ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಮಾಡಿದಿ ಬಂದು ಈ ನರದೇಹದಿ | ಜ್ಞಾನ ಸಾಧನ ಹೇಳು ಪ
ಭವ | ಕಾನನವಿಡಿದೆಲ್ಲೋ ಅ.ಪ ಮಾನವ ಜನುಮದಿ | ನಿನ್ನ ತಂದನಲ್ಲೋ ಪ್ರಾಣೀ | ಪನ್ನಗಶಯನನ ಘನ್ನ ವಿಶ್ವಾಸದ | ಲಿನ್ನು ವಿರಹಿತಾದೆಲ್ಲೋ ಪ್ರಾಣಿ 1
ಕಂಡಪಥಕ ಹರಿದಂಡಲೆಯದೆನೆಲೆ | ಗೊಂಡವರೊಳು ಕೂಡೋ ಪ್ರಾಣಿ | ಖಂಡಿಸಿ ಸಂಶಯ ಪುಂಡರೀಕಾಕ್ಷನ | ಕೊಂಡಾಡುತ ಬಾಳೋ ಪ್ರಾಣಿ 2
ಹಿಂದಿನ ಮರವಿಗೆ ಇಂದಿಗೆ ನೀರೆರಿ | ಮುಂದ ಸ್ವಹಿತ ನೋಡೋ ಪ್ರಾಣಿ | ತಂದೆ ಮಹಿಪತಿ ನಂದನ ಪ್ರಭುದಯ | ದಿಂದ ಸಾರ್ಥಕ ಮಾಡೋ ಪ್ರಾಣಿ 3
***