವು  ಕೋಲೆ   ೧೪

ಪಾನಕ ಕೋಸಂಬರಿಯು ಮಜ್ಜಿಗೆ | ಜಾಣೆ ತ್ರಿಪುರ ಸುಂದರಿಗೆ|
ಎಲೆ ಅಡಿಕೆಯ ತಾಂಬೂಲ | ಜೇನುತುಪ್ಪ ಮಾವಿನ ಫಲವಿಡುವೆ  ಕೋಲೆ
ಜೇನುತುಪ್ಪ ಮಾವಿನ ಫಲವಿಟ್ಟು ಜಾನಕಿ ಕಾಂತನ |
ಮನದಲ್ಲಿ ನೆನೆಯುವೆನು  ಕೋಲೆ   ೧೫
ಸ್ವಚ್ಛವಾದ ಧಾನ್ಯಗಳ ತುಂಬಿ | ಬಿಚ್ಚೋಲೆ ಕರಿಮಣಿಗಳ ಹಾಕಿ |
ಬಿಚ್ಚೋಲೆ ಕರಿಮಣಿಗಳ ಹಾಕಿ | ಹಚ್ಚ ಹಸುರಿನ ವಸ್ತ್ರಗಳಿರಿಸಿ  ಕೋಲೆ
ಹಚ್ಚ ಹಸುರಿನ ವಸ್ತ್ರಗಳ ಇರಿಸಿ |
ಮುಚ್ಚು ಮರದ ಬಾಗಿಣಗಳ ಕೊಡುವೆನು  ಕೋಲೆ   ೧೬

ಕರಿಮಣಿ ಬಿಚ್ಚೋಲೆ ಕನ್ನಡಿ | ಸರ್ವ ಧಾನ್ಯಗಳ ತುಂಬಿ |
ಮರದ ಬಾಗಿಣ ವಸ್ತ್ರ ದಕ್ಷಿಣೆಯು  ಕೋಲೆ
ಕರವ ಪಿಡಿಯೆ ತಾಯಿ ಗೌರಿ | ಹರುಷದಿ ಬಾಗಿಣ ಕೊಡುವೆ |
ಸ್ಥಿರವಾಗಿ ಮುತ್ತೈದೆ ತನವ | ಎನಗೆ ನೀಡು  ಕೋಲೆ   ೧೭

ಶುಕ್ರ ಮಂಗಳವಾರಗಳಲ್ಲಿ | ಸುವಾಸಿನಿಯರ ಕರೆದು |
ಅಕ್ಕರೆಯಿಂದ ಸುವಾಸಿನಿಯರಿಗೆ | ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ  ಕೋಲೆ
ಸಕ್ಕರೆ ಕ್ಷೀರ ಪಕ್ವಾನ್ನವನುಣಿಸಿ |
ಅಕ್ಕ ಪಾರ್ವತಿ ನಿನಗರ್ಪಿಸುವೆನು  ಕೋಲೆ   ೧೮

ತೂಗುಮಣೆ ಮಂಚದಲ್ಲಿ ಭೋಗದ ಹಾಸಿಗೆ ಹಾಸಿ |
ನಾಗಸಂಪಿಗೆ ಹೂವು ವರಗನಿಟ್ಟು ಕೋಲೆ  ಕೋಲೆ
ನಾಗಸಂಪಿಗೆ ಒರಗು ಭೋಗಿ ಭೂಷಣನ ಕೂಡಿ |
ಭೋಗಿಭೂಷಣ ಗೌರಿಯ ತೂಗುವೆನು  ಕೋಲೆ   ೧೯

ತಿಂಗಳು ಮೀರಲು ಅಂಗನೆ ನಿನ್ನಯ | ಹೊಂಗಳಶವ ಕೊಂತಿಗಳ ಸಮೇತ |
ಕೊಂತಿಗಳ ಸಮೇತ | ಮಂಗಳ ಜಲದಿ ವಿಸರ್ಜಿಸಿ  ಕೋಲೆ
ಮಂಗಳ ಜಲದಿ ವಿಸರ್ಜಿಸಿ |
ಶ್ರೀಹರಿ ರಂಗ ನಾಗಶಯನ ನಿನಗರ್ಪಿಸುವೆನು  ಕೋಲೆ  ೨೦

