..
kruti by radhabai
ರಾಯ ಬಾರೋ | ತಂದೆ ತಾಯಿ ಬಾರೋ ಅ
ನ್ಯಾಯವಾಗಿ ಕಾಲಕಳೆದೆನು ಕಾಯಬಾರೋ ಪ
ಅನುದಿನದಲಿ ನಿನ್ನ ಸ್ಮರಣೆಯ ಮಾಡದೆ ಕೆಟ್ಟೆನಯ್ಯ
ಕಷ್ಟಗಳನೆ ಕಳೆದಿಷ್ಟವ ಸಲ್ಲಿಸಿ ರಕ್ಷಿಸೊ ನೀನು 1
ಜಪತಪ ಮಾಡದೆ ಪಾಪವಗಳಿಸಿದೆ ಕೃಪೆ ಮಾಡು ಗುರುವೇ
ತಾಪವ ಹರಿಸು ಪ್ರೀತಿಯ ತೋರಿಸು ಪೋಷಿಸುನೀನು 2
ಕನಸಿಲಿ ಮನಸಿಲಿ ನಿನ್ನನು ಸ್ತುತಿಸುವೆ ಧನ್ಯನ ಮಾಡೈ
ಮನ್ನಿಸದಿದ್ದರೆ ಅನ್ಯರ ಕಾಣಿಸು ನಿನ್ನ ನಾ ಬಿಡೆನೈ 3
***