..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಪ್ರಭವನಾಮ ಸಂವತ್ಸರ ಸ್ತೋತ್ರ
ಪದ್ಮನಾಭ ಪದ್ಮೇಶ ಪದ್ಮಸಂಭವ ತಾತ ಮೋದಬಲ ಜ್ಞಾನಾದ್ಯಾಮಲ ಗುಣನಿಧಿಯೇ ಸತ್ಯಜಗತ್ ಸೃಷ್ಟಾದಿ ಕರ್ತನೀನೇ ಪ್ರಭವ ಸಂವತ್ಸರ ನಿಯಾಮಕನು ಸ್ವಾಮೀ ನಮಸ್ತೆ ಪ
ಈ ಪ್ರಭವನಾಮ ನಿನ್ನ ನಿಯಾಮನಿಂ ಸೋಮನು ಈ ಸಂವತ್ಸರರಾಜನು ಮಂಗಳನು ಮಂತ್ರಿಃ ಸಸ್ಯ ಸೈನ್ಯಾಧಿಪರು ಶುಕ್ರ ವಿಧುಧಾನ್ಯಪತಿ ಬುದನು ರಸಪ ರವಿ ನಿರಸಗುರು ಹೀಗೆ ನಾಯಕರು ನವರು 1
ವಿಷ್ಣುನವ ಶ್ರೀನವ ನರವಾಯುನವ ಪತೀಶನÀವ ಶೇಷನವ ಈ ಬಗೆ ನವ ಮೂರ್ತಿ ಅಧಿಕಾರಿಗಳಿಂ ಸ್ಮರಣೀಯ ವರ್ಷನವನಾಯಕರೊಳೆ ವಾಯ್ವುಂತರ್ಗತನಾಗಿ ಶ್ರೀಸಹ ವಿಷ್ಣು ನೀನೆ ಇದ್ದು ಕೃತಿನಡೆಸಿ ಲೋಕವಕಾಯುತಿ2
ಸೋಮ ರಾಜನು ತನ್ನ ವಶದಿ ಸೈನ್ಯ ವೇಘಗಳಿಚ್ಚಿಹನು ಅಮಾತ್ಯತ್ಯ ಕುಜಗಿಹುದು ಶಿಷ್ಟಪಾಲನತಿದುಷ್ಟರ ತಿದ್ದುವುದಕ್ಕೆ ಅಮ್ಮಮ್ಮ ಏನೆಂಬೆ ಅಮೃತಕರ ಸೋಮದಿಯಲ್ಲಿದ್ದು ರಾಜ ರಾಜೇಶ್ವರ ನೀ ಕಮಲಾಸನಪಿತ ಪ್ರಸನ್ನ ಶ್ರೀನಿವಾಸ ಸಂತಾನಾದಿ ಭಾಗ್ಯ ವೀವಿ ಕರುಣಾಳು 3
***