ಮೂರು ತದಿಗೆಯ ಈ ವೃತ | ಭಾರಿ ಭಕ್ತಿಯಿಂದ ಗೈಯೆ |
ಮಾರ ಹರನಾರ್ಧಾಂಗಿ ಒಲಿಯುವಳು  ಕೋಲೆ
ಮೂರನೆಯ ಅಕ್ಷಯತದಿಗೆ | ಭಾರಿ ಔತಣದೂಟ |
ಗೌರಿ ಹೆಸರಿನಲ್ಲಿ ಮುತ್ತೈದೆಗಿಡು  ಕೋಲೆ   ೨೧

ಹರಿಯೇ ಸರ್ವೋತ್ತಮನು | ಸಿರಿಯೇ ಆತನ ಸತಿ |
ಭಾರತಿರಮಣ ಮುಖ್ಯಪ್ರಾಣ ಗುರುವು  ಕೋಲೆ
ತಾರ ತಮ್ಯ ಪಂಚಭೇದ | ಮಾರುತನ ಮತದ ಜ್ಞಾನ |
ಸೂರಿ ಜನ ಸಂಗವಿತ್ತು ಸಲಹೆನ್ನ  ಕೋಲೆ   ೨೨

ಪತಿ, ಪುತ್ರ, ಬಂಧು, ಬಳಗ | ಹಿತವಾಗಿಹ ಭೋಗ ಭಾಗ್ಯ |
ರತಿ ಪತಿ ಪಿತನ ಭಕ್ತಿ | ಮತಿಯ ಕೇಳು  ಕೋಲೆ
ಹಿತದಿ ಹರನ ಅಂಕದಲ್ಲಿ ಸ್ಥಿತಳಾಗಿಹ ಗೌರಿ ಕಳಶ |
ಸತಿಯರಿಂದೊಡಗೂಡಿ ವನದಿ ಇಳುಹು  ಕೋಲೆ   ೨೩

ವರುಷಕ್ಕೊಮ್ಮೆ ಕರೆದು ಬಲು | ಹರುಷದಿ ಪೂಜಿಸುತಲಿ |
ಹರನ ರಾಣಿಯಲ್ಲಿರುವ ಹರಿಗರ್ಪಿಸು  ಕೋಲೆ
ಧರಣಿ ಜಾನಕಿ ಪತಿ | ಮಾರುತಿ ವಲ್ಲಭ ರಾಮ |
ಕರುಣಿಸಿ ನಾಗೇಶ ಶಯನ ಪೊರೆಯುವನು  ಕೋಲೆ  ೨೪

kOlu kOlenna kOle, kOlu kOlenna kOle |
kOlu SrI lakShmI venkaTanna balagoMbe  kOle  pa

caitra Suddha tritiyAdi mitre gauriyu tanna |
arthiya taurUrigendu barutALe  kOle
arthiya taurUrigendu muttina andaNavanEri |
putra gaNapa skandarannu ettikonDu ettikoMDu  kOle  1

putra gaNapa skandarannu ettikonDu baruvAga|
Catra cAmarava piDidu sEvakaru  kOle
Catra cAmarava piDidu Baktiyinda sEvakaru |
matte bahu parAkavanu hELuvaru  kOle   2

varuSha prAraMBadalli girijeyanu pUjisalu |
sarasada uyyAleyali | gauriyaniTTu  kOle
giriya mEle gauriyaniTTu | vara dhAnyadapairubeLesi |
ariShiNadOkuLi tuMbi kaLaSaviDu  kOle   3

mudadi kaLaSa kannaDiya paduma nayaneyarella piDidu |
edurugonDu gaurammage kadalArutiya  kOle
edurugonDu gaurammage kadalAruti ettuvAga|
sudati gauramma nagutALe  kOle   4

siri vasanta kAlavidu | araLu mallige vanadi |
haradi gaurammage aramaneyu  kOle
aramaneya suttumuttu | hariva tiLi nIra Jari |
mari pakShi svarava kELu  kOle   5

mallige tailava tandu | nalle gaurige hacci |
sallalita pannIru ereyuvenu  kOle
sallalita pannIru celve Sankarigeredu |
pAlmaDDi suvAsita dhUpa hAki  kOle   6

pItAMbara nerige kaTTi | muttina kancuka toDisi |
ratna kettida sarvA | BaraNaviTTu  kOle
hattu beraLige divya citradunguraviTTu |
matte sarapaLi kaTTi alankAra  kOle   7

caMdra muruvu caLa tuMbu | Candada muttina Ole |
kuMdaNa kettida buguDi bAvaliyu  kOle
suMdari gaurammage andada bulAku muKire |
iMduva pOluva muKake kuMkumavu  kOle   8

chandranna pOluva muKake | gandha kastUri tilaka |
nandivAhana satige | aDDikeyu  kOle
nandivAhananna satige | chandra hAra kAsina sara |
sindhUra gamane satige sAlu muttinahAra  kOle  9

haraLinaDDike kanThi | sarige, samajODu tAyta |
saravu navaratnapaTTi | oDDyANavu  kOle
haraDi hasta kaDaga nAgamurugi vanki |
paunCa kaDaga, dvAra kaDaga gIrubaLe | tODyaviTTu  kOle   10

