Showing posts with label ಪ್ರಧಾನ ಮಾರುತಗೆ ಮಂಗಳಂ ಪಾವನ ಮೂರುತಿಗೆ vijaya vittala. Show all posts
Showing posts with label ಪ್ರಧಾನ ಮಾರುತಗೆ ಮಂಗಳಂ ಪಾವನ ಮೂರುತಿಗೆ vijaya vittala. Show all posts

Wednesday, 16 October 2019

ಪ್ರಧಾನ ಮಾರುತಗೆ ಮಂಗಳಂ ಪಾವನ ಮೂರುತಿಗೆ ankita vijaya vittala

by ವಿಜಯದಾಸ

ಪ್ರಧಾನ ಮಾರುತಗೆ ಪ
ಮಂಗಳಂ ಪಾವನ ಮೂರುತಿಗೆ |
ತ್ರಿವಿಧ ಸತ್ಕೀರ್ತಿಗೆ |
ಮಂಗಳಂ ಸದ್ಗುಣ ಕೀರ್ತಿಗೆ ಅ.ಪ.
ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ |
ಚಿಕ್ಕವನಾಗಿ ಪುರಪೊಕ್ಕವಗೆ ||
ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ |
ನಿಕ್ಕಿಸಿದರಣದ ವಿಷ ಭೋಕ್ತನಿಗೆ 1
ವೃಕೋದರ ಭೀಮಗೆ ವಿಶೋಕನೊಡೆಯಗೆ |
ಬಕ ಜರಾಸಂಧ ಕೀಚಕ ವಧೆ ಮಾಡಿದಗೆ ||
ಸಕಲ ದಳದೊಳಗೆ ನಾಯಕನೇ | ನೀ |
ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ 2
ಒಂದೆ ಅಕ್ಷರದಿಂದ ನಂದ ಕೊಡುವವನಿಗೆ
ಒಂದೆರಡು ಮೂರಾರು ಮುರಿದವಗೆ ||
ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ |
ವಂದಿಸುವ ಶ್ರೀಮದಾನಂದತೀರ್ಥಗೆ 3
*******

---