Gillu Gillu gejje penDe | lulluruLi paiJaNi |
pille kAlunguravu menTakiyu  kOle
pille kAlungurada celva pAdagaLige nAnu |
ulhAsadi cAvaDiya bareyuvenu  kOle   11

ariShiNa cAvaDiyalli haruShadi rEKeya tiddi |
arasi SankarigIga eraguvenu  kOle
heraLu bangAra kaTTi | haraLina rAgaTe hAki |
tiragaNiya haraLu hUvu araLeleyu  kOle   12

tiragaNiya haraLu hUvu araLu mallige jAji |
suragi sEvantigeya danDe muDisi  kOle
suragi sEvantigeyu | sura pArijAtada puShpa |
araLida caMpakada mAle sUsuvavu  kOle   13

hesaru kaDalebELeya hasiya kOsaMbariyu |
hasanAda majjige pAnakavu mAvu  kOle
hasanAda majjigeya pAnakavu mAvinhaNNu viLya |
kusumagandhi gaurammage naivEdyavu  kOle   14

pAnaka kOsaMbariyu majjige | jANe tripura sundarige|
ele aDikeya tAMbUla | jEnutuppa mAvina PalaviDuve  kOle
jEnutuppa mAvina PalaviTTu jAnaki kAntana |
manadalli neneyuvenu  kOle   15

svacCavAda dhAnyagaLa tuMbi | biccOle karimaNigaLa hAki |
biccOle karimaNigaLa hAki | hacca hasurina vastragaLirisi  kOle
hacca hasurina vastragaLa irisi |
muccu marada bAgiNagaLa koDuvenu  kOle   16

karimaNi biccOle kannaDi | sarva dhAnyagaLa tuMbi |
marada bAgiNa vastra dakShiNeyu  kOle
karava piDiye tAyi gauri | haruShadi bAgiNa koDuve |
sthiravAgi muttaide tanava | enage nIDu  kOle   17

Sukra mangaLavAragaLalli | suvAsiniyara karedu |
akkareyinda suvAsiniyarige | sakkare kShIra pakvAnnavanuNisi  kOle
sakkare kShIra pakvAnnavanuNisi |
akka pArvati ninagarpisuvenu  kOle   18

tUgumaNe mancadalli BOgada hAsige hAsi |
nAgasaMpige hUvu varaganiTTu kOle  kOle
nAgasaMpige oragu BOgi BUShaNana kUDi |
BOgiBUShaNa gauriya tUguvenu  kOle   19

tingaLu mIralu angane ninnaya | hongaLaSava kontigaLa samEta |
kontigaLa samEta | maMgaLa jaladi visarjisi  kOle
mangaLa jaladi visarjisi |
SrIhari ranga nAgaSayana ninagarpisuvenu  kOle  20

mUru tadigeya I vRuta | BAri Baktiyinda gaiye |
mAra haranArdhAngi oliyuvaLu  kOle
mUraneya akShayatadige | BAri autaNadUTa |
gauri hesarinalli muttaidegiDu  kOle   21

hariyE sarvOttamanu | siriyE Atana sati |
BAratiramaNa muKyaprANa guruvu  kOle
tAra tamya pancaBEda | mArutana matada j~jAna |
sUri jana sangavittu salahenna  kOle   22

pati, putra, bandhu, baLaga | hitavAgiha BOga BAgya |
rati pati pitana Bakti | matiya kELu  kOle
hitadi harana ankadalli sthitaLAgiha gauri kaLaSa |
satiyarindoDagUDi vanadi iLuhu  kOle   23

varuShakkomme karedu balu | haruShadi pUjisutali |
harana rANiyalliruva harigarpisu  kOle
dharaNi jAnaki pati | mAruti vallaBa rAma |
karuNisi nAgESa Sayana poreyuvanu  kOle  24
*****


No comments:

Post a Comment